ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನೆಯಲ್ಲಿ ಸುಳ್ಳು ಹೇಳಿ ಮುಸ್ಲಿಂ ಸ್ನೇಹಿತನೊಂದಿಗೆ ಹೋಮ್‌ ಸ್ಟೇಗೆ ತೆರಳಿದ ಹಿಂದೂ ಯುವತಿಯ ನಿಗೂಢ ಕೊಲೆ; ಕೊನೆಯ ಬಾರಿ ತಾಯಿಗೆ ಕರೆ ಮಾಡಿ ತಿಳಿಸಿದ್ದೇನು?

Love Jihad: ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ ಹೋಮ್‌ಸ್ಟೇ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ತಾಯಿಗೆ ಫೋನ್ ಮಾಡಿದ್ದ ಅವರು, ತನ್ನ ಮೇಲೆ ಹಲ್ಲೆ ನಡೆಯುತ್ತಿದ್ದು ಕೊಲ್ಲಲು ಯತ್ನಿಸುತ್ತಿರುವುದಾಗಿ ಹೇಳಿದ್ದರು. ಪ್ರಕರಣ ಸಂಬಂಧ ಆಕೆಯ ಸ್ನೇಹಿತ ಆಸಿಫ್ ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ದಿಸ್‌ಪುರ, ಸೆ. 26: ಅಸ್ಸಾಂನ ಗುವಾಹಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ (Nimisha Thakuria) ನಗರದ ಹೊರವಲಯದ ಗರಾಲ್‌ನಲ್ಲಿರುವ ಹೋಮ್‌ಸ್ಟೇ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಅವರು ತಾಯಿಗೆ ಕರೆ ಮಾಡಿ, “ಅಮ್ಮಾ.. ಅವರು ನನ್ನನ್ನು ಕೊಂದು ಹಾಕುತ್ತಾರೆ!” ಎಂದು ಆತಂಕದಿಂದ ಹೇಳಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಸ್ನೇಹಿತ ಆಸಿಫ್ ಆಲಿ (Asif Ali) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲವ್‌ ಜಿಹಾದ್‌ (Love Jihad) ಆರೋಪ ಕೇಳಿ ಬಂದಿದೆ.

ಈ ಕೊಲೆ ಪ್ರಕರಣವು ಗುವಾಹಟಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಲವ್‌ ಜಿಹಾದ್‌ಗೆ ಯುವತಿ ಬಲಿ:



ಅಮ್ಮಾ, ಅವರು ನನ್ನನ್ನು ಕೊಲ್ಲುತ್ತಾರೆ-ನಿಮಿಷಾ ಮಧ್ಯರಾತ್ರಿಯ ಕರೆ

ಧಾರಪುರ ನಿವಾಸಿಯಾದ ಮೃತ ನಿಮಿಷಾ ಗುವಾಹಟಿ ವಿಶ್ವವಿಗದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಓದುತಿದ್ದರು. ನಿಮಿಷಾ ಸಂಜೆ 5 ಗಂಟೆಯ ಸುಮಾರಿಗೆ ಗೆಳತಿಯ ಮನೆಗೆ ಹೋಗುವುದಾಗಿ ತನ್ನ ತಾಯಿಗೆ ಹೇಳಿದ್ದರು. ಆದರೆ ನಿಮಿಷಾ ಸ್ನೇಹಿತ ಆಸಿಫ್ ಅಲಿ ಜತೆ ಗರಾಲ್‌ನಲ್ಲಿರುವ ಹೋಮ್‌ಸ್ಟೇಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ತಾಯಿ ಕರೆ ಮಾಡಿದಾಗ, ಊಟ ಮಾಡುತ್ತಿದ್ದು ತಡವಾದರೆ ಗೆಳತಿಯ ಮನೆಯಲ್ಲೇ ತಂಗುವುದಾಗಿ ತಿಳಿಸಿದ್ದರು. ಆದರೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ನಿಮಿಷಾ ಮತ್ತೆ ತಾಯಿಗೆ ಕರೆ ಮಾಡಿ ಅಳುತ್ತಾ, "ಅಮ್ಮ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಕೊಂದು ಹಾಕುತ್ತಾರೆ" ಎಂದು ಹೇಳಿದ್ದಳು. ತಕ್ಷಣವೇ ಆಕೆಯ ಫೋನ್ ಅನ್ನು ಯಾರೋ ಕಸಿದುಕೊಂಡರು ಎಂದು ನಿಮಿಷಾ ತಾಯಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಅಜಾರಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ಲವ್‌ ಜಿಹಾದ್‌, ಮತಾಂತರ, ʼಪ್ರಕಾಶ ರಾಮಯಣʼ, ಪೊಂಗಲ್‌ ಊಟದಲ್ಲಿ ಖರ್ಜೂರ; ಸನಾತನ ಧರ್ಮದ ವಿರುದ್ಧ ಮುಂದುವರಿದ ದಾಳಿ

ಪ್ರಕರಣದ ತನಿಖೆ ನಡೆಸಿರುವ ಗುವಾಹಟಿ ಪಶ್ಚಿಮ ಉಪ ಪೊಲೀಸ್ ಆಯುಕ್ತ ಬೋಲಿನ್ ದೇವೂರಿ ನೀಡಿರುವ ಮಾಹಿತಿಯ ಪ್ರಕಾರ, ನಿಮಿಷಾ ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲಿ ತಿಳಿಸಿದ್ದಾನೆ. ಆದರೆ ನಾವು ಆತನ ವಾದವನ್ನು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ,ʼʼ ಎಂದು ಹೇಳಿದ್ದಾರೆ. "ತನಿಖೆಯು ಆರಂಭಿಕ ಹಂತದಲ್ಲಿದೆ. ಇದನ್ನು ಕೊಲೆ ಎಂದು ನಾವು ಶಂಕಿಸಿದ್ದೇವೆ, ಮೃತದೇಹ ಅಥವಾ ನೆಲದ ಮೇಲೆ ಯಾವುದೇ ರಕ್ತದ ಕಲೆ ಕಂಡುಬಂದಿಲ್ಲ, ಹೀಗಾಗಿ ನಮ್ಮ ತನಿಖೆ ಮುಂದುವರಿದಿದೆʼʼ ಎಂದು ತಿಳಿಸಿದ್ದಾರೆ.

ಹೋಮ್‌ಸ್ಟೇ ಕೇರ್‌ಟೇಕರ್‌ ಹೇಳಿಕೆ

ಹೋಮ್‌ಸ್ಟೇನ ಅಡುಗೆಯವ ಮತ್ತು ಕೇರ್‌ಟೇಕರ್ ಬಿಪುಲ್ ಬೈಲುಂಗ್ ನೀಡಿರುವ ಹೇಳಿಕೆ ಪ್ರಕಾರ, ರಾತ್ರಿಯ ವೇಳೆ ಪುರುಷನೊಬ್ಬ ಕೂಗಾಡುತ್ತಿರುವುದು ಕೇಳಿಸಿತ್ತು. "ಅವರು ಕೊಠಡಿಯನ್ನು ಯಾವಾಗ ಕಾಯ್ದಿರಿಸಿದ್ದರು ಅಥವಾ ಯಾವಾಗ ಬಂದರು ಎಂದು ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಆ ಸಮಯದಲ್ಲಿ ಪುರುಷನ ಧ್ವನಿಯೊಂದು ದಾದಾ, ಎದ್ದೇಳಿ, ಎದ್ದೇಳಿ ಎಂದು ಯಾರನ್ನೋ ಏಳಿಸುತ್ತಿರುವಂತೆ ಜೋರಾಗಿ ಕೂಗುತ್ತಿದ್ದುದ್ದು ನನಗೆ ಕೇಳಿಸಿತು ಎಂದು ಬೈಲುಂಗ್ ಹೇಳಿದರು. ನಾವು ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ನಂತರ ಮತ್ತೆ ಕೊಠಡಿಯಿಂದ ಅಳುವ ಸದ್ದು ಕೇಳಿಸಿತು. ಒಳಗೆ ಹೋಗಿ ನೋಡಿದಾಗ ಯುವಕನೊಬ್ಬ ನೆಲದ ಮೇಲೆ ಬಿದ್ದಿದ್ದ ಯುವತಿಯ ದೇಹವನ್ನು ಹಿಡಿದುಕೊಂಡಿದ್ದ ಎಂದರು.

ʼʼನಂತರ ನಾನು ಮಾಲಕರಿಗೆ ಕರೆ ಮಾಡಿದೆ. ಅವರು ಬಂದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅವರು ಹೊರಟುಹೋದರು" ಎಂದು ಬೈಲುಂಗ್ ಹೇಳಿದರು. ನಿಮಿಷಾ ಮತ್ತು ಅವರ ಸ್ನೇಹಿತ ರೂಮ್‌ ನಂಬರ್‌ 10 ಅನ್ನು ಬುಕ್ ಮಾಡಿದ್ದರು. ಆದರೆ ಕೊಠಡಿ 9 ಖಾಲಿ ಇದ್ದುದರಿಂದ ಅದನ್ನು ಸಹ ಬಳಸಿದ್ದರು. ಇವರಿಬ್ಬರೂ ಹಿಂದೆಯು ಕೂಡಾ ಈ ಹೋಮ್‌ಸ್ಟೇನಲ್ಲಿ ತಂಗಿದ್ದರು ಎಂದು ಕೆಲವು ಸಿಬ್ಬಂದಿ ತಿಳಿಸಿದ್ದಾರೆ.

ಗಾಂಜಾ ಗಿರಾಕಿಯ ಲವ್‌ ಜಿಹಾದ್‌; ಮೊಬೈಲ್‌ನಲ್ಲಿ ಯುವತಿಯರ 7000ಕ್ಕೂ ಹೆಚ್ಚು ಫೋಟೋ!

ಪ್ರತಿಭಟನೆ ಮತ್ತು 'ಲವ್ ಜಿಹಾದ್' ಆರೋಪ

ಮೃತ ಯುವತಿ ಹಿಂದೂ ಧರ್ಮಕ್ಕೆ ಸೇರಿದವಳಾಗಿದ್ದು, ಬಂಧಿತ ಪ್ರಿಯಕರ ಮುಸ್ಲಿಂ ಸಮುದಾಯದವನಾಗಿದ್ದರಿಂದ ಈ ಘಟನೆ ಕೋಮು ಬಣ್ಣ ಪಡೆದುಕೊಂಡಿದೆ. ವಿವಿಧ ಬಲಪಂಥೀಯ ಸಂಘಟನೆಗಳು 'ಲವ್ ಜಿಹಾದ್' ಆರೋಪ ಮಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಿದವು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author