ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಸಾಲದ ಸುಳಿ; ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ- ಮಗ ಆತ್ಮಹತ್ಯೆ

ಮೃತ ಯುವಕ ಪುಡ್​​ ಡೆಲಿವೆರಿ ಕೆಲಸ ಮಾಡುತ್ತಿದ್ದರು. ಮಾರಸಂದ್ರದ ಫೈವ್​​ ಸ್ಟಾರ್, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳ ಡೆಲಿವರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ನಂದಿ ಮೋರಿ ಬಳಿ ರಕ್ಷಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೃತ ಯುವಕನ ತಾಯಿ ಕೊನಘಟ್ಟ ಗ್ರಾಮದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಸಾಲದ ಸುಳಿ; ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ- ಮಗ ಆತ್ಮಹತ್ಯೆ

ಮೃತ ರಕ್ಷಿತ್‌ ಬಾಬು

ಹರೀಶ್‌ ಕೇರ ಹರೀಶ್‌ ಕೇರ Mar 31, 2025 12:43 PM

ದೊಡ್ಡಬಳ್ಳಾಪುರ: ಸಾಲದ (debit trap) ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ (self harming) ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ (Doddaballapuara) ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (26) ಎಂದು ಗುರುತಿಸಲಾಗಿದೆ. ಇವರ ತಾಯಿ ಕೂಡ ಒಂದುವರೆ ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದ ನೊಂದು ಹಾಗೂ ಸಾಲದ ಸುಳಿಗೆ ಬೇಸತ್ತು ರಕ್ಷಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಯುವಕ ಪುಡ್​​ ಡೆಲಿವೆರಿ ಕೆಲಸ ಮಾಡುತ್ತಿದ್ದರು. ಮಾರಸಂದ್ರದ ಫೈವ್​​ ಸ್ಟಾರ್, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳ ಡೆಲಿವರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ನಂದಿ ಮೋರಿ ಬಳಿ ರಕ್ಷಿತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೃತ ಯುವಕನ ತಾಯಿ ಕೊನಘಟ್ಟ ಗ್ರಾಮದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಲಭ್ಯ ಮಾಹಿತಿ ಪ್ರಕಾರ ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು. ಸಾಲ ಕೊಟ್ಟವರು ಮನೆಯ ಬಳಿ ಬಂದು ಗಲಾಟೆ ಮಾಡಿದ್ದರೆಂಬ ಕಾರಣಕ್ಕೆ ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ಮಗ ಸಹ ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಹಿಂದಿನ ಅಸಲಿ ಕಾರಣವನ್ನು ಪೊಲೀಸರು ಬೆನ್ನಟ್ಟಿದ್ದಾರೆ.

ಯುಗಾದಿ ಹಬ್ಬದ ದಿನವೇ ಮೂವರು ಬಾಲಕರು ನೀರುಪಾಲು

ಬಾಗಲಕೋಟೆ: ಯುಗಾದಿ ಹಬ್ಬದ ದಿನವೇ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಕೃಷ್ಣಾ ನದಿಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟ ಘಟನೆ (Drown in River) ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದ ಬಳಿ ನಡೆದಿದೆ. ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಬಾಲಕರು ನೀರುಪಾಲಾಗಿದ್ದಾರೆ. ಮೃತ ಬಾಲಕರನ್ನು ಸೋಮಶೇಖರ್ ದೇವರಮನಿ (17), ಪರನಗೌಡ ಬೀಳಗಿ (15) ಹಾಗೂ ಮಲ್ಲಪ್ಪ ಬಗಲಿ (16) ಎಂದು ಗುರುತಿಸಲಾಗಿದೆ.

ಮೂವರು ಬಾಲಕರ ಪೈಕಿ ಸೋಮಶೇಖರ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಮೃತ ಬಾಲಕರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ನಿವಾಸಿಗಳಾಗಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Road Accident: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ 10 ವರ್ಷದ ಬಾಲಕ ಸಾವು; ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ