ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಹೆತ್ತವರನ್ನು ಸ್ವರ್ಗಕ್ಕೆ ಕಳುಹಿಸಿದ್ದೇನೆ”: ಪೋಷಕರನ್ನು ಇರಿದು ಹತ್ಯೆಗೈದ ಪಾಪಿ ಪುತ್ರನ ಹೇಳಿಕೆಗೆ ಬಿಚ್ಚಿಬಿದ್ದ ಪೊಲೀಸರು

Crime News: 29 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳಂನ ಇಡುಕ್ಕಿಯಲ್ಲಿ ನಡೆದಿದೆ. ಮದ್ಯ ಮತ್ತು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಅಜೀಶ್, ಈ ಹಿಂದೆ ವ್ಯಸನ ಮುಕ್ತ ಶಿಬಿರಕ್ಕೆ ದಾಖಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಆ. 16: 29 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳಂನ (Keralam) ಇಡುಕ್ಕಿಯಲ್ಲಿ ನಡೆದಿದೆ. ಶುಕ್ರವಾರ (ಆ. 14)ರ ರಾತ್ರಿ 9.30ರ ಸುಮಾರಿಗೆ ಎಳುಕುಮ್ವಾಯಲ್‌ನಲ್ಲಿರುವ ಅವರ ನಿವಾಸದಲ್ಲಿ ಅಜೀಶ್ ಎಂಬಾತ ತನ್ನ ತಂದೆ ಆ್ಯಂಟನಿ (59) ಮತ್ತು ತಾಯಿ ವಲ್ಸಮ್ಮ (55) ಅವರನ್ನು ಹತ್ಯೆ ಮಾಡಿದ್ದಾನೆ (Crime News). ಮದ್ಯ ಮತ್ತು ಮಾದಕ ದ್ರವ್ಯ ಸೇವಿಸುತ್ತಿದ್ದ ಅಜೀಶ್, ಈ ಹಿಂದೆ ವ್ಯಸನ ಮುಕ್ತ ಶಿಬಿರಕ್ಕೂ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಿಬಿರದಿಂದ ಹಿಂದಿರುಗಿದ ನಂತರ, ಅವನು ಪದೇ ಪದೆ ತನ್ನ ಹೆತ್ತವರೊಂದಿಗೆ ಜಗಳವಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ವೇಳೆ ಜಗಳ ವಿಕೋಪಕ್ಕೆ ತಿರುಗಿದೆ. ಆರೋಪಿಯು ತನ್ನ ಹೆತ್ತವರನ್ನು ಹಲವು ಬಾರಿ ಇರಿದಿದ್ದಾನೆ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನ ತಂದೆ-ತಾಯಿಯ ವಿಡಿಯೊವನ್ನು ರೆಕಾರ್ಡ್ ಮಾಡಿ ಸಂಬಂಧಿಕರಿಗೆ ಕಳುಹಿಸಿದ್ದಾನೆ. ಸಂಬಂಧಿಗಳು ಕೂಡಲೇ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ಧಾವಿಸಿ ನೋಡಿದಾಗ ದಂಪತಿ ಮೃತಪಟ್ಟಿರುವುದು ಕಂಡುಬಂದಿದೆ.

ಭೀಮಾ ತೀರದಲ್ಲಿ ಮತ್ತೆ ಹಂತಕರ ಅಟ್ಟಹಾಸ: ನಿವೃತ್ತ ಶಿಕ್ಷಕನ ಭೀಕರ ಹತ್ಯೆ: ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ

ದೇವರಿಂದ ಕರೆ ಬಂದ ನಂತರ ತನ್ನ ಹೆತ್ತವರನ್ನು ಸ್ವರ್ಗಕ್ಕೆ ಕಳುಹಿಸಿರುವುದಾಗಿ ಬಂಧನದ ನಂತರ, ಅಜೀಶ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಮನೆಯಲ್ಲಿದ್ದ ತನ್ನ ಅಜ್ಜಿಗೆ ಅವನು ಯಾವುದೇ ತೊಂದರೆ ಮಾಡಿಲ್ಲ. ಅಜೀಶ್‌ನ ಅಜ್ಜಿಗೆ ಶ್ರವಣ ಮತ್ತು ದೃಷ್ಟಿ ಸಮಸ್ಯೆ ಇದ್ದು, ಹಾಸಿಗೆ ಹಿಡಿದಿದ್ದಾರೆ. ಸಂಬಂಧಿಕರು ಮನೆಗೆ ತಲುಪಿದ ನಂತರವೇ ಘಟನೆಯ ಬಗ್ಗೆ ತಿಳಿದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷ್ಯ ಸಂಗ್ರಹಿಸಲು ತನಿಖಾಧಿಕಾರಿಗಳನ್ನು ಆರೋಪಿ ಅಜೀಶ್‌ನನ್ನು ಮನೆಗೆ ಕರೆದೊಯ್ದಾಗ, ಅವನು ತನ್ನ ತಾಯಿಯ ಬಗ್ಗೆ ಕೇಳಲು ಪ್ರಾರಂಭಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಕೊಲೆ ಪ್ರಕರಣ ದಾಖಲಿಸಿಕೊಂಡ ನೆಡುಂಕಂಡಂ ಪೊಲೀಸರು ಅಜೀಶ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ಸಹೋದರ ವಿದೇಶದಿಂದ ಹಿಂದಿರುಗಿದ ನಂತರ ಅಂತ್ಯಕ್ರಿಯೆ ನಡೆಯಲಿದೆ.