ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Majumdar Shah: ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಶಾ ಅವರನ್ನು ISQ, 'ಜೆಮ್ಷೆಡ್ಜಿ ಟಾಟಾ ಪ್ರಶಸ್ತಿ’ ನೀಡಿ ಗೌರವ

Kiran Majumdar Shah: ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಶಾ ಅವರನ್ನು ISQ, 'ಜೆಮ್ಷೆಡ್ಜಿ ಟಾಟಾ ಪ್ರಶಸ್ತಿ’ ನೀಡಿ ಗೌರವ

Ashok Nayak Ashok Nayak Dec 13, 2024 10:41 PM
ಬೆಂಗಳೂರು: ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇಂಡಿಯನ್ ಸೊಸೈಟಿ ಫಾರ್ ಕ್ಯಾಲಿಟಿ (ISQ) ಯು ಪ್ರತಿಷ್ಠಿತ “ಜೆಮ್ಷೆಡ್ಜಿ ಟಾಟಾ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ನಡೆದ ISQ ವಾರ್ಷಿಕ ಸಮ್ಮೇಳನ -2024 ದಲ್ಲಿ ಪ್ರಶಸ್ತಿ ನೀಡಲಾಯಿತು. ISQ ನಿಂದ 2004 ರಲ್ಲಿ ಸ್ಥಾಪಿಸಲಾದ ಜೆಮ್ಷೆಡ್ಜಿ ಟಾಟಾ ಪ್ರಶಸ್ತಿಯನ್ನು 'ಆಧುನಿಕ ಭಾರತೀಯ ಕೈಗಾರಿಕಾ ಪಿತಾಮಹ‌ ಎಂದು ಕರೆಯುವ ಜೆಮ್ಷೆಡ್ಜಿ ಟಾಟಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ಸಮಾಜಕ್ಕೆ ಗುಣಮಟ್ಟ, ಬದ್ಧತೆ ಮತ್ತು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ISQ ಅಧ್ಯಕ್ಷ ಮತ್ತು TQM ಅಂತಾರಾಷ್ಟ್ರೀಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಿರಣ್ ಜನಕ್ ಕುಮಾರ್ ಮೆಹ್ತಾ ಮಾತನಾಡಿ, "1978 ರಿಂದ ಭಾರತದಲ್ಲಿ ಜೀವವಿಜ್ಞಾನ ಆಂದೋಲನದಲ್ಲಿ ಮುಂಚೂನಿ ಯಲ್ಲಿರುವ ಕಿರಣ್ ಮಜುಂದಾರ್-ಶಾ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಗ್ರಾಹಕರಿಗೆ ಸೇವೆ ಸಲ್ಲಿಸಲು ಬಯೋಕಾನ್ ಲಿಮಿಟೆಡ್ ಮತ್ತು ಸಂಬಂಧಿತ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಅಪಾರ ಒಳಿತನ್ನು ಮಾಡಿದ್ದಾರೆ. ನಿಮ್ಮ ಮಹೋನ್ನತ ಕಾರ್ಯ ಭಾರತವನ್ನು ವಿಶ್ವದಲ್ಲಿ ಮಿಂಚುವಂತೆ ಮಾಡಿದೆ ಎಂದರು.
ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮಾತನಾಡಿ, "ನಾನು ಈ ಗೌರವಕ್ಕೆ ಭಾಜನರಾಗಿದ್ದಕ್ಕೆ ಆಭಾರಿಯಾಗಿದ್ದೇನೆ. ISQ ಸ್ಥಾಪಿಸಿದ 2024 ರ ಜೆಮ್ಷೆಡ್ಜಿ ಟಾಟಾ ಪ್ರಶಸ್ತಿಯನ್ನು ಸ್ವೀಕರಿಸಲು ವಿನೀತರಾಗಿದ್ದೇವೆ. ಈ ಪ್ರಶಸ್ತಿಯು ನನಗೆ ಬಹಳ ವಿಶೇಷವಾದುದಾಗಿದೆ. ಏಕೆಂದರೆ ಈ ಪ್ರಶಸ್ತಿಯು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರ ಹೆಸರನ್ನು ಹೊಂದಿದೆ ಎಂದರು.