ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಾಲೆಯ ಮೊದಲ ದಿನವೇ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ದಾಳಿ

ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ದುರಂತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಬಿಕಾನೆರ್ ಜಿಲ್ಲೆಯಲ್ಲಿ ನಡೆದಿದೆ. ಶ್ರೀದುಂಗರ್ಗಢ ಪ್ರದೇಶದ ಉಪ್ನಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಮಾದರಿ ಶಾಲೆಯಲ್ಲಿ ಈ ದುರಂತ ನಡೆದಾಗ ಶಾಲೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.

ಸಂಗ್ರಹ ಚಿತ್ರ

ರಾಜಸ್ಥಾನ: ಶಾಲೆಗೆಂದು ಬಂದ ಮೊದಲ ದಿನವೇ ಮಗುವಿನ ಮೇಲೆ ಬೀದಿ ನಾಯಿಗಳು (Stray dogs bite) ದಾಳಿ ನಡೆಸಿರುವ ದುರಂತ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. ಬಿಕಾನೆರ್ (Bikaner school) ಜಿಲ್ಲೆಯ ಶ್ರೀದುಂಗರ್ಗಢ ಪ್ರದೇಶದ ಉಪ್ನಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಮಾದರಿ ಶಾಲೆಯಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು (dogs attack) ದಾಳಿ ನಡೆಸಿವೆ. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ದ್ವಾರ ತೆರೆದಿದ್ದು, ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ. ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಕಾನೆರ್ ಜಿಲ್ಲೆಯ ಶ್ರೀದುಂಗರ್ಗಢ ಪ್ರದೇಶದ ಉಪ್ನಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಮಾದರಿ ಶಾಲೆ ಆವರಣದಲ್ಲಿ ಬುಧವಾರ ಬೆಳಗ್ಗೆ ಬೀದಿ ನಾಯಿಗಳು ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿವೆ. ಮಗು ತನ್ನ ಅಣ್ಣನೊಂದಿಗೆ ಮೊದಲ ಬಾರಿಗೆ ಶಾಲೆಗೆ ಬಂದಿದ್ದು, ಅವನು ತನ್ನ ತರಗತಿಗೆ ಹೋಗಿದ್ದನು. ಸುಮಾರು ಒಂದೂವರೆ ಗಂಟೆಗಳ ಅನಂತರ ಅವನು ತರಗತಿಯಿಂದ ಹೊರಬಂದಾಗ ಘಟನೆ ಬೆಳಕಿಗೆ ಬಂದಿದೆ.

Kidnap case: ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಐಶ್ವರ್ಯಾ ಸೇರಿ 11 ಮಂದಿ ಆರೆಸ್ಟ್

ಶಾಲೆಯ ಮುಖ್ಯ ದ್ವಾರ ತೆರೆದಿದ್ದು, ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಬೀದಿ ನಾಯಿಗಳು ಕ್ಯಾಂಪಸ್ ಆವರಣದೊಳಗೆ ನುಗ್ಗಿ ಗೇಟ್ ಬಳಿ ನಿಂತಿದ್ದ ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕಿರುಚಾಟ ಕೇಳಿ ಸ್ಥಳೀಯಾರೊಬ್ಬರೂ ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸಿ ತಕ್ಷಣ ಪಿಬಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಾಯಿ ಕಡಿತದಿಂದ ಮಗುವಿನ ತಲೆಗೆ ಆಳವಾದ ಗಾಯಗಳಾಗಿವೆ. ಮಗುವಿನ ನೆತ್ತಿ ಹರಿದು ಹೋಗಿದ್ದು, ಗಾಯಗಳನ್ನು ಪದೇ ಪದೇ ಸ್ವಚ್ಛಗೊಳಿಸಬೇಕಿದೆ. ಚಿಕಿತ್ಸೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿನ ದೇಶದ್ರೋಹ ಚಟುವಟಿಕೆ ಆರೋಪ: ತನಿಖೆಗೆ ಪ್ರೌಢ ಶಿಕ್ಷಣ ಇಲಾಖೆ ಆದೇಶ

ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಉಂಟು ಮಾಡಿದೆ. ಬೀದಿ ನಾಯಿಗಳ ಬಗ್ಗೆ ಈಗಾಗಲೇ ದೂರುಗಳನ್ನು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಲೆಯಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೇ ಇರುವಾಗ ಮುಖ್ಯ ದ್ವಾರ ತೆರೆದಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕಲಬುರಗಿ ನಗರದ ದೇವಿನಗರ ಬಡಾವಣೆಯಲ್ಲಿ ಐದು ಮಕ್ಕಳ ಮೇಲೆ ನಾಯಿ ದಾಳಿ ನಡೆಸಿತ್ತು. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡಿದ ಬೀದಿ ನಾಯಿ ಮಕ್ಕಳ ಕಣ್ಣು, ಕಿವಿ ಹಾಗೂ ಎದೆ ಭಾಗಗಳಿಗೆ ಕಚ್ಚಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಮಕ್ಕಳನ್ನು ತಕ್ಷಣವೇ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸ್ಥಳೀಯರು ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author