ಪಶ್ಚಿಮ ಬಂಗಾಳ: ಬಂಧನದಲ್ಲಿದ್ದ ಬಿಎಸ್‌ಎಫ್ (BSF) ಕಾನ್‌ಸ್ಟೆಬಲ್ ಒಬ್ಬ ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿದ ಘಟನೆ ಪಶ್ಚಿಮ ಬಂಗಾಳದ (west bengal) ಮಾಲ್ಡಾದ ಶಿಬಿರದಲ್ಲಿ (Malda camp) ಗುರುವಾರ ನಡೆದಿದೆ. ಇದರಿಂದ ಇಬ್ಬರು ಬಿಎಸ್‌ಎಫ್ ( Border Security Force) ಯೋಧರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಂಧಿತ ಆರೋಪಿ ಕಾನ್‌ಸ್ಟೆಬಲ್ ಶಿವಂ ಕುಮಾರ್ ಮಿಶ್ರಾ ಮಾನಸಿಕ ಒತ್ತಡದಿಂದ ಬಳಲುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ. ಈ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಬಿಎಸ್‌ಎಫ್ ಅಧಿಕಾರಿಗಳು, ಮಾಲ್ಡಾದ ಬೈಷ್ಣಬ್‌ನಗರದ 17 ಮೈಲಿ ಬಳಿಯ 119 ಬೆಟಾಲಿಯನ್ ಪ್ರಧಾನ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ 3.50 ರ ಸುಮಾರಿಗೆ ಬಂಧನದಲ್ಲಿದ್ದ ಬಿಎಸ್‌ಎಫ್ ಕಾನ್‌ಸ್ಟೆಬಲ್ ಶಿವಂ ಸೆಂಟ್ರಿಯಿಂದ ರೈಫಲ್ ಕಸಿದುಕೊಂಡು ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಅವರಿಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಸಿಜೆಪಿ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಯುವತಿ ಮೃತಪಟ್ಟಿಲ್ಲ: ದೆಹಲಿ ಪೊಲೀಸರಿಂದ ಸ್ಪಷ್ಟನೆ
ಆರೋಪಿ ಶಿವಂ ಕುಮಾರ್ ಮಿಶ್ರಾ ತೀವ್ರ ಮಾನಸಿಕ ತೊಂದರೆಯಿಂದ ಬಳಲುತ್ತಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಗುಂಡಿನ ದಾಳಿಯ ಕಾರಣ ತಿಳಿದುಬಂದಿಲ್ಲ. ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್-ಮಾರ್ಷಲ್ ವಿಚಾರಣೆ ಎದುರಿಸುತ್ತಿರುವ ಶಿವಂ ಮಿಶ್ರಾ ಬಿಎಸ್ಎಫ್ ವಶದಲ್ಲಿದ್ದು, ಯಾವ ಪ್ರಕರಣದ ಕುರಿತು ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಅವರು ಸರ್ವಿಸ್ ರೈಫಲ್ ಅನ್ನು ಕಸಿದುಕೊಂಡು ಹತ್ತಿರದ ಬ್ಯಾರಕ್‌ಗಳ ಕಡೆಗೆ ಮನಬಂದಂತೆ ಗುಂಡು ಹಾರಿಸಿದ್ದಾರೆ.
“ವೈದ್ಯಕೀಯ ಸಲಹೆ ಪಾಲಿಸಿ”: ಉಪಾವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್‌ಚುಕ್‌ಗೆ ಪ್ರಧಾನಿ ಮೋದಿ ಸಂದೇಶ
ಈ ಸಂದರ್ಭದಲ್ಲಿ ಮೂವರು ಬಿಎಸ್ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತರನ್ನು ಹೆಡ್ ಕಾನ್ಸ್ಟೇಬಲ್ ಅಜಯ್ ಕುಮಾರ್ ಮತ್ತು ಕಾನ್ಸ್ಟೇಬಲ್ ಅಂಬಾದರ್ ಸುರೇಶ್ ಎಂದು ಗುರುತಿಸಲಾಗಿದೆ. ಹೆಡ್ ಕಾನ್ಸ್ಟೇಬಲ್ ಬಿಕಾಸ್ ಬ್ರಹ್ಮ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.