ಇಂದೋರ್, ಜೂ. 21: 30 ವರ್ಷದ ಬುಡಕಟ್ಟು ಮಹಿಳೆಯ ಮೇಲೆ ಆಕೆಯ 12 ವರ್ಷದ ಮಗನ ಮುಂದೆಯೇ ಸಾಮೂಹಿಕ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ ಜಿಲ್ಲೆಯ ಜಮೀನೊಂದರಲ್ಲಿ ನಡೆದಿದೆ. ದರೋಡೆ ಮಾಡಲು ಆವರಣಕ್ಕೆ ಪ್ರವೇಶಿಸಿದ್ದ ಕಳ್ಳರು (Crime News) ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ .
ಸಂತ್ರಸ್ತೆಯ ದೂರಿನ ಪ್ರಕಾರ, ಉಜ್ಜಯಿನಿಯ ಬದ್ನಗರ ಪ್ರದೇಶದ ಜಮೀನಿಗೆ ಮಧ್ಯರಾತ್ರಿ ಸುಮಾರಿಗೆ ಐವರು ದಾಳಿಕೋರರು ಆಗಮಿಸಿದರು. ಆ ಸಮಯದಲ್ಲಿ ಮಹಿಳೆ, ಆಕೆಯ ಪತಿ ಮತ್ತು ದಂಪತಿಯ ಮಗ ತಾತ್ಕಾಲಿಕ ಗುಡಿಸಲಿನಲ್ಲಿ ಮಲಗಿದ್ದರು. ಆ ಕುಟುಂಬವು ಜಮೀನಿನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳು ಮಲಗಿದ್ದ ಕುಟುಂಬವನ್ನು ಎಬ್ಬಿಸಿ, ಗಂಡನನ್ನು ಹೊರಗೆ ಎಳೆದುಕೊಂಡು ಹೋಗಿ, ಬಂದೂಕಿನಿಂದ ಹಲ್ಲೆ ನಡೆಸಿದ್ದಾರೆ. ಕೆಲವರು ಹತ್ತಿರದ ವಿಂಡ್‌ಮಿಲ್‌ನಿಂದ ವೈರ್‌ಗಳನ್ನು ಕದ್ದರೆ, ಇತರರು ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಮುಂದಾದರು.
ದುಷ್ಕರ್ಮಿಗಳು ತನ್ನನ್ನು ಮತ್ತು ಮಗನನ್ನು ಹತ್ತಿರದ ಪೊದೆಗೆ ಕರೆದೊಯ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ಮಗುವಿನ ಸಮ್ಮುಖದಲ್ಲೇ ಬಂದೂಕು ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ, ಮೂವರು ಕಿಡಿಗೇಡಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಬಾಲಕನನ್ನು ಬಂದೂಕಿನಿಂದ ಬೆದರಿಸಿ ಮೌನವಾಗಿರುವಂತೆ ಬಲವಂತಪಡಿಸಿದ್ದಾರೆ. ಈ ಇಡೀ ಘಟನೆಯು ಮಹಿಳೆ ಮತ್ತು ಆಕೆಯ ಮಗನನ್ನು ತೀವ್ರ ಆಘಾತಕ್ಕೆ ದೂಡಿದೆ.
ಪತ್ನಿ ಮೇಲೆ ಕ್ರೂರ ಹಲ್ಲೆ: ಹೆಂಡತಿಯ ತಲೆ ಬೋಳಿಸಿ, ಮೂತ್ರ ಕುಡಿಸಿದ ಪತಿ
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಿಚಿತ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ಎಂದು ಸಂತ್ರಸ್ತೆ ಮತ್ತು ಆಕೆಯ ಮಗ ಆರೋಪಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಐದು ಮಂದಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಪತಿಯನ್ನು ಕೋಣೆಯಲ್ಲಿ ಬಂಧಿಸಿ, ಆತನ ಪತ್ನಿಯ ಮೇಲೆ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬಿಹಾರದ ಬೆಗುಸರಾಯ್‌ನಲ್ಲಿ ನಡೆದಿದೆ. ಅತ್ಯಾಚಾರದ ನಂತರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ವೈದ್ಯರು ಆಕೆಯ ಖಾಸಗಿ ಅಂಗದಿಂದ ಸಜೀವ ಗುಂಡು, ಕಲ್ಲು ಮತ್ತು ಮರದ ತುಂಡನ್ನು ಹೊರತೆಗೆದಿದ್ದಾರೆ.
ಈ ಘಟನೆಯು ಜೂನ್ 11ರಂದು ರಾತ್ರಿ ಚಾಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ರಾತ್ರಿ 11:30 ರ ಸುಮಾರಿಗೆ ಆಕೆ ಶೌಚಾಲಯಕ್ಕೆ ಹೋಗಿದ್ದಾಗ ಐದು ಮಂದಿ ಸಶಸ್ತ್ರ ದುಷ್ಕರ್ಮಿಗಳು ಬಲವಂತವಾಗಿ ಮನೆಗೆ ನುಗ್ಗಿದ್ದಾರೆ. ಮೊದಲು ಆಕೆಯ ಪತಿಯನ್ನು ಕೋಣೆಯೊಂದರಲ್ಲಿ ಹಾಕಿ ಲಾಕ್ ಮಾಡಿದ್ದಾರೆ. ಆಕೆ ಶೌಚಾಲಯದಿಂದ ಹೊರಬರುತ್ತಿದ್ದಂತೆ ಆಕೆಯ ಬಾಯಿ ಮುಚ್ಚಿ, ಮನೆಯ ಹೊರಗಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಆಕೆ ಕಿರುಚಾಡಲು ಯತ್ನಿಸಿದಾಗ ಬ್ಲೇಡ್‌ನಿಂದ ಆಕೆಯ ಎದೆ ಮತ್ತು ತೊಡೆಯ ಭಾಗವನ್ನು ಸೀಳಿ ವಿಕೃತಿ ಮೆರೆದಿದ್ದಾರೆ.