ಲಖನೌ: ವ್ಯಕ್ತಿಯೊಬ್ಬ ತನ್ನ 6 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಸಲಿಂಗ ಸಂಗಾತಿಯ ಖಾಸಗಿ ಭಾಗವನ್ನು ಕತ್ತರಿಸಿ, ಬಳಿಕ ತಾನೂ ಆತ್ಮಹತ್ಯೆ(Suicide) ಶರಣಾಗಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ದಿಯೋರಿಯಾ(Deoria) ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಸ್ಥಳೀಯ ಆರ್ಕೆಸ್ಟ್ರಾ(orchestra)ದಲ್ಲಿ ಪ್ರದರ್ಶನ ನೀಡುತ್ತಿದ್ದ 32 ವರ್ಷದ ವ್ಯಕ್ತಿ, ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ವಿಚ್ಛೇದನದ ನಂತರ, ಅವನು ಒಂದು ಸಣ್ಣ ಕೋಣೆಯನ್ನು ಬಾಡಿಗೆಗೆ ಪಡೆದು, 35 ವರ್ಷದ ರಾಮಬಾಬು ಯಾದವ್ ಎಂಬ ಸ್ನೇಹಿತನೊಂದಿಗೆ ವಾಸಿಸುತ್ತಿದ್ದ. ಕಾಲಕ್ರಮೇಣ, ಇಬ್ಬರೂ ಪರಸ್ಪರ ಸಂಬಂಧ ಬೆಳೆಸಿಕೊಂಡಿದ್ದರು.
ಈ ಸುದ್ದಿಯನ್ನು ಓದಿ: Viral News: ಕಾರ್ ಪಾರ್ಕಿಂಗ್ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ; ಓರ್ವ ಗಂಭೀರ
ಕಳೆದ ವಾರ ಯಾದವ್ ತನ್ನ ಸ್ನೇಹಿತನ ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದ ನಂತರ ಕೈಗೊಂಡ ತನಿಖೆಯಲ್ಲಿ ಅವರಿಬ್ಬರ ಸಂಬಂಧದ ವಿಚಾರ ಬಳಕಿಗೆ ಬಂದಿದೆ. ಬಾಲಕಿ ತನ್ನ ತಂದೆಯನ್ನು ಭೇಟಿಯಾಗಲು ಬಂದಿದ್ದ ವೇಳೆ ರಾಮಬಾಬು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಅತ್ಯಾಚಾರ ವಿಚಾರ ತಿಳಿದ ತಕ್ಷಣ ಬಾಲಕಿಯ ತಂದೆ ಯಾದವ್ ಬಳಿ ತೆರಳಿದ್ದು, ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಬಾಲಕಿಯ ತಂದೆ ಯಾದವ್‌ನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡ ಯಾದವ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಆತ ಪೊಲೀಸರ ನಿಗಾದಲ್ಲಿದ್ದಾನೆ.
ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಯಾದವ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿಚಾರಣೆಯಲ್ಲಿ ಯಾದವ್ ತನ್ನ ಮತ್ತು ಬಾಲಕಿಯ ತಂದೆಯ ನಡುವಿನ ಸಂಬಂಧದ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ತಂದೆ ಸಮಾಜದಲ್ಲಿ ತೀವ್ರ ಅಪಮಾನ ಎದರಿಸಿದ್ದ. ಶುಕ್ರವಾರ ಬೆಳಿಗ್ಗೆ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ನಂತರ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕುಮಾರ್ ಸಿಂಗ್( Sunil Kumar Singh ) ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಲ್ಲದೇ ಮಗುವಿನ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ತಾಯಿಯ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.