ಮುಂಬೈ: ಹೊಸ ವರ್ಷದಂದೇ ಮಹಿಳೆಯೊಬ್ಬಳು ಮಾಜಿ ಪ್ರೇಮಿಗೆ ಚೂರಿಯಿಂದ ಇರಿದಿದ್ದಾಳೆ. ಮಾಜಿ ಪ್ರಿಯಕರನನ್ನು ಮನೆಗೆ ಕರೆದು ನಂತರ ಚಾಕುವಿನಿಂದ (Viral News) ಹಲ್ಲೆ ಮಾಡಿ, ಆತನ ಖಾಸಗಿ ಭಾಗಗಳಿಗೆ ಇರಿದಿದ್ದಾಳೆ. ಮುಂಬೈನ (Mumbai) ಸಾಂತಾಕ್ರೂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಜೋಗಿಂದರ್ ಮಹ್ತೊ ಎಂದು ಗುರುತಿಸಲಾಗಿದೆ.
ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ವಿವಾಹಕ್ಕೂ ಮುನ್ನ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆಕೆಗೆ ಮದುವೆಯಾದ ನಂತರ ಇಬ್ಬರೂ ಬೇರ್ಪಟ್ಟಿದ್ದರು. ಆದರೆ, ಮದುವೆಯಾದ ನಂತರವೂ ಆ ಮಹಿಳೆ ಪದೇ ಪದೇ ಜೋಗಿಂದರ್‌ಗೆ ಕರೆ ಮಾಡಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಳ್ಳುತ್ತಿದ್ದಳು. ಆದರೆ, ಜೋಗಿಂದರ್ ನಿರಾಕರಿಸುತ್ತಿದ್ದ ಎಂದು ಹೇಳಲಾಗಿದೆ.
ಆಸ್ತಿಗಾಗಿ ವಾಯುಪಡೆ ಮಾಜಿ ಅಧಿಕಾರಿಯನ್ನೇ ಹತ್ಯೆ ಮಾಡಿದ ಪುತ್ರರು; ಕೊಲೆ ಬಯಲಾಗಿದ್ದು ಹೇಗೆ?
ಆದರೆ, ಹೊಸ ವರ್ಷದ ದಿನದಂದು ಮಹಿಳೆ ಉದ್ದೇಶಪೂರ್ವಕವಾಗಿ ತನ್ನ ಮಾಜಿ ಪ್ರಿಯಕರನನ್ನು ತನ್ನ ಮನೆಗೆ ಕರೆಸಿ ನಂತರ ಚಾಕುವಿನಿಂದ ಹಲ್ಲೆ ಮಾಡಿ, ಅವನ ಖಾಸಗಿ ಭಾಗಗಳಿಗೆ ಇರಿದಿದ್ದಾಳೆ. ಮಾಜಿ ಪ್ರಿಯಕರ ಆಕೆಯ ಮನೆಯಿಂದ ಹೇಗೋ ತಪ್ಪಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಜೋಗಿಂದರ್‌ನ ಹೇಳಿಕೆಯನ್ನು ದಾಖಲಿಸಿಕೊಂಡರು.
ಹೊಸ ವರ್ಷದ ದಿನದಂದು ತನ್ನ ಮಾಜಿ ಗೆಳತಿ ತನ್ನನ್ನು ತನ್ನ ಮನೆಗೆ ಕರೆದು ಚಾಕುವಿನಿಂದ ಹಲ್ಲೆ ಮಾಡಿ, ತನ್ನ ಖಾಸಗಿ ಭಾಗಗಳಿಗೆ ಇರಿದಿದ್ದಾಳೆ ಎಂದು ಆತ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.
ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಲೈಂಗಿಕ ದೌರ್ಜನ್ಯದ ಆರೋಪಿ
ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಗೊಂಡು ತನ್ನ ಕುಟುಂಬ ಸದಸ್ಯರೊಂದಿಗೆ ಸೇರಿ ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಸಂತ್ರಸ್ತೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಗಾಯಾಳು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ 29ರ ಬೆಳಗ್ಗೆ ನೈಗಾಂವ್ ತಹಸಿಲ್‌ನ ಬೇಂದ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನೈಗಾಂವ್ ಪೊಲೀಸರು ಡಿಸೆಂಬರ್ 22 ರಂದು ಸಂತೋಷ್ ಮಾಧವರಾವ್ ಬೇಂದ್ರಿಕರ್ ವಿರುದ್ಧ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಡಿಸೆಂಬರ್ 28 ರಂದು ಆತನನ್ನು ಬಂಧಿಸಲಾಯಿತು. ಸ್ವಲ್ಪ ಸಮಯದ ನಂತರ ಜಾಮೀನು ನೀಡಲಾಯಿತು.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಪತಿ ಮನೆಯ ಸಮೀಪವಿರುವ ತಗಡಿನ ಗುಡಿಸಲಿನಲ್ಲಿ ತನ್ನ ಎಮ್ಮೆಗಳಿಗೆ ಮೇಯಿಸಲು ಹೋದಾಗ, ಆರೋಪಿಗಳಾದ ಬೇಂದ್ರಿಕರ್, ಆತನ ತಂದೆ ಮಾಧವ್ ಮತ್ತು ಆತನ ಸಹೋದರ ಶಿವಕುಮಾರ್ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ನಾಂದೇಡ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ, ಆತನ ತಂದೆ ಮತ್ತು ಸಹೋದರನನ್ನು ಬಂಧಿಸಲಾಗಿದೆ.