ಗುರುಗ್ರಾಮ್: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಮಹಿಳೆ ಮೇಲೆ ಪ್ರಿಯಕರ ಗುಂಡಿನ ದಾಳಿ (Firing) ನಡೆಸಿದ ಘಟನೆ ಗುರುಗ್ರಾಮದಲ್ಲಿ (Gurugram) ನಡೆದಿದೆ. ಈ ಡಿಸೆಂಬರ್ 20ರಂದು ನೀಡಿದ್ದು, ಗಾಯಗೊಂಡ ಮಹಿಳೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದ ಕಾರಣ ತಡವಾಗಿ ಈ ಕುರಿತು ದೂರು ದಾಖಲಾಗಿದೆ. ಗುರುಗ್ರಾಮದ ಎಂಜಿ ರಸ್ತೆಯ (MG Road) ಕ್ಲಬ್‌ನೊಳಗೆ ಕಲ್ಪನಾ ಎಂಬ ಮಹಿಳೆ ಮೇಲೆ ಆಕೆಯ ಪ್ರಿಯಕರ ತುಷಾರ್ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.
ಎಂಜಿ ರಸ್ತೆಯಲ್ಲಿರುವ ಕ್ಲಬ್ ನಲ್ಲಿ ಉತ್ತರ ಪ್ರದೇಶದ ಬರೌತ್‌ನ ಸಂಗಮ್ ವಿಹಾರ್ ನಿವಾಸಿ ತುಷಾರ್ ದೆಹಲಿಯ ನಜಾಫ್‌ಗಢದ ಕಲ್ಪನಾ (25) ಮೇಲೆ ಡಿಸೆಂಬರ್ 20ರಂದು ರಾತ್ರಿ ಒಂದು ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆಸಿದ್ದಾನೆ. ತುಷಾರ್ ಮದುವೆ ಪ್ರಸ್ತಾಪವನ್ನು ಕಲ್ಪನಾ ತಿರಸ್ಕರಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ.
Mantralaya Kannada Row: ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ
ಕಲ್ಪನಾ ಅವರ ಪತಿ ದೆಹಲಿಯ ನಜಾಫ್‌ಗಢದಲ್ಲಿದ್ದು, ಕಲ್ಪನಾ ಗುರುಗ್ರಾಮ್‌ನ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಗೂ ಒಂದು ತಿಂಗಳು ಮೊದಲು ತುಷಾರ್ ಅವರ ಮನೆಗೆ ಬಂದು ಜಗಳ ಮಾಡಿ ಹೋಗಿದ್ದ ಡಿಸೆಂಬರ್ 19 ರಂದು ಕೆಲಸಕ್ಕೆ ಹೋಗಿದ್ದ ಕಲ್ಪನಾ ಮೇಲೆ ತುಷಾರ್ ರಾತ್ರಿ 1 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಕಲ್ಪನಾ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶದ ಬರೌತ್‌ನ ಸಂಗಮ್ ವಿಹಾರ್ ನಿವಾಸಿಗಳಾದ ತುಷಾರ್ ಅಲಿಯಾಸ್ ಜಾಂಟಿ (25) ಮತ್ತು ಆತನ ಸ್ನೇಹಿತ ಶುಭಮ್ ಅಲಿಯಾಸ್ ಜಾನಿ (24) ಎಂಬವರನ್ನು ಅಪರಾಧ ವಿಭಾಗದ ತಂಡವು ಬಂಧಿಸಿದೆ. ಆರು ತಿಂಗಳ ತುಷಾರ್ ಕಲ್ಪನಾ ಜೊತೆ ಸ್ನೇಹ ಬೆಳೆಸಿದ್ದ. ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಪದೇ ಪದೇ ನಿರಾಕರಿಸಿದ್ದಾಳೆ ಎಂದು ವಿಚಾರಣೆ ವೇಳೆ ತುಷಾರ್ ಪೊಲೀಸರಿಗೆ ತಿಳಿಸಿದ್ದಾನೆ.
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಎಳೆದೊಯ್ದ ಚಾಲಕ
ಡಿಸೆಂಬರ್ 19ರಂದು ರಾತ್ರಿ ಶುಭಂ ಜೊತೆಗೆ ತುಷಾರ್ ಕ್ಲಬ್‌ಗೆ ಹೋಗಿ ಕಲ್ಪನಾಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆದರೆ ಆಕೆ ನಿರಾಕರಿಸಿದ್ದರಿಂದ ಸಿಟ್ಟಾಗಿ ಅವಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.