ನವದೆಹಲಿ: ದೇಶದಲ್ಲಿ ಅತ್ಯಾಚಾರ ಪ್ರಕರಣದ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಸು ಗೂಸಿನಿಂದ ವಯೋವೃದ್ಧ ಮಹಿಳೆಯವರೆಗೂ ಅತ್ಯಾಚಾರ(Physical Abuse) ಎಸಗಲಾಗುತ್ತಿರುವುದು ವೇಶ್ಯಾವಾಟಿಕೆ ಕೃತ್ಯ ಆಗಾಗ ಮುನ್ನಲೆಗೆ ಬರುತ್ತಲೇ ಇದೆ. ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ನಿಯಮಗಳು, ಕಠಿಣ ಶಿಕ್ಷೆ ಜಾರಿಯಲ್ಲಿವೆ. ಹಾಗಿದ್ದರೂ ಇಂತಹ ಪ್ರಕರಣ ಮಾತ್ರ ನಡೆಯುತ್ತಲೇ ಇದೆ. ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ, ತಂದೆ, ಚಿಕ್ಕಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ, ಶಿಕ್ಷಕನಿಂದಲೇ ವಿದ್ಯಾರ್ಥಿನಿ ಮೇಲೆ ಹೀಗೆ ಎಲ್ಲ ಸಂಬಂಧಗಳು ಔನತ್ಯಕ್ಕೆ ಸಾಗುತ್ತಿದೆ. ಅಂತೆಯೇ ಇತ್ತೀಚೆಗಷ್ಟೇ ತನ್ನ ಸ್ವಂತ ತಾಯಿಯ ಮೇಲೆ ಮಗನು ಅತ್ಯಾಚಾರ ಎಸಗಿದ್ದ ಆಘಾತಕಾರಿ ಘಟನೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಖಂಡಿಸಿ ಅನೇಕ ಕಡೆ ಜನರು ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಘಟನೆಗೆ ವ್ಯಾಪಕ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜುಲೈ 17 ರಂದು ಸಂತ್ರಸ್ತೆ, ಹಾಗೂ ಆಕೆಯ ಪತಿ ಮತ್ತು ಕಿರಿಯ ಮಗಳು ತೀರ್ಥಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. 8 ದಿನಗಳ ನಂತರ, ಆರೋಪಿ (ಮಗ) (39 ವರ್ಷ) ತನ್ನ ತಂದೆಗೆ ಫೋನ್ ಮಾಡಿ, ಹಿಂತಿರುಗುವಂತೆ ಕೇಳಿಕೊಂಡನಂತೆ. ಅದರಂತೆ ಆಗಸ್ಟ್ 1 ರಂದು ದೆಹಲಿಗೆ ಎಲ್ಲರೂ ಮರಳಿದ್ದಾರೆ. ಬಳಿಕ ಆಗಸ್ಟ್ 11 ರ ರಾತ್ರಿ 9 ಗಂಟೆಯ ಸುಮಾರಿಗೆ ಆರೋಪಿ ತನ್ನ ತಾಯಿಯ ಬಳಿ ವೈಯಕ್ತಿಕವಾಗಿ ಮಾತನಾಡಬೇಕು ಎಂದು ರೂಮಿಗೆ ಕರೆದುಕೊಂಡು ಹೋದನಂತೆ. ಆ ಮೇಲೆ ಹಲ್ಲೆ ನಡೆಸಿದ್ದು ತಾಯಿಯನ್ನು ಕೋಣೆಯಲ್ಲಿ ಲಾಕ್ ಮಾಡಿದ್ದಾನೆ. ಈ ವೇಳೆ ತನ್ನ ತಾಯಿ ಪರ ಪುರುಷರ ಜೊತೆ ಇದ್ದದ್ದಕ್ಕೆ ಶಿಕ್ಷೆ ನೀಡುವುದಾಗಿ ತನ್ನ ತಂದೆಗೆ ಕೂಡ ತಿಳಿಸಿದ್ದನಂತೆ. ತನ್ನ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದನ್ನು ಸಂತ್ರಸ್ತೆ ತನ್ನ ದೂರಿನಲ್ಲಿ ಉಲ್ಲೇಖಿಸಲಾಗಿದೆ.
65ವರ್ಷದ ಸಂತ್ರಸ್ತೆಯು ತನ್ನ ಪತಿ, ಮಗ ಮತ್ತು ಅವರ ಮಗಳೊಂದಿಗೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆ ನಿವೃತ್ತ ಸರ್ಕಾರಿ ಉದ್ಯೋಗಿ ಯಾಗಿದ್ದಾರೆಂದು ತಿಳಿದು ಬಂದಿದೆ. ಇವರ ಹಿರಿಯ ಮಗಳು ಮದುವೆಯಾಗಿ ಅತ್ತೆ ಮಾವನೊಂದಿಗೆ ವಾಸಿಸುತ್ತಿದ್ದು ಘಟನೆ ವೇಳೆ ಯಾರು ಇರಲಿಲ್ಲ ಎಂಬುದು ತಿಳಿದು ಬಂದಿದೆ. ಸಂತ್ರಸ್ತೆಯ ಪತಿ ಕೆಲಸದ ಉದ್ದೇಶದಿಂದ ವಿದೇಶದಲ್ಲಿದ್ದು ತಾನು ಅನೈತಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ತನ್ನ ಪತಿ ಅನುಮಾನಿಸುತ್ತಿದ್ದರು. ಹೀಗಾಗಿ ತನಗೆ ವಿಚ್ಛೇದನ ನೀಡಲು ಕೂಡ ನಿರ್ಧಾರ ಕೈಗೊಂಡಿದ್ದು ಸೌದಿಯಿಂದ ದೆಹಲಿಗೆ ಬಂದ ಬಳಿಕ ವಿಚ್ಛೇದನ ಪಡೆಯುವ ಮಾತು ಕಥೆಯಾಗಿತ್ತು ಎಂದು ಈ ಬಗ್ಗೆಯೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:Tripura Crime: ಹೆಣ್ಣು ಮಗುವೆಂದು ತಾತ್ಸಾರ...ಮಗಳಿಗೆ ವಿಷವುಣಿಸಿದ ತಂದೆ- ಇದು ಪೊಲೀಸಪ್ಪ ಕ್ರೌರ್ಯದ ಕಥೆ!
ಹಿಂಸಾಚಾರದಿಂದ ಭಯಭೀತರಾದ ಮಹಿಳೆ ಮನೆ ತೊರೆದು ತನ್ನ ಹಿರಿಯ ಮಗಳೊಂದಿಗೆ ವಾಸಿಸುತ್ತಿದ್ದರು. ಬಳಿಕ ಗುರುವಾರ ಬೆಳಗ್ಗೆ 3.30ರ ಸುಮಾರಿಗೆ ಕೊಠಡಿಗೆ ನುಗ್ಗಿದ ಆರೋಪಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೀಗಾಗಿ ಮನನೊಂದು ಸಂತ್ರಸ್ತೆ ತನ್ನ ಕಿರಿಯ ಮಗಳ ಜೊತೆಗೆ ಹೌಜ್ ಖಾಜಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಅಡಿ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ