ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indore couple missing: ಗಂಡನನ್ನು ಕೊಲ್ಲಲು ಏನೆಲ್ಲಾ ಪ್ಲಾನ್‌ ಮಾಡಿದ್ಲು ಗೊತ್ತಾ ಈ ಹಂತಕಿ; ಆರೋಪಿಗಳು ಬಾಯ್ಬಿಟ್ಟ ಸತ್ಯ ಏನು?

ಇಂದೋರ್‌ ಮೂಲದ ದಂಪತಿ ಮೇಘಾಲಯಕ್ಕೆ ಹನಿಮೂನ್‌ಗೆಂದು ಹೋಗಿ ಕಾಣೆಯಾದ ಕೇಸ್‌ ಇಡೀ ದೇಶದಲ್ಲೇ ಸಂಚಲನ ಮೂಡಿಸಿತ್ತು. ತನಿಖೆಯ ಬಳಿಕ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಹಂತಕಿ ಸೋನಂ ಮದುವೆಗೂ ಮುನ್ನವೇ ತನ್ನ ಪ್ರಿಯಕರನ ಜೊತೆಗೂಡಿ ಈ ಪ್ಲಾನ್‌ ಮಾಡಿದ್ದಳು.

ಶಿಲ್ಲಾಂಗ್‌: ಇಂದೋರ್‌ ಮೂಲದ ದಂಪತಿ ಮೇಘಾಲಯಕ್ಕೆ (Indore couple missing) ಹನಿಮೂನ್‌ಗೆಂದು ಹೋಗಿ ಕಾಣೆಯಾದ ಕೇಸ್‌ ಇಡೀ ದೇಶದಲ್ಲೇ ಸಂಚಲನ ಮೂಡಿಸಿತ್ತು. ತನಿಖೆಯ ಬಳಿಕ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಇದೀಗ ಹಂತಕಿ ಸೋನಂ ನಾಟಕ ಬಗೆದಷ್ಟೂ ಹೊರ ಬೀಳುತ್ತಿದೆ. ಈಗಾಗಲೇ ಮೇಘಾಲಯ ಪೊಲೀಸರು ಸೋನಂ ಮತ್ತು ಆಕೆಯ ಪ್ರೇಮಿ ರಾಜ್ ಕುಶ್ವಾಹಾ ಸೇರಿದಂತೆ 5 ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಹಂತಕಿ ಸೋನಂ ಮದುವೆಗೂ ಮುನ್ನವೇ ತನ್ನ ಪ್ರಿಯಕರನ ಜೊತೆಗೂಡಿ ಈ ಪ್ಲಾನ್‌ ಮಾಡಿದ್ದಳು. ಯಾರಿಗೂ ಗೊತ್ತಾಗದೇ ಗೌಪ್ಯವಾಗಿ ಕೊಲೆಯನ್ನು ಮಾಡುವ ಕುರಿತು ಸೋನಂ ತನ್ನ ಪ್ರಿಯಕರಿನಿಗೆ ತಿಳಿಸಿದ್ದಳು. ಸೋನಂ ಮೇಘಾಲಯಕ್ಕೆ ಹನಿಮೂನ್‌ಗೆಂದು ಹೋಗಿ ಪತಿಯನ್ನು ಬರ್ಬರವಾಗಿ ಕೊಲ್ಲಿಸಿದ್ದಳು. ಬಳಿಕ ವೈಸಾಡಾಂಗ್ ಜಲಪಾತದ ಬಳಿ ರಾಜಾ ರಘುವಂಶಿಯ ಶವ ಪತ್ತೆಯಾಗಿತ್ತು. ತದನಂತರ ಪೋಲಿಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆದರು.

ಇದೀಗ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೋಲಿಸರು, ರಾಜ್‌ ಕುಹಾಶ್ವಾ ಮಿತ್ರರಾದ ಆಕಾಶ್ ಠಾಕೂರ್, ಆನಂದ್ ಕುರ್ಮಿ ಮತ್ತು ವಿಶಾಲ್ ಚೌಹಾನ್ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂವರಲ್ಲಿ ಒಬ್ಬನು ರಾಜ್‌ನ ಸಂಬಂಧಿಯಾಗಿದ್ದಾನೆ. ಆರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸದಾಗ ರಾಜ್‌ ಕುಹಾಶ್ವಾ ಗೆಳೆಯರು ಈ ಕೊಲೆ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮದುವೆ ಮಾತುಕತೆಯಾದ ಬಳಿಕ ಫೆಬ್ರುವರಿಯಲ್ಲೇ ಹಂತಕರು ಈ ಸಂಚು ಹೂಡಿದ್ದರು ಎನ್ನುವ ಮಾಹಿತಿ ಇದೀಗ ಹೊರಬಿದ್ದಿದೆ.

ಕೊಲೆ ಮಾಡಿದ ನಂತರ, ಆರೋಪಿಗಳು ಮೂರು ಸ್ಕೂಟರ್‌ನಲ್ಲಿ ಸ್ಥಳದಿಂದ ಬೇರೆ ಬೇರೆ ಮಾರ್ಗವಾಗಿ ಹೊರಟು ಹೋಗಿದ್ದಾರೆ. ಹತ್ಯೆ ಮಾಡಿದ ನಂತರ ಆಕಾಶ್‌ ಶರ್ಟ್‌ಗೆ ರಕ್ತದ ಕಲೆಗಳಾಗಿದ್ದ ಕಾರಣ ಸೋನಂ ಬಿಳಿ ಶರ್ಟ್‌ ನೀಡಿದ್ದಳು. ನಂತರ ಈ ಶರ್ಟ್‌ನ್ನು ಅಲ್ಲೇ ಸಮೀಪದಲ್ಲಿ ಎಸೆಯಲಾಗಿತ್ತು. ಬಳಿಕ ಪೋಲಿಸರಿಗೆ ಅನುಮಾನ ಕಂಡುಬಂದಿದ್ದು, ಜೂನ್ 4ರಂದು ವಶಕ್ಕೆ ಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Honeymoon Murder case: ಬಲಿ ಕೊಡುವ ಕಾಮಾಕ್ಯ ದೇವಾಲಯಕ್ಕೆ ಗಂಡನನ್ನು ಕರೆದುಕೊಂಡು ಹೋದದ್ದೇಕೆ ಸೋನಂ? ಕೊಲೆಯ ಪೂರ್ಣ ವಿವರ ಇಲ್ಲಿದೆ

ಕೊಲೆ ಮಾಡಿಸಿದ ಹಂತಕಿ ಸೋನಂ ಬುರ್ಖಾ ಧರಿಸಿ ಟ್ಯಾಕ್ಸಿಯಲ್ಲಿ ಶಿಲ್ಲಾಂಗ್, ಗುವಾಹಟಿ, ಸಿಲಿಗುಡಿ, ಪಟ್ನಾ, ಆರಾ, ಲಕ್ನೋ ಮೂಲಕ ಇಂದೋರ್‌ಗೆ ತಲುಪಿದ್ದಾಳೆ. ನಂತರ ಮಾಧ್ಯಮ ವರದಿಗಳ ಮೂಲಕ ತನಿಖೆ ತೀವ್ರಗೊಳ್ಳುತ್ತಿರುವುದನ್ನು ಗಮನಿಸಿದ ರಾಜ್ ಕುಹಶ್ವಾ ಸೋನಂನಿಗೆ ಇಂದೋರ್‌ ಬಿಟ್ಟು ಹೋಗುವಂತೆ ಸಲಹೆ ನೀಡಿದ್ದಾನೆ. ಜೂನ್ 8ರಂದು ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ಆರೋಪಿ ಆಕಾಶ್ ಬಂಧನವಾಗಿದೆ. ಇದಾದ ಬಳಿಕ ರಾಜ್ ಕುಹಶ್ವಾ ತಕ್ಷಣ ಸೋನಂಗೆ ಕರೆ ಮಾಡಿ ಅಪಹರಣದಿಂದ ಪಾರಾದಂತೆ ನಟಿಸುವಂತೆ ಹೇಳಿದ್ದಾನೆ. ಈ ಕಾರಣಕ್ಕಾಗಿ ಸೋನಂ ಜೂನ್ 9ರ ಬೆಳಗ್ಗೆ ಯುಪಿಯ ಘಾಜೀಪುರದ ಡಾಬಾವೊಂದರಲ್ಲಿ ಪೋಲಿಸರಿಂದ ಬಂಧನವಾಯಿತು. ಸದ್ಯದ ಮಟ್ಟಿಗೆ ಆರೋಪಿಗಳು ಇಷ್ಟು ಮಾತ್ರ ಬಾಯಿ ಬಿಟ್ಟಿದ್ದಾರೆ. ಇನ್ನು ತನಿಖೆ ಮುಂದುವರೆದಿದೆ.

Vishakha Bhat Heggar

View all posts by this author