ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suicide Attack: ಅಫ್ಘಾನ್ ಗಡಿಯಲ್ಲಿ ಆತ್ಮಾಹುತಿ ದಾಳಿ- 7 ಪಾಕ್ ಸೈನಿಕರ ಸಾವು

Pakistan suicide attack: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಎರಡು ರಾಷ್ಟ್ರಗಳ ನಡುವೆ ನಡೆದ ಘರ್ಷಣೆಯಲ್ಲಿ 7 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ತಾಲಿಬಾನ್ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿದೆ.

7 ಪಾಕಿಸ್ತಾನಿ ಸೈನಿಕರ ಹತ್ಯೆ

ಸಾಂದರ್ಭಿಕ ಚಿತ್ರ -

Profile Sushmitha Jain Oct 18, 2025 9:01 AM

ದೋಹಾ: ಉತ್ತರ ವಜಿರಿಸ್ತಾನ್‌ (North Waziristan)ನ ಸೇನಾ ಶಿಬಿರದ ಮೇಲೆ ಶುಕ್ರವಾರ ನಡೆದ ‘ಸಂಯೋಜಿತ ಆತ್ಮಾಹುತಿ ದಾಳಿಯಲ್ಲಿ’ ಪಾಕಿಸ್ತಾನ(Pakistani)ದ 7 ಸೈನಿಕರ ಮೃತಪಟ್ಟು, ಇನ್ನೂ 13 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್‌ನ ರಕ್ಷಣಾ ಸಚಿವಾಲಯ ತಿಳಸಿದೆ. ದೋಹಾ(Doha)ದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಶಾಂತಿ ಮಾತುಕತೆ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಈ ದಾಳಿ ನಡೆದಿದೆ.

ಅಧಿಕಾರಿಗಳ ಪ್ರಕಾರ, ಮಿರ್ ಅಲಿ(Mir Ali) ಪ್ರದೇಶದಲ್ಲಿನ ಸೇನಾ ಶಿಬಿರದ ಗೋಡೆಗೆ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಉಗ್ರ ಡಿಕ್ಕಿಪಡಿಸಿದ್ದಾನೆ. ಈ ಬಳಿಕ ಶಿಬಿರಕ್ಕೆ ಪ್ರವೇಶಿಸಲು ಯತ್ನಿಸಿದ ಇನ್ನಿಬ್ಬರು ಉಗ್ರರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಈ ದಾಳಿಯ ಹೊಣೆ ಹೊತ್ತಿದ್ದು, ಖಾಲಿದ್ ಬಿನ್ ವಲೀದ್(Khalid bin Waleed) ಆತ್ಮಹತ್ಯಾ ಘಟಕ ಮತ್ತು ತೆಹ್ರೀಕ್ ತಾಲಿಬಾನ್ ಗುಲ್ಬಹಾದಾರ್ ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Viral News: ಪರೀಕ್ಷೆ ನಿಲ್ಲಿಸಲು 'ಪ್ರಾಂಶುಪಾಲರು ಸತ್ತಿದ್ದಾರೆ' ಎಂಬ ನೊಟೀಸ್ ನೀಡಿದ ವಿದ್ಯಾರ್ಥಿಗಳು; ಮುಂದೇನಾಯ್ತು ಗೊತ್ತೆ?

ಉಗ್ರರು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದ ಹಿನ್ನೆಲೆ ಪಾಕ್ ಸೇನೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಬಳಸಿತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಉತ್ತರ ವಜಿರಿಸ್ತಾನ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಗಂಭೀರ ಉಗ್ರ ದಾಳಿಗಳಲ್ಲಿ ಇದೂ ಒಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ.. ಬಜೌರ್(Bajaur) ಜಿಲ್ಲೆಯ ಮಮೂಂದ್ ಟಂಗಿ ಶಾ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ, ಸ್ಫೋಟಕ ತುಂಬಿದ ವಾಹನವು ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಉಗ್ರ ಚಟುವಟಿಕೆಯ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪಾಕ್-ಆಫ್ಘಾನಿಸ್ತಾನ ಮಧ್ಯೆ ಉದ್ವಿಗ್ನತೆ

ಕಳೆದವಾರವಷ್ಟೇ ಕಾಬೂಲ್(Kabul) ಮೇಲೆ ಪಾಕ್ ವೈಮಾನಿಕ ದಾಳಿ ನಡೆಸಿದ್ದು, ಪಾಕ್ ಮತ್ತು ಅಫ್ಘಾನಿಸ್ತಾನದ ಮಧ್ಯೆ ಉದ್ವಿಗ್ನತೆ ನಿರ್ಮಾಣವಾಗಿತ್ತು. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಈ ದಾಳಿಗಳು ಸಂಭವಿಸಿವೆ. ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿವ ಮುನ್ನವೇ ನಡೆದ ಈ ದಾಳಿಗಳಿಂದ, ಉಭಯ ದೇಶಗಳಲ್ಲಿ ಭಾರಿ ಸಾವು ನೋವುಗಳು ಸಂಭವಿಸಿದೆ.

2021ರಲ್ಲಿ ಯುಎಸ್ ನೇತೃತ್ವದ ಪಡೆಗಳು ಹಿಂತಿರುಗಿದ ನಂತರ ಕಾಬೂಲ್ ಮೇಲೆ ಆಫ್ಘಾನ್ ತಾಲಿಬಾನ್ ಹಿಡಿತ ಸಾಧಿಸಿತ್ತು. ಇದಾದ ಬಳಿಕ ಪಾಕಿಸ್ತಾನ-ಆಫ್ಘಾನ್ ನಡುವಿನ ಸಂಬಂಧಗಳು ಹದಗೆಡುತ್ತಲೇ ಬಂದಿವೆ. ಇತ್ತೀಚೆಗೆ, ಆಫ್ಘಾನ್ ಭೂಮಿಯಿಂದ ನಡೆಯುತ್ತಿರುವ ಅಂತರರಾಷ್ಟ್ರೀಯ ಗಡಿ ದಾಳಿಗಳನ್ನು ತಡೆಯುವಂತೆ ಕಾಬೂಲ್ ಮೇಲೆ ಪಾಕಿಸ್ತಾನ ಒತ್ತಡ ಹೇರಿದ ಬಳಿಕ ಈ ಉದ್ವಿಗ್ನತೆ ಭುಗಿಲೆದ್ದಿದೆ.