ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stone pelting: ಬನಾರಸ್‌ ವಿಶ್ವವಿದ್ಯಾಲಯ ಕೊತಕೊತ; ವಿದ್ಯಾರ್ಥಿ , ಸಿಬ್ಬಂದಿಯ ನಡುವೆ ಘರ್ಷಣೆ, ಕಲ್ಲು ತೂರಾಟ

ವಾರಣಾಸಿಯ ಬಿರ್ಲಾ ಹಾಸ್ಟೆಲ್‌ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳ ನಡುವೆ ಘರ್ಷಣೆಯಾಗಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣದಲ್ಲಿ ಇಬ್ಬರು ಅರೆಸ್ಟ್‌ ಆಗಿದ್ದಾರೆ.

ಬನಾರಸ್‌ ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)

ವಾರಣಾಸಿ: ಬಿರ್ಲಾ ಸಿ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮತ್ತು ವಿಶ್ವದ್ಯಾಲಯದ ಪ್ರಾಕ್ಟೋರಿಯಲ್‌ (Stone pelting) ಮಂಡಳಿಯ ಸಿಬ್ಬಂದಿಗಳ ನಡುವೆ ತೀವ್ರವಾದ ಹಿಂಸಾತ್ಮಕ ಘರ್ಷಣೆ ನಡೆದಿದೆ. ಆ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಲಂಕಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಆವರಣಕ್ಕೆ ಪೊಲೀಸ್‌ ತಂಡ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದೆ. ಎರಡೂ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಅಂಕಿತ್‌ ಪಾಲ್‌ ಮತ್ತು ಅಂಕಿತ್‌ ಸಿಂಗ್‌ ಎಂಬುವವರನ್ನು ವಶಕ್ಕೆ ಪಡೆದ ಬಳಿಕ ಬುಧವಾರ ಬಿಎಚ್‌ಯು ಪ್ರೊಕ್ಟೋರಿಯಲ್‌ ಮಂಡಲಿ ದೂರು ದಾಖಲಿಸಿದೆ ಎಂದು ಲಂಕಾ ಪೋಲಿಸ್‌ ಠಾಣೆಯ ಉಸ್ತುವಾರಿ ರಾಜಕುಮಾರ್‌ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ. ಬಿಎಚ್‌ಯು ಕ್ಯಾಂಪಸ್‌ನ ಹಾಸ್ಟೆಲ್‌ ರಸ್ತೆಯಲ್ಲಿ ಪೊಲೀಸ್‌ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಮತ ಚಲಾಯಿಸಲು ಬಂದಿದ್ದ ಡಿಸಿಎಂ ಮೇಲೆ ಚಪ್ಪಲಿ, ಕಲ್ಲು ತೂರಾಟ; ವಿಡಿಯೋ ವೈರಲ್‌

ಇದಕ್ಕೂ, ಮುಂಚಿತವಾಗಿ ಮಧ್ಯರಾತ್ರಿಯ ಸುಮಾರಿಗೆ ರಾಜಾರಾಮ್‌ ಹಾಸ್ಟೆಲ್‌ ಬಳಿಯ ಬಿರ್ಲಾ ಸಿ ಹಾಸ್ಟೆಲ್‌ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದಕ್ಕೆ ಪ್ರತಿಯಾಗಿ ಬಿರ್ಲಾ ಸಿ ಹಾಸ್ಟೆಲ್‌ನವರು ಈ ಬಗ್ಗೆ ದೂರು ನೀಡಲು ಪ್ರೊಕ್ಟೋರಿಯಲ್‌ ಮಂಡಳಿ ಕಛೇರಿಗೆ ತಲುಪಿದಾಗ ವಿದ್ಯಾರ್ಥಿಗಳು ಮತ್ತು ಮಂಡಳಿಯ ಭದ್ರತಾ ಸಿಬ್ಬಂಧಿ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂದುವರೆದು ಮಾತಿನ ಭರದಲ್ಲಿ ಸನ್ನೀವೇಶ ಕಲ್ಲು ತೂರಾಟದ ಹಂತಕ್ಕೆ ಹೋಗಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಕ್ಷಣವೇ ಪೋಲಿಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕಳುಹಿಸಿ ಬಳಿಕ ಹಾಸ್ಟೆಲ್‌ ತಲುಪುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್‌ ಮಾಡಿದ್ದಾರೆ.

ಎರಡೂ ಗಂಟೆಗೂ ಹೆಚ್ಚು ಹೊತ್ತು ನಡೆದ ಈ ಹೈಡ್ರಾಮದ ಬಳಿಕ ಪರಿಸ್ಥಿತಿ ತಿಳಿಯಾಗಿದೆ ಎಂದು ಎಸಿಪಿ ಭೇಲುಪುರ ಗೌರವ್‌ ತಿಳಿಸಿದ್ದಾರೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಕ್ಟೋರಿಯಲ್‌ ಮಂಡಳಿ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಇನ್ನು ಸದ್ಯ ಪೊಲೀಸರ ಅತಿಥಿಯಾಗಿರುವ ಅಂಕಿತ್‌ ಪಾಲ್‌ ಕುರಿತ ತನಿಖೆ ಮುಂದುವರೆದಿದೆ.