ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತಿ ಅಕ್ರಮ ಸಂಬಂಧ ಹೊಂದಿರುವ ಶಂಕೆ; ಕಾಫಿಯಲ್ಲಿ ಅಮಲು ಪದಾರ್ಥ ಬೆರೆಸಿ ಖಾಸಗಿ ಅಂಗಕ್ಕೆ ಚಾಕುವಿನಿಂದ ಇರಿದ ಪತ್ನಿ

Meerut Crime: ಅಕ್ರಮ ಸಂಬಂಧದ ಶಂಕೆಯಿಂದ ಮಹಿಳೆ ಕಾಫಿಯಲ್ಲಿ ಪತಿಗೆ ಅಮಲು ಪದಾರ್ಥ ಬೆರೆಸಿಕೊಟ್ಟು ಖಾಸಗಿ ಅಂಗಕ್ಕೆ ಚಾಕುವಿನಿಂದ ಚುಚ್ಚಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಕ್ತ ಸೋರುತ್ತಲೇ ಆಸ್ಪತ್ರೆಗೆ ತೆರಳಿದ ವ್ಯಕ್ತಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಘಟನೆ ಸಂಭವಿಸಿದೆ.

ಮೆಟಾಎಐ ರಚಿತ ಚಿತ್ರ

ಲಖನೌ, ಅ. 9: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಹಲವು ಅಪರಾಧಗಳಿಗೆ ಕಾರಣವಾಗುತ್ತಿದೆ. ಮಕ್ಕಳಿದ್ದರೂ ಸಂಗಾತಿಗೆ ಮೋಸ ಮಾಡುವ ಪ್ರಕರಣ ಪದೇ ಪದೆ ವರದಿಯಾಗುತ್ತಲೇ ಇದೆ. ಇದೀಗ ಅಂತಹದ್ದೇ ವಿಚಿತ್ರ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಮಹಿಳೆ ಕಾಫಿಯಲ್ಲಿ ಆತನಿಗೆ ಅಮಲು ಪದಾರ್ಥ ಬೆರೆಸಿಕೊಟ್ಟು ಖಾಸಗಿ ಅಂಗಕ್ಕೆ ಚಾಕುವಿನಿಂದ ಚುಚ್ಚಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಕ್ತ ಸೋರುತ್ತಲೇ ಆಸ್ಪತ್ರೆಗೆ ತೆರಳಿದ ವ್ಯಕ್ತಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut Crime) ಘಟನೆ ಸಂಭವಿದ್ದು, ತನಿಖೆ ಆರಂಭವಾಗಿದೆ.

ಸದ್ಯ ಹಲ್ಲೆಗೊಳಗಾದ ಪತಿ ಮೀರತ್‌ನ ಲಿಸಾಡಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪತ್ನಿ ಚಾಕುವಿನಿಂದ ತನ್ನ ಖಾಸಗಿ ಅಂಗಕ್ಕೆ ಇರಿದಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಿಮಿಷಾ ಕೊಲೆ ಆರೋಪಿ ಆಸಿಫ್ ಅಲಿ ಪರಾರಿಯಾಗಲು ಯತ್ನ; ಗುಂಡೇಟು

ಘಟನೆ ವಿವರ

ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ʼʼವ್ಯಕ್ತಿಯನ್ನು ಕರೆ ತರುವಾಗ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವವಾಗಿದ್ದು, ಗಾಯಕ್ಕೆ ಚಿಕಿತ್ಸೆ ಆರಂಭಿಸಿದ್ದೇವೆʼʼ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರದಲ್ಲಿ ಆರಂಭವಾದ ವಾಗ್ವಾದ ಹಲ್ಲೆಗೆ ಕಾರಣವಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ಲಿಸಾಡಿ ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಝೈದ್‌ ಗಾರ್ಡನ್‌ ನಿವಾಸಿ ಎಂದು ಗುರುತಿಸಲಾಗಿದೆ. ಮದುವೆಯಾಗಿ ಕೆಲವು ವರ್ಷವಾಗಿದ್ದರೂ ಪತ್ನಿ ಆತನ ನಡವಳಿಕೆ ಬಗ್ಗೆ ಸಂಶಯ ಹೊಂದಿದ್ದಳು. ಈ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಆತ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದ ಎಂದು ಪತ್ನಿ ದೂರಿದ್ದಾಳೆ. ಇದೇ ವಿಚಾರಕ್ಕೆ ಸಂಬಂಧಿಸಿ ದಂಪತಿಗೆ ಮತ್ತೆ ಆಗಾಗ ಜಗಳವಾಗುತ್ತಿತ್ತು.

ಚಾಕುವಿನಿಂದ ದಾಳಿ

ದೂರಿನ ಪ್ರಕಾರ ಜಗಳದ ನಂತರ ಮಹಿಳೆ ಕಾಫಿಗೆ ಅಮಲು ಪದಾರ್ಥ ಬೆರೆಸಿ ಪತಿಗೆ ನೀಡಿದ್ದಳು. ಆತ ಪ್ರಜ್ಞೆ ತಪ್ಪಿ ಬಿದ್ದ ನಂತರ ಚಾಕುವಿನಿಂದ ಆತನ ಖಾಸಗಿ ಅಂಗಕ್ಕೆ ಇರಿದಿದ್ದಳು. ಇದರಿಂದ ಆತನಿಗೆ ಗಂಭೀರ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡು ಬಿದ್ದಿದ್ದ ಆತನ ರೋಧನೆ ಕೇಳಿ ತಾಯಿ ಮತ್ತು ಸಹೋದರಿ ರೂಮ್‌ಗೆ ಧಾವಿಸಿದ ವೇಳೆಗಾಗಲೇ ಪತ್ನಿ ಮನೆಯಿಂದ ಹೊರಟು ಹೋಗಿದ್ದಳು. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮದುವೆ ಪ್ರಸ್ತಾವ ನಿರಾಕರಿಸಿದ 22 ವರ್ಷದ ಯುವತಿಗೆ ನರಕ ದರ್ಶನ; ಆ್ಯಸಿಡ್ ದಾಳಿ

ದೂರು ದಾಖಲು

ಸಂತ್ರಸ್ತ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸರ್ಕಲ್‌ ಆಫೀಸರ್‌ ಕೊಟ್ವಾಲಿ ಸಂಗ್ರಾಮ್‌ ಸಿಂಗ್‌ ಮಾಹಿತಿ ನೀಡಿ, ʼʼಈ ಘಟನೆ ಅಕ್ಟೋಬರ್‌ 8ರಂದು ನಡೆದಿದೆ. ಪತಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾಳೆ. ದೂರು ದಾಖಲಿಸಿಕೊಂಡಿದ್ದು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author