ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Love Jihad: ಗಾಂಜಾ ಗಿರಾಕಿಯ ಲವ್‌ ಜಿಹಾದ್‌; ಮೊಬೈಲ್‌ನಲ್ಲಿ ಯುವತಿಯರ 7000ಕ್ಕೂ ಹೆಚ್ಚು ಫೋಟೋ! ಅಂತಾರಾಷ್ಟ್ರೀಯ ಮಟ್ಕಾ ಬುಕ್ಕಿಗಳ ಲಿಂಕ್!

ಹಿಂದೂ ಸಂಘಟನೆಗಳ ಕಾರ್ಯಕರ್ತರು ಯುವಕನ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಫೋನ್‌ನಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್‌ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಗೊತ್ತಾಗಿದೆ.

ಗಾಂಜಾ ಗಿರಾಕಿಯ ಲವ್‌ ಜಿಹಾದ್‌; ಅಂತಾರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್!

ಆರೋಪಿ ಮುಸ್ತಫ -

ಹರೀಶ್‌ ಕೇರ
ಹರೀಶ್‌ ಕೇರ Apr 13, 2026 10:03 AM

ಕೊಪ್ಪಳ, ಏ.13 : ಹುಬ್ಬಳ್ಳಿಯಲ್ಲಿ (Hubballi) ಲವ್ ಜಿಹಾದ್ (Love Jihad) ಪ್ರಕರಣ ಸದ್ದು ಮಾಡಿದ ಬಳಿಕ ಸದ್ಯ ಕೊಪ್ಪಳದಲ್ಲೂ (koppala) ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ (muslim) ಯುವಕನೊಬ್ಬ 16ಕ್ಕೂ ಹೆಚ್ಚು ಹಿಂದೂ (hindu) ಯುವತಿಯರ ಸುಮಾರು 7 ಸಾವಿರ ಅಶ್ಲೀಲ ರೀತಿಯ ಫೋಟೋಗಳನ್ನು ಫೋನ್‌ನಲ್ಲಿ ಇಟ್ಟುಕೊಂಡು ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಸದ್ಯ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ.

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ಲಿಂ ಯುವಕ ಮುಸ್ತಫಾ ಎಂಬಾತನ ಬಳಿ, 16 ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆಗಿನ ಫೋಟೋ ಹಾಗೂ ಅಶ್ಲೀಲ ವಿಡಿಯೊಗಳು ಪತ್ತೆಯಾಗಿವೆ. ಈತ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಅವರಿಗೆ ಡ್ರಗ್ಸ್ ನೀಡಿ ಅಶ್ಲೀಲ ವಿಡಿಯೊಗಳನ್ನು ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಜೊತೆಗೆ ತಾನೂ ಗಾಂಜಾ ಸೇದುವ ವಿಡಿಯೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಈ ಕುರಿತು ದೂರು ನೀಡಿದ್ದಾರೆ.

ಮುಸ್ತಫಾ ಖಾದ್ರಿ ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿದ್ಯಾರ್ಥಿನಿಯೊಂದಿಗೆ ಸಂಶಯಾಸ್ಪದ ಹಾಗೂ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಎಂದು ದೂರು ಬಂದಿತ್ತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಯುವಕನ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಫೋನ್‌ನಲ್ಲಿ ಮೂರು ಸಾವಿರ ಫೋಟೊಗಳು, ಆರು ಸಾವಿರ ವಿಡಿಯೊಗಳು, ಮತ್ತೊಂದು ಫೋನ್‌ನಲ್ಲಿ ನಾಲ್ಕು ಸಾವಿರ ಯುವತಿಯರ ಫೋಟೊಗಳು ಹಾಗೂ 3,700 ವಿಡಿಯೊಗಳು ಇರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

Koppal Love Jihad case: ಹುಬ್ಬಳ್ಳಿ ಬಳಿಕ ಕೊಪ್ಪಳದಲ್ಲಿ ಲವ್ ಜಿಹಾದ್ ಪ್ರಕರಣ; ಮುಸ್ತಫಾ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಫೋಟೊ, ವಿಡಿಯೊಗಳು!

ಆರೋಪಿ ಮುಸ್ತಫ ಖಾದ್ರಿಗೆ ಮಟ್ಕಾ ಬುಕ್ಕಿಗಳ ಲಿಂಕ್ ಕೂಡ ಇದೆ ಎಂದು ತಿಳಿದು ಬಂದಿದೆ. ಆರೋಪಿ ಮುಸ್ತಫ ಖಾದ್ರಿ ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು ಗೋವಾ ಮತ್ತು ಮುಂಬೈ ಇಬ್ಬರು ಮಟ್ಕಾ ಬುಕ್ಕಿಗಳ ಜೊತೆಗೆ ಲಿಂಕ್ ಹೊಂದಿದ್ದಾನೆ ಎನ್ನಲಾಗಿದೆ. ಮಟ್ಕಾ ಬುಕ್ಕಿಗಳು ಈತನಿಗೆ ಹಣದ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಹುಡುಗಿಯರ ಜೊತೆಗಿನ ಅಶ್ಲೀಲ ಫೋಟೋ ವಿಡಿಯೋಗಳನ್ನು ಮುಸ್ತಫ ಬೇರೆಯವರಿಗೆ ರವಾನಿಸಿರುವ ಹಾಗೂ ಇವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿರುವ ಸಾಧ್ಯತೆಗಳು ಇವೆ ಎಂದು ಈ ಬಗ್ಗೆ ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್ ದೂರು ನೀಡಿದೆ.