ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಅಂತರ್ಧರ್ಮೀಯ ಪ್ರೀತಿ ಮಾಡಿದ ಎಸ್‌ಎಸ್‌ಎಲ್‌ಸಿಯ ಹುಡುಗ-ಹುಡುಗಿ ಆತ್ಮಹತ್ಯೆ

ಇಬ್ಬರೂ 16 ವರ್ಷದವರು ಹಾಗೂ 10ನೇ ತರಗತಿ ವಿದ್ಯಾರ್ಥಿಗಳು. ಹೊಲದಲ್ಲಿರುವ ಮರದಲ್ಲಿ ಇಬ್ಬರ ಶವ ಒಂದೇ ಹಗ್ಗದಿಂದ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರ ಕುಟುಂಬಗಳಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿರಲಿಲ್ಲ.

ಅಂತರ್ಧರ್ಮೀಯ ಪ್ರೀತಿ ಮಾಡಿದ ಎಸ್‌ಎಸ್‌ಎಲ್‌ಸಿಯ ಹುಡುಗ-ಹುಡುಗಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 10, 2025 1:14 PM

ಕಲಬುರಗಿ: ಕಲಬುರಗಿ (Kalburagi news) ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ (SSLC) ಬಾಲಕ ಮತ್ತು ಬಾಲಕಿ ಶನಿವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕ ಮತ್ತು ಅಲ್ಪಸಂಖ್ಯಾತ ಸಮುದಾಯದ (Inter religion) ಬಾಲಕಿಯ ಮೃತದೇಹಗಳು ಮಲ್ಲಿ-ಐನಾಪುರ ರಸ್ತೆಯ ಹೊಲದಲ್ಲಿ ಪತ್ತೆಯಾಗಿವೆ.

ಬಾಲಕ ನಾಗರಹಳ್ಳಿ ಗ್ರಾಮದವನಾಗಿದ್ದರೆ, ಹುಡುಗಿ ಮಲ್ಲಿ ಗ್ರಾಮದವಳು. ಇಬ್ಬರೂ 16 ವರ್ಷದವರು ಹಾಗೂ 10ನೇ ತರಗತಿ ವಿದ್ಯಾರ್ಥಿಗಳು. ಹೊಲದಲ್ಲಿರುವ ಮರದಲ್ಲಿ ಇಬ್ಬರ ಶವ ಒಂದೇ ಹಗ್ಗದಿಂದ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರ ಕುಟುಂಬಗಳಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿರಲಿಲ್ಲ. ಶುಕ್ರವಾರ ರಾತ್ರಿ ಹುಡುಗಿ ಮನೆಯಲ್ಲಿ ಮಲಗಿದ್ದಳು. ಆದರೆ ಶನಿವಾರ ಬೆಳಗ್ಗೆ ನೋಡಿದರೆ ಮನೆಯಲ್ಲಿ ಇರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಯಲು ಶೌಚಕ್ಕೆ ಹೋಗಿದ್ದಾಳೆಂದು ಬಾಲಕಿ ಕುಟುಂಬ ಸದಸ್ಯರು ಭಾವಿಸಿದ್ದರು. ಆದರೆ ನಂತರ, ಹುಡುಗಿ ಮತ್ತು ಹುಡುಗ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂತು. ಇಬ್ಬರ ಕುಟುಂಬ ಸದಸ್ಯರು ಸ್ಥಳಕ್ಕೆ ಬಂದು ಶವಗಳನ್ನು ತೆಗೆದುಕೊಂಡು ಅಂತಿಮ ವಿಧಿವಿಧಾನ ನೆರವೇರಿಸಿದರು. ಅಂತ್ಯಕ್ರಿಯೆಯ ನಂತರವೇ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ದೊರೆತಿದೆ. ಎರಡೂ ಕುಟುಂಬಗಳು ಘಟನೆಯ ಬಗ್ಗೆ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಹುಡುಗಿಯ ಕುಟುಂಬ ಆಕೆಗೆ ಮದುವೆ ಮಾಡಲು ಯೋಜಿಸುತ್ತಿತ್ತು. ಇದರಿಂದ ಬೇಸತ್ತು ಬಾಲಕಿ ತನ್ನ ಗೆಳೆಯನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಲ್ಲಿ ಹಿಟ್ & ರನ್‌ಗೆ ಬೈಕ್‌ ಸವಾರ ಬಲಿ

ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನ ಗಾಂಧಿನಗರದ ಜಂಕ್ಷನ್ ಬಳಿ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೊಲೆರೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಬೊಲೆರೋ ವಾಹನದ ವಿವರಗಳು ದಾಖಲಾಗಿದ್ದು, ಪೊಲೀಸರು ಚಾಲಕನ ವಶಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Shocking News: ಅಸೌಖ್ಯ ಗುಣಪಡಿಸಲು ಅಗರಬತ್ತಿಯಿಂದ ಸುಟ್ಟ ತಾಯಿ, ಮಗು ಸಾವು