ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಗಳು ಪ್ರಿಯಕರನೊಟ್ಟಿಗೆ ಎಸ್ಕೇಪ್‌; ಇತ್ತ ಪತಿಗೇ ಚಾಕು ಇರಿದು ಕೊಲೆ ಮಾಡಿದ ಪತ್ನಿ

ಮಗಳು ಪ್ರಿಯಕರನ ಜೊತೆ ಓಡಿ ಹೋದ ವಿಚಾರವಾಗಿ ದಿನೇ ದಿನೇ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆಕ್ರೋಶಕೊಂಡ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮೃತನನ್ನು ಮುರುಗೇಶ್​​ ಎಂದು ಗುರುತಿಸಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಮಗಳು ಪ್ರಿಯಕರನ ಜೊತೆ ಓಡಿ ಹೋದ ವಿಚಾರವಾಗಿ ದಿನೇ ದಿನೇ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆಕ್ರೋಶಕೊಂಡ ಪತ್ನಿಯೇ (Murder Case) ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮೃತನನ್ನು ಮುರುಗೇಶ್​​ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣ ಸಂಬಂಧ ಆರೋಪಿ ಪತ್ನಿ ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ಮುರುಗೇಶ್ ಮತ್ತು ಲಕ್ಷ್ಮೀ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದರು. ಈ ಪೈಕಿ ಮೊದಲ ಮಗಳಿಗೆ ಮದುವೆಯಾಗಿತ್ತು.

ಎರಡನೇ ಮಗಳು ಪ್ರೀತಿಸಿದ ಯುವಕನ ಜೊತೆ ಓಡಿಹೋಗಿದ್ದಾಳೆ. ಈ ವಿಚಾರ ದಂಪತಿ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು. ಪತಿಯ ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಲಕ್ಷ್ಮೀ ಚಾಕುವಿನಿಂದ ಮುರುಗೇಶ್​​ ಎದೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಮುರುಗೇಶ್ ಮೃತಪಟ್ಟಿದ್ದಾನೆ. ಕೊಲೆ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಪತ್ನಿ ಶೀಲದ ಮೆಲೆ ಶಂಕಿಸಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪತ್ತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣಾ ಮೃತ ಮಹಿಳೆಯಾಗಿದ್ದು, ಆರೋಪಿ ಅವಿನಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯನ್ನು ಮರ್ಡರ್​​ ಮಾಡಿ ಬಳಿಕ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಅವಿನಾಶ್‌ ಹೈಡ್ರಾಮಾ ಮಾಡಿದ್ದ.

ಅವಿನಾಶ್​​ ಮತ್ತು ಕಿರಣಾ ದಂಪತಿ ಗ್ರಾಮದಲ್ಲಿ ಅಂಗಡಿ ಹೊಂದಿದ್ದು, ಅದುವೇ ಜೀವನಕ್ಕೆ ಪ್ರಮುಖ ಆಧಾರವಾಗಿತ್ತು. ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಅನ್ಯೋನ್ಯವಾಗಿದ್ದು, ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಆದರೆ, ಕೆಲ ತಿಂಗಳುಗಳಿಂದ ಅವಿನಾಶ್​​ ಮನಸ್ಸಿನಲ್ಲಿ ಪತ್ನಿಯ ಬಗ್ಗೆ ಸಂಶಯ ಮೂಡಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು. ಅಂಗಡಿ ಅಂದಮೇಲೆ ಜನ ಬರೋದು ಹೋಗೋದು ಸಾಮಾನ್ಯ. ಆದರೆ ಇದನ್ನೇ ದೊಡ್ಡದು ಮಾಡಿ ಅವಿನಾಶ್​​ ಜಗಳವಾಡುತ್ತಿದ್ದ. ಎರಡು ದಿನ ಹಿಂದೆ ಇದೇ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದ. ಈ ವೇಳೆ ಅಲ್ಲಿಗೆ ಬಂದ ಕುಟುಂಬದ ಹಿರಿಯರು ದಂಪತಿ ಸಮಾಧಾನ ಮಾಡಿ ಹೋಗಿದ್ರು. ಹಿರಿಯರು ಹೋದ ಬಳಿಕ ಮೊನ್ನೆ ಮಧ್ಯರಾತ್ರಿ ಕಿರಣಾಳ ಮೇಲೆ ಪತಿ ತೀವ್ರವಾಗಿ ಹಲ್ಲೆ ಮಾಡಿದ್ದು, ಈ ವೇಳೆ ಆಕೆ ಪ್ರಾಣ ಬಿಟ್ಟಿದ್ದಾಳೆ.