ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಹೆಲಿಕಾಪ್ಟರ್ ಅಪಘಾತಕ್ಕೂ ಮೊದಲು ಹಿಮಾಲಯದ ದೃಶ್ಯವನ್ನು ಕಣ್ತುಂಬಿಕೊಂಡ ವಿಡಿಯೊ ಹಂಚಿಕೊಂಡ ಕರ್ನಾಟಕದ ಪ್ರಯಾಣಿಕ

ಜೋಶಿಮಠದ ಬಳಿ ಶುಕ್ರವಾರ ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ಅದರಲ್ಲಿದ್ದ ಕರ್ನಾಟಕದ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊ ದೃಶ್ಯದಲ್ಲಿ ಹಿಮಾಲಯದ ದೃಶ್ಯವನ್ನು ಚಾರ್ ಧಾಮ್ ಯಾತ್ರಾರ್ಥಿಗಳು ಕಣ್ತುಂಬಿಕೊಳ್ಳುತ್ತಿರುವುದನ್ನು ಕಾಣಬಹುದು. ಅದರಲ್ಲಿ ಕೆಮರಾ ಮುಂದೆ ನಗುತ್ತಿರುವ ಮತ್ತು ಹಿಮದಿಂದ ಆವೃತವಾದ ಹಿಮಾಲಯದ ದೃಶ್ಯವಿದೆ.

ಸಂಗ್ರಹ ಚಿತ್ರ

ಉತ್ತರಾಖಂಡ: ಚಾರ್ ಧಾಮ್ ಯಾತ್ರೆ (Char Dham pilgrimage) ವೇಳೆ ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಶುಕ್ರವಾರ ನಡೆದ ಹೆಲಿಕಾಪ್ಟ‌ರ್ ದುರಂತದಲ್ಲಿ (helicopter crash) ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗೂ ಮೊದಲು ಹೆಲಿಕಾಪ್ಟರ್ ನಲ್ಲಿದ್ದ ಕರ್ನಾಟಕದ ವ್ಯಕ್ತಿಯೊಬ್ಬರು ತಮ್ಮ ಕುಟುಂಬಕ್ಕೆ ಕಳುಹಿಸಿದ ಕೊನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ. ಇದರ ದೃಶ್ಯದಲ್ಲಿ ಅವರು ಹಿಮಾಲಯದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರುವುದನ್ನು ಕಾಣಬಹುದು. ಕೆಮರಾ ಮುಂದೆ ನಗುತ್ತಾ ಅವರು ಹಿಮದಿಂದ ಆವೃತವಾದ ಹಿಮಾಲಯದ ದೃಶ್ಯವನ್ನು ತೋರಿಸಿದ್ದಾರೆ.

ಜೋಶಿಮಠದ ಕಣಿವೆಯಲ್ಲಿ ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ಪ್ರತಾಪ್ ಬಚಿಹಳ್ಳಿ ನಿಂಗರಾಜು (41) ಅವರು ತಮ್ಮ ಕುಟುಂಬಕ್ಕೆ ಕೊನೆಯ ವಿಡಿಯೊವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ ಅವರು ನಗುತ್ತಿರುವ ಮತ್ತು ಹಿಮದಿಂದ ಆವೃತವಾದ ಹಿಮಾಲಯದ ದೃಶ್ಯವನ್ನು ಕಾಣಬಹುದಾಗಿದೆ.

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಸೇರಿ ಐವರು ಕನ್ನಡಿಗರ ಸಾವು; ಮೃತರ ಗುರುತು ಪತ್ತೆ

ಸಮುದ್ರ ಮಟ್ಟದಿಂದ ಸುಮಾರು 11,000 ಅಡಿ ಎತ್ತರದಲ್ಲಿರುವ ಹಿಂದೂ ಧರ್ಮದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಬದರಿನಾಥದಿಂದ ಡೆಹ್ರಾಡೂನ್ ಬಳಿಯ ಸಹಸ್ರಧಾರಕ್ಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಶುಕ್ರವಾರ ಪತನಗೊಂಡಿದೆ. ಈ ದುರಂತವು ಚಾರ್ ಧಾಮ್ ಯಾತ್ರೆಯ ಸಂದರ್ಭದಲ್ಲಿ ಹೆಲಿಕಾಪ್ಟರ್ ಸುರಕ್ಷತೆ ಬಗ್ಗೆ ಮತ್ತೆ ಆತಂಕಗಳನ್ನು ಹೆಚ್ಚಿಸಿದೆ.

ಇದಕ್ಕೂ ಮೊದಲು ಪ್ರತಾಪ್ ಬಚಿಹಳ್ಳಿ ನಿಂಗರಾಜು ಅವರು ತಮ್ಮ ಕುಟುಂಬಕ್ಕೆ ಕೆಲವು ವಿಡಿಯೊಗಳನ್ನು ಕಳುಹಿಸಿಕೊಟ್ಟಿದ್ದರು. ಮೊದಲ ವಿಡಿಯೊದಲ್ಲಿ ಪ್ರತಾಪ್ ಅವರು ಕೆಮರಾವನ್ನು ನೋಡಿ ನಗುತ್ತಿರುವುದು, ಎರಡನೇ ವಿಡಿಯೊದಲ್ಲಿ ಹೊರಗಿನ ಹಿಮಾವೃತ ಪರ್ವತಗಳ ದೃಶ್ಯವಿದೆ. ಶುಕ್ರವಾರ ಮಧ್ಯಾಹ್ನ 1.12ರ ಸುಮಾರಿಗೆ ಕಳುಹಿಸಲಾದ ಈ ವಿಡಿಯೊಗಳು ಅವರು ತಮ್ಮ ಕುಟುಂಬಕ್ಕೆ ಕಳುಹಿಸಿರುವ ಕೊನೆಯ ಸಂದೇಶಗಳಾಗಿವೆ.



ಇದರ ಬಳಿಕ ಎರಡು ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡು ಮಧ್ಯಾಹ್ನ 2.20ರ ಸುಮಾರಿಗೆ ಜೋಶಿಮಠದ ಸಮೀಪದ ಹಳ್ಳಿಯೊಂದರಲ್ಲಿ ಧ್ವಂಸಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಲ್ಲಿದ್ದ ಪೈಲೆಟ್ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಪ್ರಯಾಣಿಕರಾದ ಕರ್ನಾಟಕದ ಪ್ರತಾಪ್ ಬಚಿಹಳ್ಳಿ ನಿಂಗರಾಜು, ಅರುಣ್ ಸಾಳುಂಕೆ, ಸುಧೀರ್ ಕೆ., ಎಚ್.ಎಸ್. ನಟರಾಜ್ ಮತ್ತು ಶಂಕರಗೌಡ ವಿ.ಬಿ., ಪೈಲಟ್ ದೆಹಲಿಯ ಕ್ಯಾಪ್ಟನ್ ಹಿಮಾಂಶು ಸಭರ್ವಾಲ್ (48) ಮೃತರು. 44 ವರ್ಷದ ಅರುಣ್ ಸಾಳುಂಕೆ ಅವರು ಬೆಂಗಳೂರು ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು.

ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆ ನಿರ್ವಹಿಸುತ್ತಿದ್ದ ಈ ಖಾಸಗಿ ಹೆಲಿಕಾಪ್ಟರ್ ಟೇಕ್-ಆಫ್ ಆದ ಎರಡು ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ಸಂಪರ್ಕ ಕಳೆದುಕೊಂಡಿತು. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರವು ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಹೆಲಿಕಾಪ್ಟರ್‌ನ ಸ್ಥಳದ ಮಾಹಿತಿಯನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ತಕ್ಷಣ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಸೇನಾ ಸಿಗ್ನಲ್ ಕೇಂದ್ರದ ತಂಡವೊಂದು ತೆರಳಿ ಶೋಧ ನಡೆಸಿದಾಗ 'ಹಾಥಿ ಪರ್ವತ' ಪ್ರದೇಶದಲ್ಲಿ ಹೆಲಿಕಾಪ್ಟರ್ ಅನ್ನು ಗುರುತಿಸಿದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ.ಕತ್ತಲೆ ಮತ್ತು ಕಠಿಣ ಭೌಗೋಳಿಕ ಪರಿಸ್ಥಿತಿಯ ಕಾರಣದಿಂದ ತಕ್ಷಣವೇ ರಕ್ಷಣಾ ತಂಡಕ್ಕೆ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರ್ಜಿತ್ ಸಿಂಗ್ ಪನ್ವಾರ್ ತಿಳಿಸಿದ್ದಾರೆ.

ಮೃತದೇಹಗಳನ್ನು ಶನಿವಾರ ಜೋಶಿಮಠ ಪಟ್ಟಣಕ್ಕೆ ತರಲಾಗುವುದು ಮತ್ತು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿವೇಕ್ ಪ್ರಕಾಶ್ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಪನ್ವಾರ್, ಹೆಲಿಕಾಪ್ಟರ್ ನಾಪತ್ತೆಯಾದ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸೇನೆಯ ಜಂಟಿ ತಂಡಗಳನ್ನು ಪಾಂಡುಕೇಶ್ವರ ಮತ್ತು ಜ್ಯೋತಿರ್ಮಠದಿಂದ ಶೋಧ ಕಾರ್ಯಕ್ಕಾಗಿ ಕಳುಹಿಸಲಾಯಿತು. ಗೋಪೇಶ್ವರದಲ್ಲಿರುವ ಜಿಲ್ಲಾ ಕೇಂದ್ರ ಕಚೇರಿಯಿಂದ ಡ್ರೋನ್ ತಂಡಗಳನ್ನು ಸಹ ನಿಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.



ಹೆಲಿಕಾಪ್ಟರ್ ದುರಂತದ ಮಾಹಿತಿ ತಿಳಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪರಿಶೀಲನಾ ಸಭೆ ನಡೆಸಿದರು. ಅನಂತರ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೆ ಕಾರಣದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಹಾಗೂ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ನಡೆಸಲಿದೆ. ಈಗಾಗಲೇ ತನಿಖಾ ತಂಡವೊಂದು ಅಪಘಾತ ಸ್ಥಳಕ್ಕೆ ತೆರಳಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಗೆ ಸೇರಿದ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಡೆಹಿಡಿಯಲಾಗಿದೆ ಎಂದು ಯುಸಿಎಡಿಎ ಸಿಇಒ ಪ್ರತೀಕ್ ಜೈನ್ ಅವರು ತಿಳಿಸಿದ್ದಾರೆ.

ಉತ್ತರಾಖಂಡದ ಚಾರ್ ಧಾಮ್ ವಲಯದಲ್ಲಿ ಹೆಲಿಕಾಪ್ಟರ್ ಸುರಕ್ಷತೆ ಬಗ್ಗೆ ಕಳವಳಗಳು ಹೆಚ್ಚಾಗಿದೆ. ಕಳೆದ ಏಪ್ರಿಲ್‌ನಲ್ಲಿ ಬದರಿನಾಥ ದೇವಾಲಯದ ಬಾಗಿಲುಗಳು ತೆರೆದ ಅನಂತರ ಇಲ್ಲಿಯವರೆಗೆ 21.55 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ 87 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

10ನೇ ಯೂನಿಫಾರ್ಮ್ ಮ್ಯಾನುಫ್ಯಾಕ್ಚರರ್ಸ್ ಫೇರ್ 2026: ಒಂದೇ ಸೂರಿನಡಿ 150ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು, 25,000ಕ್ಕೂ ಹೆಚ್ಚು ಯೂನಿಫಾರ್ಮ್ ಮತ್ತು ಫ್ಯಾಬ್ರಿಕ್ ವಿನ್ಯಾಸಗಳು

ಕಳೆದ ವರ್ಷದ ಜುಲೈನಲ್ಲಿ ಸರ್ಕಾರ ನೀಡಿರುವ ಮಾಹಿತಿಯಂತೆ 2020 ಮತ್ತು 2025ರ ನಡುವೆ 12 ಹೆಲಿಕಾಪ್ಟರ್ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಏಳು ಅಪಘಾತಗಳು ಉತ್ತರಾಖಂಡದಲ್ಲಿ ನಡೆದಿವೆ. 2024ರಲ್ಲಿ ನಾಲ್ಕು ಅಪಘಾತಗಳು ನಡೆದಿದೆ.

ವಿದ್ಯಾ ಇರ್ವತ್ತೂರು

View all posts by this author