ಭುವನೇಶ್ವರ, ಜೂ.26: ಪತಿ-ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯನ್ನು ಕೊಂದ ಪತ್ನಿ, ನಂತರ ತನ್ನ ಗೆಳೆಯನ ಸಹಾಯದಿಂದ ಶವವನ್ನು ವಿಲೇವಾರಿ ಮಾಡಲು ಯತ್ನಿಸಿರುವ ಘಟನೆ ಒಡಿಶಾದ (Odisha) ಜಾರ್ಸುಗುಡ ಜಿಲ್ಲೆಯಲ್ಲಿ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ (crime news) ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಶಕ್ತಿಧರ್ ಸಾಹು, ಕೊಲೆಯಾದ ದುರ್ದೈವಿ.
ಶಕ್ತಿಧರ್ ಸಾಹು ಅವರು ಪತ್ನಿ ಗೀತಾ ಮಿರ್ಧಾ ಅವರೊಂದಿಗಿನ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮನೆಯಿಂದ ದೂರವಿದ್ದು ವಾಸಿಸುತ್ತಿದ್ದರು. ಆದರೆ, ತಮ್ಮ ಹೆಣ್ಣುಮಕ್ಕಳನ್ನು ಭೇಟಿಯಾಗಲು ಅವರು ಆಗಾಗ ಮನೆಗೆ ಬರುತ್ತಿದ್ದರು. ಈ ವೇಳೆ ಗೀತಾ, ಟಿಕಿನು ಕಿಸಾನ್ ಜೊತೆ ಸಂಬಂಧವಿಟ್ಟುಕೊಂಡಿದ್ದಾಳೆ.
ಈ ನಡುವೆ ಮಂಗಳವಾರ (ಜೂ.23) ಮಕ್ಕಳನ್ನು ಭೇಟಿಯಾಗಲು ಶಕ್ತಿಧರ್ ಸಾಹು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ. ಈ ಸಮಯದಲ್ಲಿ ಟಿಕಿನು ಕೂಡ ಅಲ್ಲಿದ್ದ. ಪತಿ-ಪತ್ನಿಯ ಜಗಳವನ್ನು ನಿಲ್ಲಿಸುವಂತೆ ಮಧ್ಯಪ್ರವೇಶಿಸಿದ್ದಾನೆ. ಆದರೆ, ಅದು ದೈಹಿಕ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹಿಂಸಾಚಾರಕ್ಕೆ ತಿರುಗಿದಾಗ, ಶಕ್ತಿಧರ್ ನೆಲಕ್ಕೆ ಬಿದ್ದಿದ್ದಾರೆ. ನಂತರ ಗೀತಾ ಅವರ ಮೇಲೆ ಕೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದರು. ಇದರಿಂದ ಶಕ್ತಿಧರ್ ಸ್ಥಳದಲ್ಲೇ ಮೃತಪಟ್ಟರು.
ಆಗ ರಾಜ ರಘುವಂಶಿ ಈಗ ಕೇತನ್ ಅಗರ್ವಾಲ್: ಪ್ರವಾಸಿ ತಾಣದಲ್ಲಿ ಸಂಗಾತಿಯಿಂದಲೇ ಕೊಲೆಯಾದ ನತದೃಷ್ಟರು
ನಂತರ ಗೀತಾ ಮತ್ತು ಟಿಕಿನು ಮೃತದೇಹವನ್ನು ತೆಗೆದುಕೊಂಡು ಹೋಗಿ ಹತ್ತಿರದ ಹೊಲದಲ್ಲಿ ಎಸೆದರು. ಸ್ಥಳೀಯ ನಿವಾಸಿಗಳು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ವಿಮೆ ಹಣದ ಆಸೆಗಾಗಿ ತಮ್ಮನನ್ನೇ ಕೊಂದ ಅಣ್ಣ
ವಿಮೆ ಹಣದ ದುರಾಸೆಗಾಗಿ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರಿನಲ್ಲಿ ನಡೆದಿದೆ. 30 ಲಕ್ಷ ರೂ. ಎಲ್‌ಐಸಿ ಪಾಲಿಸಿ ಹಣ ಲಪಟಾಯಿಸಲು ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿ, ಬೈಕ್ ಅಪಘಾತ ಎಂದು ಕಥೆ ಕಟ್ಟಿದ್ದ. ಆದರೆ, ಪೊಲೀಸರ ತನಿಖೆಯ ವೇಳೆ ಆರೋಪಿಯ ನಿಜಬಣ್ಣ ಬಯಲಾಗಿದೆ.
ಮೃತ ರಮೇಶ್ ಮೂಲತಃ ಆಂಧ್ರಪ್ರದೇಶದವ. ಕಳೆದ 6 ವರ್ಷದಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮತ್ತು ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಹೆಂಡತಿಯಿಂದ ದೂರವಾಗಿ ಮಾಟಮಂತ್ರ ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಅಲ್ಲದೇ ತನ್ನ ಸ್ವಂತ ಅಣ್ಣಂದಿರ ಸಂಸಾರಕ್ಕೆ ಮಾಟಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.
ಕಳೆದ ಜೂನ್ 19ರಂದು ಯಾವುದೋ ನಿಧಿ ಪೂಜೆ ಇದೆ ಎಂದು ರಮೇಶ್‌ನನ್ನು ಶಿರಾ ಅಮರಾಪುರ ರಸ್ತೆ ನಿರ್ಜನ ಪ್ರದೇಶಕ್ಕೆ ಅಣ್ಣ ಹನುಮಂತರಾಜು ಕರೆದೊಯ್ದಿದ್ದ. ಅಲ್ಲಿ ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಕಾರು ಹತ್ತಿಸಲಾಗಿದೆ. ಆಗಲೂ ಪ್ರಾಣ ಹೋಗದಿದ್ದಾಗ ಆರೋಪಿಗಳು ವೈರ್ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಶವ ಹಾಗೂ ಬೈಕನ್ನು ರಸ್ತೆಯಲ್ಲಿ ಹಾಕಿದ್ದರು. ಬಳಿಕ ಬೈಕ್‌ನ ಮುಂಭಾಗವನ್ನು ಇವರೇ ಜಖಂ ಮಾಡಿ ಅಪಘಾತದ ನಾಟಕ ಮಾಡಿದ್ದರು. ಆರೋಪಿ ಹನುಮಂತರಾಜು ಸೇರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.