ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾಸನ ಮಹಿಳೆ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌; ಪತಿಯ ಸ್ನೇಹಿತನ ಮನೆಯಲ್ಲಿ ಜೀವಂತವಾಗಿ ಪತ್ತೆ

Hasan Women Missing Case: ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಕುಣಿಗಲ್‌ನಲ್ಲಿ ಮಹಿಳೆ ಜೀವಂತವಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕುಣಿಗಲ್​​ನ ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರಿಗೆ ಸ್ಥಳೀಯ ಪೊಲೀಸರು ಕೂಡ ಈ ವೇಳೆ ಸಾಥ್​ ನೀಡಿದ್ದಾರೆ.

ನಾಪತ್ತೆಯಾಗಿದ್ದ ಪ್ರಿಯಾಂಕಾ

ಹಾಸನ: ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಕುಣಿಗಲ್‌ನಲ್ಲಿ ಮಹಿಳೆ (Women Missing Case) ಜೀವಂತವಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕುಣಿಗಲ್​​ನ (Kunigal) ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರಿಗೆ ಸ್ಥಳೀಯ ಪೊಲೀಸರು ಕೂಡ ಈ ವೇಳೆ ಸಾಥ್​ ನೀಡಿದ್ದಾರೆ. ಡೇವಿಡ್ ಎಂಬಾತನ​​ ಮನೆಯಲ್ಲಿಯೇ ಪ್ರಿಯಾಂಕಾ ಎರಡು ದಿನಗಳಿಂದ ವಾಸವಿದ್ದರು ಎನ್ನಲಾಗಿದ್ದು, ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ.

ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿ ಬೇಲೂರು ತಾಲ್ಲೂಕು, ಮತ್ತಾವರ ಗ್ರಾಮದ ಪ್ರಿಯಾಂಕ (29) ಮದುವೆಗೆ ಆಗಮಿಸಿದ್ದಳು. ಬಳಿಕ ನಿಗೂಢವಾಗಿ ನಾಪತ್ತೆಯಾದಳು. ಮಹಿಳೆಯ ಬಟ್ಟೆ, ಬ್ಯಾಗ್‌, ಚಪ್ಪಲಿ ಹೆದ್ದಾರಿ ಪಕ್ಕದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೊಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಖ್ಯಾತ ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧ ನಡೆಸಲಾಗಿತ್ತು.ಇದೀಗ ಪ್ರಿಯಾಂಕ ಪತಿಯ ಸ್ನೇಹಿತನಾಗಿರುವ ಡೇವಿಡ್​​ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಾಗಿದ್ದ ಡೇವಿಡ್ ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ತನಿಖೆ ವೇಳೆ ಸಿಕ್ಕಿದೆ.

ಹುಟ್ಟುಹಬ್ಬ ಪಾರ್ಟಿ, ಅಶ್ಲೀಲ ವಿಡಿಯೊ, ಕೊಲೆ, ಸ್ನೇಹಿತ ನಾಪತ್ತೆ; ಎಂಬಿಎ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ

ಏನಿದು ಪ್ರಕರಣ?

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ, ಯಲಿಯೂರು ಗ್ರಾಮದಿಂದ ಚಿಕ್ಕಮಗಳೂರಿಗೆ ಪ್ರಿಯಾಂಕಾ ಮದುವೆಗೆ ಬಂದಿದ್ದಳು. ಮೈಮೇಲೆ ಸುಮಾರು 30 ಲಕ್ಷ ಮೌಲ್ಯದ ಒಡವೆ ಧರಿಸಿದ್ದ ಆಕೆ, ಮದುವೆ ಮುಗಿಸಿ ವಾಪಸ್ ಊರಿಗೆ ತೆರಳುವ ವೇಳೆ‌ ನಿಗೂಢವಾಗಿ ನಾಪತ್ತೆಯಾಗಿದ್ದಳು. ಮಹಿಳೆ ಮಿಸ್ಸಿಂಗ್ ಬಗ್ಗೆ ಕೇಸ್ ದಾಖಲಿಸಿ ಪೊಲೀಸರ ತನಿಖೆಗಿಳಿದಿದ್ದರು. ಉಡುಪಿಯಿಂದ ಆಗಮಿಸಿರುವ ತಜ್ಞರ ತಂಡದಿಂದ‌ ಕೆರೆಯಲ್ಲಿ ಶೋಧ ನಡೆಸಲಾಗಿತ್ತು. ಆದರೆ, ಕೆರೆಯಲ್ಲಿ ಯಾವುದೇ ಗುರುತು ಸಿಕ್ಕಿರಲಿಲ್ಲ. ಘಟನೆಗೂ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆಯಲ್ಲಿ ಸಿಕ್ಕಿದ್ದೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು.

Vishakha Bhat Heggar

View all posts by this author