ಮುಂಬೈ, ಆ.28: ಭಾರತದಾದ್ಯಂತ ಹಲವಾರು ಸೈಬರ್ ವಂಚನೆ ಪ್ರಕರಣಗಳಲ್ಲಿ (Cyber Fraud Cases) ತನ್ನ ಬ್ಯಾಂಕ್ ಖಾತೆಯನ್ನು ಬಳಸಲಾಗಿದೆ ಎಂದು ತಿಳಿದು ಆತಂಕಗೊಂಡ 38 ವರ್ಷದ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಮೃತರನ್ನು ದೇವಿಕಾ ಆರ್ಮುಗಂ ಪಂಡಾರಂ ಎಂದು ಗುರುತಿಸಲಾಗಿದೆ.
ರಾಜಸ್ಥಾನದ ಚುರು ಸೈಬರ್ ಸೆಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಸ್ಟ್ 8 ರಂದು ಪಂಡಾರಂ ಅವರ ಮನೆಗೆ ಭೇಟಿ ನೀಡಿದ್ದರು. ಅವರ ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾತೆಯನ್ನು ಆನ್‌ಲೈನ್ ವಂಚನೆಗಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದರು.
ಸ್ಪಷ್ಟೀಕರಣ ಕೋರಿ ಅವರು ಥಾಣೆ ಪೊಲೀಸ್ ಕಮಿಷನರೇಟ್‌ನಲ್ಲಿರುವ ಸೈಬರ್ ಅಪರಾಧ ವಿಭಾಗವನ್ನು ಸಂಪರ್ಕಿಸಿದರು. ಹರಿಯಾಣ, ರಾಜಸ್ಥಾನ, ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅವರ ವಿರುದ್ಧ ಹಲವಾರು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕಮಿಷನರೇಟ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಕ್ರೈಮ್: ಬೆಂಗಳೂರಿನ 74 ವರ್ಷದ ಮಹಿಳೆಗೆ 24 ಕೋಟಿ ರೂ. ವಂಚನೆ
ಪೊಲೀಸರ ವಿಚಾರಣೆ ಎದುರಿಸಲು ವಿವಿಧ ರಾಜ್ಯಗಳಿಗೆ ಪ್ರಯಾಣಿಸುವ ಸಾಧ್ಯತೆಯ ಬಗ್ಗೆ ಭಯಭೀತರಾದ ಪಂಡಾರಾಮ್, ಹರಿತವಾದ ಬ್ಲೇಡ್‌ನಿಂದ ತನ್ನ ಮಣಿಕಟ್ಟು ಮತ್ತು ಗಂಟಲು ಕತ್ತರಿಸಿಕೊಂಡಿದ್ದಾರೆ. ಕುಟುಂಬಸ್ಥರು ಕೂಡಲೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಟ್ರೈನ್ ಡಿಕ್ಕಿ ಹೊಡೆದು ಎರಡೂ ಕೈ ಕಳೆದುಕೊಂಡ 19 ವರ್ಷದ ಯುವತಿ
19 ವರ್ಷದ ಯುವತಿಯೊಬ್ಬಳು ರೈಲ್ವೆ ಹಳಿಯ ಬಳಿ ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಆಕೆಯ ಎರಡೂ ಕೈಗಳು ತುಂಡಾಗಿವೆ. ನಗರ-ಉಂಟಾರಿ ರೈಲ್ವೆ ವಿಭಾಗದ ಬಳಿ ರಾಂಚಿ-ಚೋಪನ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಪೂರ್ಣಿಮಾ ಕುಮಾರಿ ತೀವ್ರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಆಕೆಯ ಎರಡೂ ಕೈಗಳು ತುಂಡಾಗಿದ್ದು, ದೇಹದ ಇತರ ಭಾಗಗಳಿಗೂ ಗಾಯಗಳಾಗಿವೆ.
ಗರ್ಹ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಶೋಕ್ ವಿಹಾರ್ ಪ್ರದೇಶದ ನಿವಾಸಿ ಧೀರಜ್ ಸಿಂಗ್ ಎಂಬವವರ ಪುತ್ರಿ ಪೂರ್ಣಿಮಾ, ಸ್ನೇಹಿತೆಯರೊಂದಿಗೆ ರೈಸಾದಲ್ಲಿ ರೈಲ್ವೆ ಮಾರ್ಗದ ಬಳಿ ಹೋಗಿದ್ದಳು. ಪೂರ್ಣಿಮಾ, ಗೆಳತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಳು. ಈ ವೇಳೆ ರಾಂಚಿ ಕಡೆಯಿಂದ ಬರುತ್ತಿದ್ದ ರೈಲಿನ ವೇಗ ಮತ್ತು ದೂರವನ್ನು ತಪ್ಪಾಗಿ ಊಹಿಸಿದ್ದಳು. ಇದರಿಂದ ಡಿಕ್ಕಿ ಸಂಭವಿಸಿದೆ.