ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honeymoon Murder Case: ಹನಿಮೂನ್ ಕೊಲೆ ಕೇಸ್‌ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಸವಾಲು- ರಾಜಾ ರಘುವಂಶಿ ತನ್ನ ಮಗುವಿನ ತಂದೆ ಎಂದ ಮಹಿಳೆ

ರಾಜಾ ರಘುವಂಶಿ (Honeymoon Murder Case) ಸಹೋದರ ಸಚಿನ್ ರಘುವಂಶಿ ತನ್ನ ಮಗುವಿನ ತಂದೆ ಎಂದ ಹೇಳಿ ಮಹಿಳೆಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ತಾವಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದು, ತಮಗೆ ಒಂದೂವರೆ ವರ್ಷದ ಮಗನಿರುವುದಾಗಿ ತಿಳಿಸಿರುವ ಅವರು ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಮಾಧ್ಯಮಗಳ ಮುಂದೆ ಇರಿಸಿದ್ದಾರೆ.

ಹನಿಮೂನ್ ಕೊಲೆ ಕೇಸ್‌ ಬೆನ್ನಲ್ಲೇ ರಘುವಂಶಿ ಕುಟುಂಬಕ್ಕೆ ಮತ್ತೊಂದು ಸವಾಲು

ಇಂದೋರ್: ಹನಿಮೂನ್ ಕೊಲೆ ಪ್ರಕರಣದ (Honeymoon Murder Case) ಬಳಿಕ ರಾಜಾ ರಘುವಂಶಿ (Raja Raghuvanshi) ಅವರ ಕುಟುಂಬಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜಾ ರಘುವಂಶಿ ಅವರ ಸಹೋದರ (Raja Raghuvanshi Brother Sachin Raghuvanshi) ತನ್ನ ಮಗುವಿನ ತಂದೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಇದೀಗ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಾವಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದು, ತಮಗೆ ಒಂದೂವರೆ ವರ್ಷದ ಮಗನಿರುವುದಾಗಿ ಮಹಿಳೆ ತಿಳಿಸಿದ್ದು, ಇದಕ್ಕೆ ಸಾಕ್ಷಿಯಾಗಿ ಡಿಎನ್ಎ ವರದಿಯನ್ನು (DNA Report) ಕೂಡ ಅವರು ಮಾಧ್ಯಮಗಳಿಗೆ ತೋರಿಸಿದ್ದಾರೆ.

ಮದುವೆಯಾದ ವಾರಗಳ ಬಳಿಕ ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿ ಪತ್ನಿ ಸೋನಂಳಿಂದ ಹತ್ಯೆಯಾದ ರಾಜಾ ರಘುವಂಶಿ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಇದೀಗ ರಾಜಾ ರಘುವಂಶಿ ಅವರ ಸಹೋದರ ಸಚಿನ್ ರಘುವಂಶಿ ತನ್ನ ಮಗುವಿನ ತಂದೆ ಎಂದು ಹೇಳಿ ಮಹಿಳೆಯೊಬ್ಬರು ಡಿಎನ್ಎ ಪುರಾವೆಯನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.

ಇದರಿಂದ ಹೈಪ್ರೊಫೈಲ್ ಹನಿಮೂನ್ ಕೊಲೆ ಪ್ರಕರಣದಿಂದ ಸಾಕಷ್ಟು ನೋವು ಅನುಭವಿಸಿದ್ದ ರಾಜಾ ರಘುವಂಶಿ ಕುಟುಂಬವು ಇದೀಗ ಮತ್ತೊಂದು ಸವಾಲನ್ನು ಎದುರಿಸುವಂತಾಗಿದೆ. ಮೃತ ರಾಜಾ ರಘುವಂಶಿ ಅವರ ಸಹೋದರ ಸಚಿನ್ ರಘುವಂಶಿ ಅವರ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಚಿನ್ ಮತ್ತು ಕುಟುಂಬದವರು ನನ್ನ ಮಗುವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿರುವ ಅವರು, ಇದು ನನಗೆ ಮಾತ್ರವಲ್ಲ, ನನ್ನ ಮಗುವಿಗೂ ಅವಮಾನವಾಗಿದೆ ಎಂದಿದ್ದಾರೆ. ಡಿಎನ್ಎ ಪರೀಕ್ಷೆಯು ಸಚಿನ್ ತನ್ನ ಮಗನ ತಂದೆ ಎಂದು ದೃಢಪಡಿಸಿದೆ. ಸಚಿನ್ ಮತ್ತು ನಾನು ದೇವಾಲಯದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ವಿವಾಹವಾಗಿದ್ದೇವೆ. ವಿವಾಹದ ವಿಡಿಯೊ, ಫೋಟೋಗಳು ಕೂಡ ನನ್ನ ಬಳಿ ಇದೆ ಎಂದು ಹೇಳಿ ಅವುಗಳನ್ನು ಮಾಧ್ಯಮಗಳಿಗೆ ತೋರಿಸಿದರು.

ಸಚಿನ್ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದರೆ, ನಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರೆ ನಾವು ಇಂದು ಈ ಅವಮಾನವನ್ನು ಅನುಭವಿಸಬೇಕಾಗಿರಲಿಲ್ಲ ಎಂದ ಅವರು, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ತಿಳಿಸಿದರು.

ಇದನ್ನೂ ಓದಿ: Anti-Khalistan Activist Death: ಖಲಿಸ್ತಾನ್ ವಿರೋಧಿ ಕಾರ್ಯಕರ್ತ ಸುಖಿ ಚಾಹಲ್ ನಿಗೂಢ ಸಾವು

ನಾನು ನ್ಯಾಯವನ್ನು ಹುಡುಕಿದಾಗಲೆಲ್ಲ ಅವರ ಕುಟುಂಬವು ನನ್ನನ್ನು ಅವಮಾನಿಸುತ್ತಿತ್ತು ಎಂದ ಅವರು, ಇಂದು ನನ್ನ ಮಗು ಮನೆಯಿಂದ ಮನೆಗೆ ಅಲೆದಾಡುತ್ತಿದೆ. ಸಚಿನ್ ಈಗ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು. ನನಗೆ ಹಾಗೂ ಮಗನಿಗೆ ನ್ಯಾಯ ಖಂಡಿತಾ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಇದ್ಕಕಾಗಿ ಈಗ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದೇನೆ ಎಂದರು.