ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನೆ ತುಂಬಾ ಸಿಸಿಟಿವಿ, ಹೆಜ್ಜೆ ಹೆಜ್ಜೆಗೂ ಅನುಮಾನ; ಮದುವೆಯಾದ ಕೇವಲ 48 ದಿನಗಳಲ್ಲೇ ನವವಧು ಆತ್ಮಹತ್ಯೆಗೆ ಶರಣು

Woman Dies by Self harming: ವೈದ್ಯನನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ಪತಿಯೊಂದಿಗೆ ವಾಸವಾಗಿದ್ದ ವಿಶಾಖಾ, ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕಾಗಿ ಅತ್ತೆ, ಮೈದುನನಿಂದ ಹಲ್ಲೆಗೊಳಗಾಗಿದ್ದಳು ಎಂದು ಅವರ ಕುಟುಂಬ ಆರೋಪಿಸಿದೆ.

ನವವಧು ಆತ್ಮಹತ್ಯೆಗೆ ಶರಣು

ಮುಂಬೈ, ಜೂ.18: ವೈದ್ಯನನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈ (Mumbai) ನಲ್ಲಿ ನಡೆದಿದೆ. 26 ವರ್ಷದ ವಿಶಾಖಾ ತಿಲ್ಕರ್ ಮೃತ ದುರ್ದೈವಿ. ಮದುವೆಯಾದ ಕೇವಲ 48 ದಿನಗಳಲ್ಲೇ ಪತಿ ಮತ್ತು ಅತ್ತೆ, ಮೈದುನನ ಕಿರುಕುಳದಿಂದ ಜೀವನ ಅಸಹನೀಯವಾಗಿದ್ದು, ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಯಿತು ಎಂದು ಆರೋಪಿಸಲಾಗಿದೆ (crime news).

ಮುಂಬೈನಲ್ಲಿ ಪತಿಯೊಂದಿಗೆ ವಾಸವಾಗಿದ್ದ ವಿಶಾಖಾ, ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕಾಗಿ ಅತ್ತೆ, ಮೈದುನನಿಂದ ಹಲ್ಲೆಗೊಳಗಾಗಿದ್ದಳು ಎಂದು ಅವರ ಕುಟುಂಬ ಆರೋಪಿಸಿದೆ. ಆದರೆ ಕಿರುಕುಳ ಕೇವಲ ದೈಹಿಕವಾಗಿ ಮಾತ್ರ ಅಲ್ಲ, ಮಾನಸಿಕ ಕಿರುಕುಳವೂ ಇತ್ತು ಎನ್ನಲಾಗಿದೆ. ದಂಪತಿಯ ಮನೆಯಲ್ಲಿ ಒಳಗೆ ಮತ್ತು ಹೊರಗೆ ಎಲ್ಲೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ವೈದ್ಯ ಪತಿ ನಿತಿನ್ ತಿಲ್ಕರ್, ವಿಶಾಖಾಳ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡುತ್ತಿದ್ದ. ಇದರಿಂದ ಆಕೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆ ಸಂಪೂರ್ಣವಾಗಿ ಕಸಿದುಕೊಳ್ಳಲ್ಪಟ್ಟಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಏಪ್ರಿಲ್ 30 ರಂದು ಈ ದಂಪತಿ ವಿವಾಹವಾದರು. ಮದುವೆಗೆ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಯಿತು ಎಂದು ವಿಶಾಖಾ ಅವರ ಕುಟುಂಬ ತಿಳಿಸಿದೆ. ವಿವಾಹದ ಸಮಯದಲ್ಲಿ ಅವರು ಬಯಸಿದಷ್ಟು ಉಡುಗೊರೆಗಳು ಅಥವಾ ವರದಕ್ಷಿಣೆಯನ್ನು ಕೊಡದ ಕಾರಣ ಆಕೆಯ ಅತ್ತೆ-ಮಾವ ಅಸಮಾಧಾನಗೊಂಡಿದ್ದರು ಎಂದು ವಿಶಾಖಾ ಕುಟುಂಬ ಆರೋಪಿಸಿದೆ.

ವರದಕ್ಷಿಣೆ ಕೊಡದ್ದಕ್ಕೆ ಪತಿ, ಅತ್ತೆ-ಮಾವನಿಂದ ಚಿತ್ರಹಿಂಸೆ ಆರೋಪ; ಸೊಸೆ ತಲೆ ಬೋಳಿಸಿ ದೌರ್ಜನ್ಯ ನೀಡಿದ ಕಿರಾತಕರು

ಪೋಷಕರ ಮನೆಯಿಂದ ಆಭರಣ ಮತ್ತು ಹಣವನ್ನು ತರುವಂತೆ ಆಕೆಗೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು. ಪತಿ ನಿತಿನ್ ತಿಲ್ಕರ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಆಕೆಯ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದ. ನೆರೆಹೊರೆಯವರೊಂದಿಗೆ ಮಾತನಾಡಿದಾಗಲೆಲ್ಲಾ, ಮನೆಗೆ ಬಂದ ಬಳಿಕ ಆಕೆಯನ್ನು ಕ್ರೂರವಾಗಿ ಥಳಿಸಲಾಗುತ್ತಿತ್ತು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲು, ನೆರೆಹೊರೆಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ಅವಳನ್ನು ಥಳಿಸಲಾಯಿತು. ಇದರಿಂದ ನೊಂದು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ವಿಶಾಖಾ ತನ್ನ ತಾಯಿಗೆ ತಾನು ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಳು. ಪೋಷಕರು ಆಕೆಯನ್ನು ಮನೆಗೆ ಕರೆತರುವ ಪ್ರಕ್ರಿಯೆಯಲ್ಲಿದ್ದಾಗ, ಆಕೆ ನೇಣು ಬಿಗಿದುಕೊಂಡಿದ್ದಾಳೆ ಎಂಬ ಸುದ್ದಿ ಅವರಿಗೆ ತಲುಪಿತು ಎಂದು ಕುಟುಂಬ ತಿಳಿಸಿದೆ.

ಇನ್ನು ಈ ಸಂಬಂಧ ಅಂಬರ್‌ನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ನಿತಿನ್ ತಿಲ್ಕರ್, ಅತ್ತೆ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಮಾನಸಿಕ ಮತ್ತು ದೈಹಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಾಗಿದ್ದು, ನಿತಿನ್‌ನನ್ನು ಬಂಧಿಸಲಾಗಿದೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.