ಕಾರವಾರ, ಜ.28: ಉತ್ತರ ಕನ್ನಡ (Uttara Kannada News) ಜಿಲ್ಲೆಯ ಕುಮಟಾ (Kumta) ತಾಲೂಕಿನ ದೇವರ ಹಕ್ಕಲದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಟುಂಬದವರು ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಯುವಕನೊಬ್ಬ ದಿನಕರ್ ಎಂಬವರ ಮನೆಗೆ ಬೆಂಕಿ (setting fire) ಹಚ್ಚಿದ್ದಾನೆ. ಕುಮಟಾದ ವೆಂಕಟರಮಣ ಜಾತ್ರೆಗೆ ದಿನಕರ್ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ 18 ವರ್ಷದ ಫೈಸಾನ್ ಜಾಫರ್ ಶೇಕ್ ಎಂಬ ಯುವಕ ಅವರ ಮನೆಗೆ ಬೆಂಕಿ ಹಚ್ಚಿ ದ್ವೇಷ ಸಾಧಿಸಲು ಯತ್ನಿಸಿದ್ದಾನೆ.
ಬೆಂಕಿ ಹಚ್ಚಿದ ತಕ್ಷಣವೇ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆಯಾದರೂ, ಘಟನೆಯಿಂದಾಗಿ ದೇವರ ಹಕ್ಕಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆಯಾದರೂ, ಯಾವ ಪ್ರಕರಣ ದಾಖಲಿಸಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
Odisha Horror: ಹೆಣ್ಣು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಿದ ಮಾವ; 21ನೇ ಶತಮಾನದಲ್ಲೂ ನಾಚಿಗೇಡಿನ ಕೃತ್ಯ
ಬೆಂಗಳೂರಿನ ಜ್ಯುವೆಲರಿ ಶಾಪ್‌ನಲ್ಲಿ ಪ್ಲಾಸ್ಟಿಕ್ ಗನ್ ತೋರಿಸಿ ನಗದು, ಚಿನ್ನಾಭರಣ ದರೋಡೆ!
ಬೆಂಗಳೂರು: ವಿಜಯಪುರದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಚಿನ್ನದಂಗಡಿಗೆ ದರೋಡೆಕೋರರು ನುಗ್ಗಿ, 27 ಗ್ರಾಂ ಚಿನ್ನದ ಸರ, 50 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ (jewellery shop robbery) ನಡೆದಿದೆ. ಚಿನ್ನದ ಅಂಗಡಿಯಲ್ಲಿ ಖದೀಮರು ಪ್ಲಾಸ್ಟಿಕ್ ಗನ್ ತೋರಿಸಿ ಚಿನ್ನಾಭರಣ, ನಗದು ಲೂಟಿ ಮಾಡಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಬೆಂಗಳೂರಿನ ದಾಸನಪುರದ ರಾಮ್ ದೇವ್ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಇಬ್ಬರು ಕಳ್ಳರು, ಅಂಗಡಿ ಮಾಲೀಕನಿಗೆ ಪ್ಲಾಸ್ಟಿಕ್ ಗನ್ ತೋರಿಸಿ ದರೋಡೆ ಮಾಡಿದ್ದಾರೆ. 27 ಗ್ರಾಂ ಚಿನ್ನದ ಸರ, ಐವತ್ತು ಸಾವಿರ ನಗದು ದೋಚಿದ್ದು, ಈ ವೇಳೆ ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರತಿರೋಧ ತೋರುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.