ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುವೇಂದು ಅಧಿಕಾರಿ ಸಹಾಯಕನ ಹತ್ಯೆ ಪ್ರಕರಣ: ಘಾಜಿಪುರದ ವ್ಯಕ್ತಿಯ ಬಂಧನ

ವಿಧಾನ ಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ನಡೆದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಸಹಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 5ಕ್ಕೆ ಏರಿದೆ. ವಾರಣಾಸಿಯ ನೆರೆಯ ಘಾಜಿಪುರ ಜಿಲ್ಲೆಯ ನಿವಾಸಿ ವಿನಯ್ ರೈ ಬಂಧನಕ್ಕೊಳಗಾದ ಐದನೇ ಆರೋಪಿ.

ಸಂಗ್ರಹ ಚಿತ್ರ

ವಾರಾಣಸಿ: ಪಶ್ಚಿಮ ಬಂಗಾಳದ (west bengal) ಮುಖ್ಯಮಂತ್ರಿ ಸುವೇಂದು ಅಧಿಕಾರಿಯ (CM Suvendu Adhikari,) ಸಹಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐದನೇ ಆರೋಪಿಯನ್ನು ಕೇಂದ್ರ ತನಿಖಾ ದಳ (Central Bureau of Investigation) ಮಂಗಳವಾರ ಬಂಧಿಸಿದೆ. ವಿಧಾನ ಸಭಾ ಚುನಾವಣೆಯ (assembly election) ಫಲಿತಾಂಶ ಘೋಷಣೆಯಾದ ಮೇಲೆ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಸೋಮವಾರ ಉತ್ತರ ಪ್ರದೇಶದ ಮುಜಾಫರ್ ನಗರದ ರಾಜ್ ಕುಮಾರ್ ಸಿಂಗ್ ನನ್ನು ಬಂಧಿಸಲಾಗಿದ್ದು, ಇದರ ಬಳಿಕ ವಾರಣಾಸಿಯ (Varanasi) ನೆರೆಯ ಘಾಜಿಪುರ ಜಿಲ್ಲೆಯ ನಿವಾಸಿ ವಿನಯ್ ರೈ ಎಂಬಾನನ್ನು ಬಂಧಿಸಲಾಗಿದೆ.

ಬಿಜೆಪಿ ನಾಯಕ ಮತ್ತು ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಗೆ ಸಂಬಂಧಿಸಿ ಉತ್ತರ ಪ್ರದೇಶದ ಮುಜಾಫರ್ ನಗರದ ರಾಜ್ ಕುಮಾರ್ ಸಿಂಗ್ ಎಂಬಾತನನ್ನು ಸೋಮವಾರ ಸಿಬಿಐ ಬಂಧಿಸಿತ್ತು. ರಾಜ್ ಕುಮಾರ್ ಸಿಂಗ್ ನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಇದರ ಬಳಿಕ ವಾರಣಾಸಿಯ ನೆರೆಯ ಘಾಜಿಪುರ ಜಿಲ್ಲೆಯ ನಿವಾಸಿ ವಿನಯ್ ರೈ ಎಂಬಾತನನ್ನು ಕೇಂದ್ರ ತನಿಖಾ ಸಂಸ್ಥೆ ಮಂಗಳವಾರ ವಶಕ್ಕೆ ಪಡೆದಿದೆ .

ಟ್ರಾನ್ಸ್‌ಫಾರ್ಮರ್ ವಿದ್ಯುತ್ ಸ್ಪರ್ಶ: ಹಸು ಸಾವು, ಗೌರಮ್ಮ ಅಪಾಯದಿಂದ ಪಾರು

ಈ ಕುರಿತು ಮಾಹಿತಿ ನೀಡಿರುವ ತನಿಖಾಧಿಕಾರಿಗಳು ಹೈ ಪ್ರೊಫೈಲ್ ಹತ್ಯೆ ಪ್ರಕರಣವಾಗಿರುವ ಚಂದ್ರನಾಥ್ ರಥ್ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿ ವಿನಯ್ ರೈ ನನ್ನು ಕೋಲ್ಕತ್ತಾಗೆ ಕರೆದುಕೊಂಡು ಹೋಗಿ ಅಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಆರಂಭದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ತನಿಖೆ ನಡೆಸುತ್ತಿದ್ದು, ಬಳಿಕ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐಗೆ ವಹಿಸಲಾಗಿತ್ತು. ತನಿಖೆ ವರ್ಗಾವಣೆ ಔಪಚಾರಿಕವಾಗಿ ನಡೆಯುವ ವೇಳೆ ಐವರ ಬಂಧನವಾಗಿದೆ. ಇದಕ್ಕೂ ಮೊದಲು ಮಾಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ ಮತ್ತು ರಾಜ್ ಸಿಂಗ್ ಎಂಬ ಮೂವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ಮಿಶ್ರಾ ಮತ್ತು ಮೌರ್ಯ ಎಂಬವರನ್ನು ಬಿಹಾರದ ಬಕ್ಸಾರ್‌ನಲ್ಲಿ, ರಾಜ್ ಸಿಂಗ್ ಎಂಬಾತನನ್ನು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬಂಧಿಸಲಾಗಿತ್ತು.

Shivam Associates Scam: ಬಹುಕೋಟಿ ವಂಚನೆ ಆರೋಪ; ಶಿವಾನಂದ ನೀಲಣ್ಣವರ್‌ ವಿರುದ್ಧ ಕಾಗವಾಡದಲ್ಲಿ ಕೇಸ್‌ ದಾಖಲು

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಮೇಲೆ ಮೇ 6 ರಂದು ಕೋಲ್ಕತ್ತಾ ಬಳಿಯ ಮಧ್ಯಮಗ್ರಾಮದಲ್ಲಿ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ವಿದ್ಯಾ ಇರ್ವತ್ತೂರು

View all posts by this author