ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ಲೇಸ್ಕೂಲ್‌ನಲ್ಲಿ 3 ವರ್ಷದ ಮಗುವನ್ನು ಕುರ್ಚಿಗೆ ಕಟ್ಟಿ ಹಲ್ಲೆ; ಶಾಲಾ ಸಿಬ್ಬಂದಿಯ ಅಮಾನುಷ ವರ್ತನೆಯಿಂದ ಎರಡೂ ಕಿವಿಗಳಿಗೆ ಹಾನಿ

Child Assault: ದೆಹಲಿಯ ಪ್ಲೇಸ್ಕೂಲ್‌ನಲ್ಲಿ 3 ವರ್ಷದ ಬಾಲಕನನ್ನು ಕುರ್ಚಿಗೆ ಕಟ್ಟಿ ತೀವ್ರ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ 35 ವರ್ಷದ ಸಹಾಯಕನನ್ನು ಬಂಧಿಸಲಾಗಿದೆ. ದೆಹಲಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರ ಪಾತ್ರ ಮತ್ತು ಬೇಜವಾಬ್ದಾರಿತನದ ಕುರಿತು ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 30: ಪ್ಲೇಸ್ಕೂಲ್‌ನಲ್ಲಿ ಮೂರು ವರ್ಷದ ಬಾಲಕನನ್ನು ಕುರ್ಚಿಗೆ ಕಟ್ಟಿ ತೀವ್ರ ದೈಹಿಕ ಕಿರುಕುಳ (Child Abuse) ನೀಡಿದ ಆರೋಪದ ಮೇಲೆ 35 ವರ್ಷದ ಸಹಾಯಕನನ್ನು ಬಂಧಿಸಲಾಗಿದೆ. ಈಶಾನ್ಯ ದೆಹಲಿಯ (Delhi) ಮೌಜ್‌ಪುರದಲ್ಲಿ ಘಟನೆ ನಡೆದಿದೆ. ಬಾಲಕನ ತಂದೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ. ಶಾಲಾ ನಿರ್ದೇಶಕರು, ಪ್ರಾಂಶುಪಾಲರು, ಶಿಕ್ಷಕರು ಮತ್ತು ಅಟೆಂಡರ್ ಸೇರಿ ನಾಲ್ವರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ.

ಪ್ರಕರಣದಲ್ಲಿ ಶಿಕ್ಷಕಿಗೆ ತಕ್ಷಣವೇ ತನಿಖೆಗೆ ಹಾಜರಾಗುವಂತೆ ಪೊಲೀಸರು ಆದೇಶ ನೀಡಿದ್ದಾರೆ. ಘಟನೆಯಲ್ಲಿ ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರ ಪಾತ್ರ ಮತ್ತು ಬೇಜವಾಬ್ದಾರಿತನದ ಕುರಿತು ಕೂಡ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.

ಮಗುವಿನ ವರ್ತನೆಯಲ್ಲಿನ ಬದಲಾವಣೆಗಳು ಮತ್ತು ದೇಹದಲ್ಲಾದ ಗಾಯ ಗಮನಿಸಿದ ಪೋಷಕರಿಗೆ ಈ ವಿಚಾರ ಗೊತ್ತಾಗಿದೆ. ಹಲವು ದಿನಗಳಿಂದ ಮಗು ಶೌಚಾಲಯಕ್ಕೆ ಹೋಗಲು ಹೆದರುತ್ತಿತ್ತು, ಆತಂಕಕ್ಕೊಳಗಾಗಿತ್ತು ಮತ್ತು ರಾತ್ರಿಯಿಡೀ ಅಳುತ್ತಿತ್ತು. ಮುಖ ಮತ್ತು ತೋಳುಗಳ ಮೇಲೆ ಕೆಲವು ಗಾಯಗಳಿದ್ದವು ಎಂದು ಪೋಷಕರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ಭಾರತದಲ್ಲಿ ರಣ ಭೀಕರ ಮಳೆ; ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ

ನಂತರ ಪೋಷಕರು ಮಗುವನ್ನು ಇಎನ್‌ಟಿ ತಜ್ಞರ ಬಳಿಗೆ ಕರೆದೊಯ್ದರು. ಅವರಿಗೆ ಎರಡೂ ಕಿವಿಗಳಲ್ಲಿ ತೀವ್ರ ಊತ ಇರುವುದು ಪತ್ತೆಯಾಯ್ತು. ಮಗುವಿನ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಗುವಿನ ತಂದೆ ವಕೀಲರಾಗಿದ್ದು ಅವರು, ಸಿಸಿಟಿವಿ ದೃಶ್ಯಾವಳಿಗಳನ್ನು ಕೋರಿ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಸಿಬ್ಬಂದಿ ಆರಂಭದಲ್ಲಿ ತಾಂತ್ರಿಕ ದೋಷಗಳನ್ನು ಉಲ್ಲೇಖಿಸಿ ಅವರ ವಿನಂತಿಯನ್ನು ನಿರಾಕರಿಸಿದರು. ಮರುದಿನ ಮತ್ತೆ ಕೇಳಿದಾಗ ಶಾಲಾ ಅಧಿಕಾರಿಗಳು ದೃಶ್ಯಾವಳಿಗಳನ್ನು ವೀಕ್ಷಿಸಲು 1,500 ರುಪಾಯಿ ಹಣ ಕೊಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಮೊತ್ತವನ್ನು ಪಾವತಿಸಿದ ನಂತರ, ಮಗುವಿಗೆ ಆದ ದೈಹಿಕ ಹಲ್ಲೆಯ ದೃಶ್ಯ ಕಂಡುಬಂದಿದೆ.

ದೃಶ್ಯಾವಳಿಯಲ್ಲಿ ಮಗುವನ್ನು ಕಿವಿ ಎಳೆದು, ಗಂಟೆಗಟ್ಟಲೆ ಕುರ್ಚಿಗೆ ಕಟ್ಟಿ ಒದ್ದು, ಪದೇ ಪದೆ ಹೊಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೀವ್ರ ಆಘಾತಗೊಂಡ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಶಾಲೆಗೆ ತೆರಳಿ ಪರಿಶೀಲಿಸಿದ ಪೊಲೀಸರು ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು, ಎಫ್‌ಐಆರ್ ದಾಖಲಿಸಿದ್ದಾರೆ.

ಇನ್ನುಹಲ್ಲೆಯನ್ನು ಸಮರ್ಥಿಸಿಕೊಂಡ ಸಿಬ್ಬಂದಿ ಮಗುವಿನ ವರ್ತನೆಯ ಬಗ್ಗೆ ದೂರಿದ್ದಾರೆ ಎನ್ನಲಾಗಿದೆ. ಆತನ ನಡವಳಿಕೆ ಸರಿಯಿಲ್ಲದಿದ್ದಕ್ಕೆ ತಾವು ಹೊಡೆದಿರುವುದಾಗಿ ಸಮರ್ಥನೆ ನೀಡಿದ್ದಾರೆ. ಮಗುವನ್ನು ತಕ್ಷಣವೇ ಸಮಗ್ರ ವೈದ್ಯಕೀಯ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಈ ಸಂಬಂಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಬಾಲ ನ್ಯಾಯ (JJ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಹಾಯಕನನ್ನು ಬಂಧಿಸಲಾಗಿದೆ.