ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಆನ್‌ಲೈನ್ ನಲ್ಲಿ 23 ಲಕ್ಷ ರೂ ವಂಚನೆ

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ, ತಮಗೆ ಆನ್ ಲೈನ್‌ನಲ್ಲಿ 23 ಲಕ್ಷ ವಂಚನೆ ಮಾಡಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆ ವೈವಾಹಿಕ ವೇದಿಕೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದರಿಂದ ಸ್ಕಾಟ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವ ಡಾ. ವಿಹಾನ್ ಮಿಶ್ರಾ ಹೆಸರಿನ ವ್ಯಕ್ತಿ ಸಂಪರ್ಕಿಸಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ, ತಮಗೆ ಆನ್ ಲೈನ್‌ನಲ್ಲಿ 23 ಲಕ್ಷ ವಂಚನೆ ಮಾಡಿರುವುದಾಗಿ (Online Fraud Case) ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆ ವೈವಾಹಿಕ ವೇದಿಕೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದರಿಂದ ಸ್ಕಾಟ್ಲೆಂಡ್ ನಲ್ಲಿ ಕೆಲಸ ಮಾಡುತ್ತಿರುವ ಡಾ. ವಿಹಾನ್ ಮಿಶ್ರಾ ಹೆಸರಿನ ವ್ಯಕ್ತಿ ಸಂಪರ್ಕಿಸಿದ್ದಾರೆ. ಆತ ಸ್ಕಾಟ್ಲೆಂಡ್ ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.

ಪರಿಚಯ ಮತ್ತು ಸಂಭಾಷಣೆ ಹಲವು ವಾರಗಳ ಕಾಲ ನಡೆದಿದ್ದು, ಇಬ್ಬರೂ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ವೃತ್ತಿ ಮತ್ತು ಕುಟುಂಬದ ಹಿನ್ನೆಲೆ ಮುಂತಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಕಳೆದ ಮೇ 4, 2026 ರಂದು ವಿಹಾನ್ ಮಿಶ್ರ ಬಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದು, ಈ ಸಂದರ್ಭದಲ್ಲಿ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುವುದಾಗಿ ನಂಬಿಸಿದ್ದಾನೆ.

ಆತ ಮೇ 4, ರಂದು ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅವನು ಬ್ರಿಟಿಷ್ ಪ್ರಜೆಯಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ನೇಹಾರಾಣಿ ಎಂಬಾಕೆ ದೂರವಾಣಿ ಕರೆ ಮಾಡಿ ತಾವು ವಲಸೆ ಅಧಿಕಾರಿ ಎಂದು ಹೇಳಿದ್ದಾರೆ. ಮತ್ತು ಇಡೀ ಪ್ರಕರಣಕ್ಕೆ ನಾಟಕೀಯ ತಿರುವು ನೀಡಿದ್ದಾರೆ. ಮಿಶ್ರಾ ಅವರು ಚಿನ್ನ ಮತ್ತು ಬ್ರಿಟಿಷ್ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸುವ ಅಗತ್ಯವಿದೆ. ಆದ್ದರಿಂದ ಇದರ ನೋಂದಣಿ, ಕ್ಲಿಯರೆನ್ಸ್ ಮತ್ತು ಸಂಸ್ಕರಣಾ ಶುಲ್ಕಗಳು ಸೇರಿದಂತೆ ವಿವಿಧ ಉದ್ದೇಶಿತ ಶುಲ್ಕಗಳಿಗಾಗಿ ಬಹು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ವಂಚಕರು ಸೂಚಿಸಿದ್ದಾರೆ.

ಮೇ 4 ರಂದು ಮತ್ತು ಮೇ 6 ರಂದು ಎರಡು ಬ್ಯಾಂಕ್ ಖಾತೆಗಳಿಗೆ ಸುಮಾರು 23.5 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕೆ ವರನೆಂದು ಹೇಳಲಾದ ವ್ಯಕ್ತಿಯ ಸಂಪರ್ಕ ಸಾಧ್ಯವಾಗುತ್ತಿಲ್ಲ ಮತ್ತು ಆತ ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ. ಆತನ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಹೋಗುತ್ತಿಲ್ಲ ಎಂದು ವಂಚನೆಗೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Vishakha Bhat Heggar

View all posts by this author