ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣಿ ಇಲಾಖೆ ಅಧಿಕಾರಿ ಮನೆಗೆ ವಿಜಿಲೆನ್ಸ್ ತಂಡ ದಾಳಿ, 4 ಕೋಟಿ ರೂ. ನಗದು ವಶ

ಗಣಿ ಇಲಾಖೆ ಅಧಿಕಾರಿಯೊಬ್ಬರ ಮನೆಗೆ ವಿಜಿಲೆನ್ಸ್ ಇಲಾಖೆ ತಂಡ ದಾಳಿ ನಡೆಸಿದೆ. ಒಡಿಶಾದ ಗಣಿ ಉಪ ನಿರ್ದೇಶಕಿ ದೇಬಬ್ರತ ಮೊಹಂತಿ ಅವರ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು 4 ಕೋಟಿ ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಕಲ್ಲಿದ್ದಲು ಮಾರಾಟಗಾರರಿಂದ 30,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ದೇಬಬ್ರತ ಮೊಹಂತಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಭುವನೇಶ್ವರ: ಲಂಚ (Bribe case) ಪಡೆಯುತ್ತಿದ್ದ ಆರೋಪದಲ್ಲಿ ಒಡಿಶಾ ಗಣಿ ಅಧಿಕಾರಿಯನ್ನು (Odisha Mines Department officer) ಬಂಧಿಸಲಾಗಿದೆ. ವಿಜಿಲೆನ್ಸ್ ಇಲಾಖೆ (Vigilance Department ) ತಂಡ ಮಂಗಳವಾರ ರಾತ್ರಿ ಒಡಿಶಾದ ಗಣಿ ಇಲಾಖೆ ಅಧಿಕಾರಿಯ ದೇಬಬ್ರತ ಮೊಹಂತಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಲ್ಲಿದ್ದಲು ಮಾರಾಟಗಾರರಿಂದ 30,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ದೇಬಬ್ರತ ಮೊಹಂತಿ ಅವರನ್ನು ಬಂಧಿಸಲಾಗಿದೆ. ಅಲ್ಲದೇ ಈ ವೇಳೆ 4 ಕೋಟಿ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣಿ ಇಲಾಖೆ ಅಧಿಕಾರಿ ದೇಬಬ್ರತ ಮೊಹಂತಿ ಅವರ ಮನೆಗೆ ಮಂಗಳವಾರ ರಾತ್ರಿ ವಿಜಿಲೆನ್ಸ್ ಇಲಾಖೆ ತಂಡ ದಾಳಿ ನಡೆಸಿದೆ. ಒಡಿಶಾದ ಗಣಿ ಉಪ ನಿರ್ದೇಶಕಿಯಾಗಿರುವ ಅವರು ಕಲ್ಲಿದ್ದಲು ಮಾರಾಟಗಾರರಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯಿಂದ ಟ್ರಾಲಿ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಲಾದ ನೋಟುಗಳ ರಾಶಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅಪಘಾತಕ್ಕೀಡಾದ ಜಾರ್ಖಂಡ್ ಏರ್ ಆಂಬ್ಯುಲೆನ್ಸ್‌ನಲ್ಲಿ ಬ್ಲ್ಯಾಕ್‌ ಬಾಕ್ಸ್‌ ಇರಲಿಲ್ಲ; ತನಿಖೆಗೆ ಎದುರಾಯ್ತು ಮತ್ತಷ್ಟು ಸವಾಲು

ದೇಬಬ್ರತ ಮೊಹಂತಿ ಅವರ ಒಡೆತನದ ಭುವನೇಶ್ವರದ ಫ್ಲಾಟ್‌ ಮೇಲೆ ದಾಳಿ ನಡೆಸಿ ಒಟ್ಟು 4 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಇದುವರೆಗೆ ನಡೆಸಿರುವ ದಾಳಿಗಳಲ್ಲಿ ಅತ್ಯಧಿಕ ನಗದು ವಶಪಡಿಸಿಕೊಂಡ ದಾಳಿ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರವಾನಗಿ ಪಡೆದ ಕಲ್ಲಿದ್ದಲು ಮಾರಾಟಗಾರರಿಂದ ಅವರು 30,000 ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು. ಅವರ ಬಂಧನದ ಬಳಿಕ ವಿಜಿಲೆನ್ಸ್ ಇಲಾಖೆಯು ಅವರ ಭುವನೇಶ್ವರ ಫ್ಲಾಟ್, ಭದ್ರಕ್ ಜಿಲ್ಲೆಯಲ್ಲಿರುವ ಅವರ ಪೋಷಕರ ಮನೆ ಮತ್ತು ಕಟಕ್‌ನಲ್ಲಿರುವ ಅವರ ಕಚೇರಿ ಮೇಲೂ ದಾಳಿ ನಡೆಸಿದೆ. ಮೊಹಂತಿ ಅವರ ಕಚೇರಿ ಡ್ರಾಯರ್‌ನಿಂದ 1.20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Road Accident: ಟಾಟಾ ಏಸ್-ಕ್ಯಾಂಟರ್ ನಡುವೆ ಅಪಘಾತ: 10 ಮಂದಿಗೆ ಗಂಭೀರ ಗಾಯ, ತಪ್ಪಿದ ಭಾರಿ ಅನಾಹುತ

ವಶ ಪಡಿಸಿಕೊಳ್ಳಲಾದ ಅವರ ಆಸ್ತಿಗಳಲ್ಲಿ ಭುವನೇಶ್ವರದಲ್ಲಿರುವ ಎರಡು ಅಂತಸ್ತಿನ ಮನೆ, ಸುಮಾರು 130 ಗ್ರಾಂ ಚಿನ್ನ ಸೇರಿವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಜಿಲೆನ್ಸ್ ಇಲಾಖೆಯು ಈ ಹಿಂದೆ 2022ರ ಏಪ್ರಿಲ್ 7ರಂದು ಗಂಜಾಂ ಜಿಲ್ಲೆಯ ಸಣ್ಣ ನೀರಾವರಿ ವಿಭಾಗದ ಸಹಾಯಕ ಎಂಜಿನಿಯರ್ ನಿವಾಸದ ಮೇಲೆ ದಾಳಿ ನಡೆಸಿ 3.4 ಕೋಟಿ ರೂ. ವಶಕ್ಕೆ ಪಡೆದಿತ್ತು. ಅದರ ಬಳಿಕ ಈಗ ವಶಕ್ಕೆ ಪಡೆದಿರುವ ಮೊತ್ತವೇ ಅತ್ಯಧಿಕವಾಗಿದೆ.

ವಿದ್ಯಾ ಇರ್ವತ್ತೂರು

View all posts by this author