ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

5 ವರ್ಷಗಳ ಶ್ರಮವನ್ನೇ ಕದ್ದರು: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೊನೆಯ ವಿಡಿಯೊದಲ್ಲಿ ಬೇಸರ ತೋಡಿಕೊಂಡ 'ಫೈನಾನ್ಸ್ ವಿತ್ ಹರೀಶ್' ಖ್ಯಾತಿಯ ಇನ್‌ಫ್ಲುಯೆನ್ಸರ್‌

ಸಾಮಾಜಿಕ ಮಾಧ್ಯಮ ಪ್ರಭಾವಿ 'ಫೈನಾನ್ಸ್ ವಿತ್ ಹರೀಶ್' ಖ್ಯಾತಿಯ ವಿ. ಹರೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಾಯುವುದಕ್ಕೂ ಮೊದಲು ಮಾಡಿರುವ ಕೊನೆಯ ವಿಡಿಯೊದಲ್ಲಿ ತಮ್ಮ ಐದು ವರ್ಷಗಳ ಪರಿಶ್ರಮವನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹರೀಶ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.3 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.

ಸಂಗ್ರಹ ಚಿತ್ರ

ಬೆಂಗಳೂರು: ಸೈಬರ್ ಕಿರುಕುಳಕ್ಕೆ (Cyber ​​Harassment) ಒಳಗಾಗಿ 'ಫೈನಾನ್ಸ್ ವಿತ್ ಹರೀಶ್' (Finance With Harish) ಖ್ಯಾತಿಯ ಇನ್‌ಫ್ಲುಯೆನ್ಸರ್‌ (finance influencer) ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ತಮ್ಮ ಐದು ವರ್ಷಗಳ ಪರಿಶ್ರಮವನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ 'ಫೈನಾನ್ಸ್ ವಿತ್ ಹರೀಶ್' ಎಂಬ ಜನಪ್ರಿಯ ಸಾಮಾಜಿಕ ಮಾಧ್ಯಮ ಬ್ರ್ಯಾಂಡ್ ಅನ್ನು ನಡೆಸುತ್ತಿದ್ದ ವಿ. ಹರೀಶ್ (27) ಅವರು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿ ಚೆನ್ನೈನಲ್ಲಿರುವ (chennai) ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಹರೀಶ್ ಅವರ ತಂದೆ, ಇನ್‌ಸ್ಟಾಗ್ರಾಮ್‌ನಲ್ಲಿ 1.3 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ತಮ್ಮ ಮಗನನ್ನು ಗುರಿಯಾಗಿಸಿಕೊಂಡು ವೆಂಚರ್ ಸ್ಟುಡಿಯೋ 'ಜೆಮುರಿಯಾ ಇಂಕ್' ನ ಸಿಇಒ ಜೇಸನ್ ಸ್ಯಾಮ್ಯುಯೆಲ್ ಅವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕೌಟುಂಬಿಕ ಕಲಹದ ಕುರಿತು ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ಗುಜರಾತ್ ವ್ಯಕ್ತಿ

ಸೈಬರ್ ವಂಚನೆಗೆ ಗುರಿಯಾದ ವಿ. ಹರೀಶ್ ಅವರು ತಮ್ಮ ಕೊನೆಯ ವಿಡಿಯೊದಲ್ಲಿ ಹಣಕ್ಕಾಗಿ ಒತ್ತಾಯಿಸಿ ತಮಗೆ ಕಿರುಕುಳ ನೀಡಲಾಗುತ್ತಿದೆ. ಇದರಿಂದ ತಮಗೂ ಮತ್ತು ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ಒತ್ತಡ ಉಂಟಾಗಿದೆ. ತಮ್ಮ ಐದು ವರ್ಷಗಳ ಕಠಿಣ ಪರಿಶ್ರಮವನ್ನು ಕಸಿದುಕೊಳ್ಳಲಾಗಿದೆ. ನನ್ನಲ್ಲಿ ಏನಾದರೂ ತಪ್ಪುಗಳಿದ್ದರೆ ನೀವು ನನ್ನನ್ನು ಪ್ರಶ್ನಿಸಬಹುದು. ನಾನು ಉತ್ತರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಆದರೆ ಅವರು ತಮ್ಮ ವಿಡಿಯೊದಲ್ಲಿ ಯಾರ ಹೆಸರನ್ನು ಕೂಡ ಪ್ರಸ್ತಾಪಿಸಿಲ್ಲ.

ನಾನು ಪುದುಚೇರಿಯವನು ಎಂಬುದು ಅವರಿಗೆ ಗೊತ್ತಿದೆ. ಪುದುಚೇರಿಯ ಶಾಸಕರು ಮತ್ತು ಮುಖ್ಯಮಂತ್ರಿಯವರೊಂದಿಗೂ ಸಂಪರ್ಕವಿದೆ ಎಂದು ಹೇಳಿರುವ ಅವರು, ಹಣಕ್ಕಾಗಿ ಬೇಡಿಕೆ ಇಟ್ಟರು. ನನಗೆ ಹಣ ನೀಡದೆ ನೀನು ಎಲ್ಲಿಗೆ ಹೋಗುತ್ತೀಯಾ? ಎಂದು ಪ್ರಶ್ನಿಸಿದರು. ನಾನೇನು ಮಾಡಬೇಕೆಂದು ತಿಳಿಯುತ್ತಿಲ್ಲ. ನನ್ನಿಂದಾಗಿ ಇತರರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ನನಗೆ ಅನ್ನಿಸುವಂತಹ ಪರಿಸ್ಥಿತಿಯನ್ನು ಅವರು ಮಾಡಿದರು ಎಂದು ಹೇಳಿದ್ದಾರೆ.

ನನ್ನಲ್ಲಿ ಅಪರಾಧ ಭಾವನೆ ಕಾಡುವಂತೆ ಮಾಡಿದರು. ಆದಾಯ ತೆರಿಗೆ ಇಲಾಖೆಯು ದಂಡ ವಿಧಿಸಿದರೆ ನಾನು ಶೇಕಡಾ 60ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದರು. ರಾಜಿ ಮಾಡಿಕೊಳ್ಳಲು ಹಣದ ಬೇಡಿಕೆಯನ್ನು ಇಟ್ಟಿದ್ದರು ಎಂದು ಆರೋಪಿಸಿದರು.



ದೂರುಗಳ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆಯು ಹರೀಶ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿತ್ತು. ಆ ಬಳಿಕ ಹರೀಶ್ ಹೊಸ ಖಾತೆಯ ಮೂಲಕ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಹರೀಶ್‌ಗೆ ಕಿರುಕುಳ ನೀಡಿರುವ ಆರೋಪಗಳನ್ನು ಸ್ಯಾಮ್ಯುಯೆಲ್ ನಿರಾಕರಿಸಿದ್ದಾರೆ.

ಶೂಟರ್‌ಗಳ ಹಿಸ್ಟ್‌ ಲಿಸ್ಟ್‌ನಲ್ಲಿದ್ದರು ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಆಮಿರ್‌ ಖಾನ್‌; ಬಯಲಾಯ್ತು ಸ್ಫೋಟಕ ಸತ್ಯ

ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಂಗಳವಾರ ಸಂಜೆ ಹರೀಶ್ ಅವರು ಸಾವಿನ ಕುರಿತು ಪೋಸ್ಟ್ ಮಾಡಿದ ಸ್ಯಾಮ್ಯುಯೆಲ್, ಅವರ ಸಾವಿನಿಂದ ತಮಗೆ ಆಘಾತವಾಗಿದೆ. ಆ ಇನ್‌ಫ್ಲುಯೆನ್ಸರ್ ಸಂಗತಿಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ. ಹರೀಶ್ ಅವರು 'ಸೆಬಿ' ನೋಂದಾಯಿತ ಹೂಡಿಕೆ ಸಲಹೆಗಾರರಾಗಿರಲಿಲ್ಲ ಮತ್ತು ಅವರು ಇತ್ತೀಚೆಗೆ 'ಅಸೋಸಿಯೇಷನ್ ​​ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ' ದಿಂದ ತಮ್ಮ 'ಎಎಂಎಫ್‌ಐ ನೋಂದಣಿ ಸಂಖ್ಯೆ'ಯನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author