ಮುಂಬೈ, ಸೆ. 27: ಗರ್ಭಿಣಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ (Crime News). ಗರ್ಭಿಣಿಯನ್ನು ಬೆಂಕಿ ಹಚ್ಚಿ ಕೊಂದ ನಾಲ್ವರು ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಧುಲೆ-ಸೋಲಾಪುರ ಹೆದ್ದಾರಿಯ ಗರತದ್ ಬಾರಿ ಪ್ರದೇಶದ ಬಳಿ ಗರ್ಭಿಣಿಯ ಸುಟ್ಟ ಮೃತದೇಹ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ಆರಂಭಿಸಿ 11 ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ತಾಂತ್ರಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಶಂಕಿತ ವಾಹನವನ್ನು ಪತ್ತೆಹಚ್ಚಿದ್ದಾರೆ. ಅದು ಜಾಮಖೇಡ್‌ನ ಸಪ್ತಸುರ ಕಲ್ಚರಲ್ ಆರ್ಟ್ ಸೆಂಟರ್‌ಗೆ ಸೇರಿದ್ದು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.
ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಆಂತರಿಕ ವಿವಾದದ ನಂತರ ಬೀಡ್ ಜಿಲ್ಲೆಯ ಬಳಿ ಪಿಂಕಿ ಹನುಮಂತ್ ಕಟ್ಕಾ ಎಂಬ 31 ವರ್ಷದ ಗರ್ಭಿಣಿಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವುದು ಗೊತ್ತಾಗಿದೆ. ಹಲ್ಲೆಯ ಸಮಯದಲ್ಲಿ ಪ್ರಜ್ಞೆ ತಪ್ಪಿದ ನಂತರ ಆಕೆ ಮೃತಪಟ್ಟಿದ್ದಾರೆಂದು ಆರೋಪಿಗಳು ಭಾವಿಸಿದ್ದರು. ಹೀಗಾಗಿ ʼಮೃತದೇಹʼ ವಿಲೇವಾರಿ ಮಾಡಲು ಸಂಚು ರೂಪಿಸಿದ್ದರು.
ಮನೆಯಲ್ಲಿ ಸುಳ್ಳು ಹೇಳಿ ಮುಸ್ಲಿಂ ಸ್ನೇಹಿತನೊಂದಿಗೆ ಹೋಮ್ ಸ್ಟೇಗೆ ತೆರಳಿದ ಹಿಂದೂ ಯುವತಿಯ ನಿಗೂಢ ಕೊಲೆ
ಗರ್ಭಿಣಿಯನ್ನು ಕಾರಿನಲ್ಲಿ ಸಾಗಿಸಿ 275 ಕಿ.ಮೀ. ದೂರದಲ್ಲಿರುವ ಧುಲೆಗೆ ತರಲಾಯಿತು. ನಂತರ ಆರೋಪಿಗಳು ಮೃತದೇಹದ ಮೇಲೆ ಪೆಟ್ರೋಲ್ ಸುರಿದು ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೆಂಕಿ ಹಚ್ಚಿದರು. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿವೆ.
ಹರಿತವಾದ ಆಯುಧದಿಂದ ಪತ್ನಿ ಮತ್ತು ಮಗಳನ್ನು ಕೊಂದ ಪಾಪಿ
ತಾಯಿ ಮತ್ತು ಮಗಳ ಮೃತದೇಹ ಪತ್ತೆಯಾದ ಘಟನೆ ಪಂಜಾಬ್‌ನ ಬಟಾಲಾದ ಅಲಿವಾಲ್ ರಸ್ತೆಯಲ್ಲಿರುವ ಫ್ರೆಂಡ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಬಬ್ಲಿ ಮತ್ತು ಆಕೆಯ ಮಗಳು ತಮನ್ನಾ ಎಂದು ಗುರುತಿಸಲಾಗಿದೆ. ಬಬ್ಲಿ ಅವರ ಪತಿ ಜಸ್ವಿಂದರ್ ಮಸಿಹ್ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.