ಬೆಂಗಳೂರು: ಮೂರು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಕೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ (self herming) ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ (bengluru) ನಡೆದಿದೆ. ವಜ್ರಹಳ್ಳಿ ಪ್ರದೇಶದ ಉಮಾದೇವಿ ಎಂಬಾಕೆ ತನ್ನ ಅವಳಿ ಹೆಣ್ಣು ಮಕ್ಕಳನ್ನು (Twin Daughters) ನೀರಿನಲ್ಲಿ ಮುಳುಗಿಸಿ ಕೊಂಡು ಬಳಿಕ ತಾನು ಆತ್ಮಹತ್ಯೆಗೆ (Bengaluru Woman) ಯತ್ನಿಸಿದ್ದಾರೆ. ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಮಕ್ಕಳ ತಂದೆ ರಾಮಲಿಂಗಪ್ಪ ಸಲ್ಲಿಸಿದ ದೂರಿನ ಪ್ರಕಾರ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಜ್ರಹಳ್ಳಿಯ ಬಿಸಿಸಿ ಎಚ್‌ಎಸ್ ಲೇಔಟ್‌ನಲ್ಲಿ ಗಂಡ ರಾಮಲಿಂಗಪ್ಪ ಅವರೊಂದಿಗೆ ಉಮಾ ದೇವಿ ವಾಸವಾಗಿದ್ದರು. ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದ ಉಮಾದೇವಿ ಮೇ 5 ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಮಂಗಳವಾರ ಮಧ್ಯಾಹ್ನ ರಾಮಲಿಂಗಪ್ಪ ಅವರು ಮನೆಗೆ ಮರಳಿದಾಗ ಮನೆ ಒಳಗೆ ಉಮಾದೇವಿ ಕೋಣೆಯಲ್ಲಿ ಲಾಕ್ ಆಗಿರುವುದು ತಿಳಿದು ಒತ್ತಾಯವಾಗಿ ಬಾಗಿಲು ತೆರೆದಾಗ ಉಮಾದೇವಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ.
ಬಿರಿಯಾನಿ ತಿಂದಿದ್ದಕ್ಕೆ ಶಿಕ್ಷೆ; ನೊಂದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ
ದಂಪತಿಯ ಅವಳಿ ಹೆಣ್ಣು ಮಕ್ಕಳು ಒಂದೇ ಕೋಣೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡುಬಂದಿದ್ದು, ಬಳಿಕ ರಾಮಲಿಂಗಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಶುಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದನ್ನು ಶಂಕರ್ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಉಮಾದೇವಿಯೇ ತನ್ನ ಹೆಣ್ಣುಮಕ್ಕಳ ಸಾವಿಗೆ ಕಾರಣ ಎಂದು ರಾಮಲಿಂಗಪ್ಪ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹೆರಿಗೆ ಬಳಿಕ ಉಮಾದೇವಿಯ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ. ಆಕೆ ಮಕ್ಕಳ ಬಗ್ಗೆ ನಿರಾಸಕ್ತಿ ವಹಿಸಿದ್ದು, ಅವುಗಳನ್ನು ಆಶ್ರಮಕ್ಕೆ ಕಳುಹಿಸುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಳು. ಬಳಿಕ ಆಕೆಗೆ ಮನೋವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆಕೆಯ ನಡವಳಿಕೆಗೆ ಪ್ರಸವಾನಂತರದ ಖಿನ್ನತೆ ಮತ್ತು ಹಾರ್ಮೋನುಗಳ ಅಸಮತೋಲನ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ಉಮಾದೇವಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.