Anti-Khalistan Activist Death: ಖಲಿಸ್ತಾನ್ ವಿರೋಧಿ ಕಾರ್ಯಕರ್ತ ಸುಖಿ ಚಾಹಲ್ ನಿಗೂಢ ಸಾವು
Anti-Khalistan activist Sukhi Chahal: ಖಲಿಸ್ತಾನಿ ಪ್ರತ್ಯೇಕತಾವಾದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದ ಅಮೆರಿಕ ಮೂಲದ ಪ್ರಸಿದ್ಧ ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಅಮೆರಿಕದ ಪಂಜಾಬ್ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷ ಮತ್ತು ಖಲಿಸ್ತಾನ್ ವಿರೋಧಿ ಧ್ವನಿಯಾಗಿದ್ದ ಸುಖಿ ಚಾಹಲ್ ಸುಖಿ ಚಾಹಲ್ ಅವರು ಗುರುವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.


ಕ್ಯಾಲಿಫೋರ್ನಿಯಾ: ಖಲಿಸ್ತಾನ್ ವಿರೋಧಿ ಕಾರ್ಯಕರ್ತ ( Anti-Khalistan Activist) ಸುಖಿ ಚಾಹಲ್ ( Sukhi Chahal) ಅಮೆರಿಕದಲ್ಲಿ (America) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರಿಗೆ ಆಗಾಗ್ಗೆ ಖಲಿಸ್ತಾನ್ ಪರ ಗುಂಪುಗಳಿಂದ (pro-Khalistan groups) ಕೊಲೆ ಬೆದರಿಕೆಗಳು (Life Threat) ಬರುತ್ತಿದ್ದವು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ( California) ಪರಿಚಯಸ್ಥರೊಬ್ಬರ ಮನೆಯಲ್ಲಿ ಗುರುವಾರ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಚಾಹಲ್ ಅವರಿಗೆ ಊಟದ ಬಳಿಕ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಸುಖಿ ಚಾಹಲ್ ಅವರ ಆಪ್ತ ಸ್ನೇಹಿತ ಜಸ್ಪಾಲ್ ಸಿಂಗ್ ತಿಳಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದ ಅಮೆರಿಕ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಸುಖಿ ಚಾಹಲ್ ಅವರ ಹಠಾತ್ ಮತ್ತು ನಿಗೂಢ ಸಾವು ಭಾರತೀಯ ವಲಸೆಗಾರರು ಮತ್ತು ಖಲಿಸ್ತಾನಿ ವಿರೋಧಿ ಸಮುದಾಯಗಳಿಗೆ ಆಘಾತವನ್ನು ಉಂಟು ಮಾಡಿದೆ.
ಸುಖಿ ಚಾಹಲ್ ಅವರ ಅನಿರೀಕ್ಷಿತ ಸಾವಿನ ಬಗ್ಗೆ ಅವರ ಆಪ್ತ ಸ್ನೇಹಿತರು ಮತ್ತು ಸಹವರ್ತಿಗಳಲ್ಲಿ ಹಲವಾರು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಗುರುವಾರ ಕ್ಯಾಲಿಫೋರ್ನಿಯಾದಲ್ಲಿ ಪರಿಚಯಸ್ಥರೊಬ್ಬರ ಮನೆಯಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಚಾಹಲ್ ಅವರಿಗೆ ಊಟ ಮಾಡಿದ ಸ್ವಲ್ಪ ಸಮಯದ ಬಳಿಕ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಬಳಿಕ ಅವರು ಸ್ಥಳದಲ್ಲೇ ಮೃತಪತ್ತಿದ್ದಾರೆ. ಈ ಘಟನೆಗೂ ಮುನ್ನ ಅವರು ಆರೋಗ್ಯವಾಗಿದ್ದರು ಎಂದು ಜಸ್ಪಾಲ್ ಸಿಂಗ್ ತಿಳಿಸಿದ್ದಾರೆ.
ದಿ ಖಲ್ಸಾ ಟುಡೇ ಸ್ಥಾಪಕ ಮತ್ತು ಸಿಇಒ ಆಗಿದ್ದ ಚಾಹಲ್ ಅವರಿಗೆ ಖಲಿಸ್ತಾನ್ ಪರ ಗುಂಪುಗಳಿಂದ ಆಗಾಗ್ಗೆ ಕೊಲೆ ಬೆದರಿಕೆಗಳು ಬರುತ್ತಿದ್ದವು ಎಂದು ಅವರ ಸ್ನೇಹಿತರು ದೃಢಪಡಿಸಿದ್ದಾರೆ. ಆಗಸ್ಟ್ 17 ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಮಹತ್ವದ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮಕ್ಕೂ ಮುನ್ನವೇ ಚಾಹಲ್ ಅವರ ಸಾವು ಅವರ ಸಹಚರರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: Rakshabandhan 2025: ರಕ್ಷಾ ಬಂಧನಕ್ಕೆ ಟ್ರೆಂಡಿಯಾದ ವೈವಿಧ್ಯಮಯ ರಾಖಿಗಳು
ಈ ಕುರಿತು ಪ್ರಕರಣ ದಾಖಲಿಸಿರುವ ಕ್ಯಾಲಿಫೋರ್ನಿಯಾ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಚಾಹಲ್ ಅವರ ನಿಧನಕ್ಕೆ ಸಾಕಷ್ಟು ಮಂದಿ ಆಘಾತ ವ್ಯಕ್ತಪಡಿಸಿದ್ದಾರೆ. ಇವರು ಉಗ್ರವಾದದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುತ್ತಿದ್ದರು. ಭಾರತೀಯ ವಲಸಿಗರಿಗೆ ಯುಎಸ್ ಕಾನೂನುಗಳನ್ನು ಅನುಸರಿಸಲು ಮತ್ತು ಅಪರಾಧ ಚಟುವಟಿಕೆಗಳನ್ನು ತಪ್ಪಿಸಲು ನಿರಂತರವಾಗಿ ಸಲಹೆ ನೀಡುತ್ತಿದ್ದರು.