ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indore Couple Missing: ಬಾ ನಲ್ಲ ಮಧುಚಂದ್ರಕೆ ಎಂದು ಗಂಡನಿಗೆ ಸ್ಕೆಚ್‌ ಹಾಕಿದ್ಲು.... ಬಗೆದಷ್ಟು ಬಯಲಾಗ್ತಿದೆ ಹಂತಕಿಯ ಸತ್ಯ

ಮೇಘಾಲಯಕ್ಕೆ ಹನಿಮೂನ್‌ಗೆ (Indore Couple Missing) ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ ಪತ್ನಿಯೇ ಸುಪಾರಿ ಕೊಟ್ಟು ತನ್ನ ಪತಿಯನ್ನು ಕೊಂದಿದ್ದಾಳೆ ಎಂದು ತಿಳಿದು ಬಂದಿದೆ. ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು ಮತ್ತು ಮೇ 20 ರ ಹೊತ್ತಿಗೆ ಅವರು ತಮ್ಮ ಹನಿಮೂನ್‌ಗೆ ಎಂದು ಮೇಘಾಲಯಕ್ಕೆ ತೆರಳಿದ್ದರು. ನಂತರ ಇಬ್ಬರು ನಾಪತ್ತೆಯಾಗಿದ್ದರು.

ಇಂಫಾಲ್‌: ಮೇಘಾಲಯಕ್ಕೆ ಹನಿಮೂನ್‌ಗೆ (Indore Couple Missing) ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ ಪತ್ನಿಯೇ ಸುಪಾರಿ ಕೊಟ್ಟು ತನ್ನ ಪತಿಯನ್ನು ಕೊಂದಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ, ಅವರ ವಿವಾಹದ ವೀಡಿಯೊವೊಂದು ಹೊರಬಂದಿದೆ. ಇದರಲ್ಲಿ ರಾಜ ರಘುವಂಶಿ, ಕೆಂಪು ಬನಾರಸಿ ಸೀರೆಯನ್ನು ಧರಿಸಿದ್ದ ಸೋನಂ ಹಣೆಗೆ ಸಿಂದೂರ ಹಚ್ಚಿರುವುದು ಕಂಡುಬಂದಿದೆ.

ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು ಮತ್ತು ಮೇ 20 ರ ಹೊತ್ತಿಗೆ ಅವರು ತಮ್ಮ ಹನಿಮೂನ್‌ಗೆ ಎಂದು ಮೇಘಾಲಯಕ್ಕೆ ತೆರಳಿದ್ದರು. ನಂತರ ಇಬ್ಬರು ನಾಪತ್ತೆಯಾಗಿದ್ದರು. ಜೂ 2 ರಂದು ರಾಜಾ ಅವರ ಶವ ಪತ್ತೆಯಾಗಿತ್ತು. ರಾಜಾ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸೋನಮ್ ತನ್ನ ತಂದೆಯ ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಮದುವೆಯ ಆಭರಣಗಳನ್ನು ಧರಿಸಿದ್ದಳು. ಕೊಲೆ ತನಿಖೆಯಲ್ಲಿ ಸೋನಂ ನಡೆಸಿರುವ ಭಾರೀ ಬ್ಯಾಂಕ್ ವಹಿವಾಟುಗಳು ಕೂಡ ಬೆಳಕಿಗೆ ಬಂದಿದೆ.



ಆಕೆಯ ಬಂಧನದ ನಂತರ ಸೋನಮ್ ರಘುವಂಶಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತನ್ನನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಸೋನಂ ತಾನು ಪ್ರಕರಣದಲ್ಲಿ ಆರೋಪಿಯಲ್ಲ, ಬದಲಾಗಿ ನಿರಪರಾಧಿ ಎಂದು ಹೇಳಿಕೊಂಡಿದ್ದಾಳೆ. ಅಪಹರಣದ ನಂತರ ಉತ್ತರ ಪ್ರದೇಶದ ಘಾಜಿಪುರದಲ್ಲಿ ತನ್ನನ್ನು ಅವರು ಬಿಟ್ಟು ಬಿಟ್ಟರು. ಅಲ್ಲಿಂದ ನಾನು ನನ್ನ ಸಹೋದರನಿಗೆ ಕರೆ ಮಾಡಿದೆ ಎಂದು ಆಕೆ ಆರೋಪಿಸಿದ್ದಾಳೆ. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೇಘಾಲಯ ಪೊಲೀಸರು, ಸೋನಂ ಕೂಡ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಎಂದು ಹೇಳಿದರು. ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಕೊಲೆಗಾರರನ್ನು ನೇಮಿಸಿಕೊಂಡಿದ್ದಳು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Indore Couple Missing: ಮೇಘಾಲಯ ಮಿಸ್ಸಿಂಗ್‌ ಕೇಸ್‌; ಟೂರ್‌ ಗೈಡ್‌ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!

ಸದ್ಯ ಸೋನಂ ಬಂಧನವಾಗಿದ್ದು ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಆಕೆಯ ಪ್ರಿಯತಮನನ್ನೂ ಕೂಡ ಬಂಧಿಸಿದ್ದಾರೆ. ಆಕೆಯ ಗೆಳೆಯ ರಾಜ್ ಕುಶ್ವಾಹನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೇಘಾಲಯ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪೊಲೀಸರು, ಕೊಲೆ ನಡೆದ ಸಮಯದಲ್ಲಿ ಕುಶ್ವಾಹ ರಾಜ್ಯದಲ್ಲಿ ಇರಲಿಲ್ಲ ಆತ ಹೊರಗಿದ್ದುಕೊಂಡೇ ಕೊಲೆಗೆ ಪ್ಲಾನ್‌ ಮಾಡಿದ್ದ ಎಂದು ಊಹಿಸಲಾಗಿದೆ.

Vishakha Bhat Heggar

View all posts by this author