ಗುಜರಾತ್: ಮಹಾಶಿವರಾತ್ರಿ ಮೆರವಣಿಗೆಯಲ್ಲಿ (Maha Shivratri procession) ದುರಂತವೊಂದು ನಡೆದ ಘಟನೆ ಗುಜರಾತ್‌ನ (Gujarat) ದಾಹೋದ್ ಜಿಲ್ಲೆಯಲ್ಲಿ (Dahod district) ನಡೆದಿದೆ. ಮಹಾ ಶಿವರಾತ್ರಿ (Shivaratri) ಮೆರವಣಿಗೆ ವೇಳೆ ಭಕ್ತನೊಬ್ಬ ಬೆಂಕಿಯ ಸಾಹಸ ಪ್ರದರ್ಶನ ನಡೆಸುತ್ತಿದ್ದನು. ಇದರಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಸುತ್ತಮುತ್ತ ಅನೇಕ ಪ್ರೇಕ್ಷಕರು ಕೂಡ ನೆರೆದಿದ್ದರು. ಗರ್ಬದ ಶಿವಯಾತ್ರೆ ಆಚರಣೆಯ ಭಾಗವಾಗಿದ್ದ ಈ ಮೆರವಣಿಗೆಯಲ್ಲಿ ಪ್ರದರ್ಶಕನೊಬ್ಬ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಸುತ್ತಮುತ್ತ ನೆರೆದಿದ್ದ ಸಾಕಷ್ಟು ಮಂದಿ ಇದನ್ನು ನೋಡುತ್ತಿದ್ದರು. ಈ ವೇಳೆ ಪ್ರೇಕ್ಷಕನೊಬ್ಬನಿಗೆ ಬೆಂಕಿ ತಗಲಿದೆ.
ರಮಣಭಾಯಿ ರಾಥೋಡ್ ಎಂಬಾತನಿಗೆ ಬೆಂಕಿ ತಗುಲಿದ್ದು, ಹತ್ತಿರದಲ್ಲಿ ಸಾಕಷ್ಟು ಮಂದಿ ಇದ್ದರೂ ಯಾರಿಗೂ ನಂದಿಸಲು ಸಾಧ್ಯವಾಗಲಿಲ್ಲ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಸ್ಥಳದಲ್ಲಿ ಉಂಟಾದ ಅವ್ಯವಸ್ಥೆಗಳು ಸೆರೆಯಾಗಿವೆ. ಕೆಲವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರೆ ಇನ್ನು ಕೆಲವರು ಮೊಬೈಲ್ ಮೂಲಕ ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು.
ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ ಯುವಕ; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ತಕ್ಷಣವೇ ರಾಥೋಡ್ ಅವರನ್ನು ತುರ್ತು ವೈದ್ಯಕೀಯ ಆರೈಕೆಗಾಗಿ ದಾಹೋದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಲಾದರೂ ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ.
ಈ ದುರಂತವು ಗಾರ್ಬಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮುದಾಯಗಳಲ್ಲಿ ಆಘಾತವನ್ನು ಉಂಟು ಮಾಡಿದೆ. ಜನದಟ್ಟಣೆಯ ಧಾರ್ಮಿಕ ಸಭೆಯಲ್ಲಿ ಇಂತಹ ಹೆಚ್ಚಿನ ಅಪಾಯದ ಸಾಹಸ ಪ್ರದರ್ಶನಕ್ಕೆ ಸಂಬಂಧಿಸಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.
blackmail: ಶೌಚಾಲಯದಲ್ಲಿ ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್, ದೂರು ದಾಖಲು
ಈ ಪ್ರದರ್ಶನಕ್ಕಾಗಿ ಅನುಮತಿ ಪಡೆಯಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದರೆ ಇನ್ನು ಕೆಲವರು ಪ್ರಮುಖ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಇಂತಹ ಅಪಾಯಕಾರಿ ಕೃತ್ಯವನ್ನು ಹೇಗೆ ಅನುಮತಿಸಲಾಗಿದೆ ಎಂದು ಕೇಳಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆಯೇ ಇಲ್ಲವೇ ಎಂಬುದು ಇನ್ನು ದೃಢಪಟ್ಟಿಲ್ಲ.