World Cancer: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್‌ಬಾಲ್ ಪಂದ್ಯಾವಳಿ ಆಯೋಜನೆ
ಕ್ರೀಡೆಯ ಮೂಲಕ ಏಕತೆಯ ಪ್ರಜ್ಞೆ ಯನ್ನು ಬೆಳೆಸುವ ಉದ್ದೇಶದಿಂದ ಕ್ಯಾನ್ಸರ್ ಚಾಂಪಿಯನ್‌ಗಳ ವೈಯಕ್ತಿಕ ವಿಷಯವನ್ನು ಆಚರಿ ಸಲು ವಿಶ್ವ ಕ್ಯಾನ್ಸರ್ ದಿನದಂದು ಅವರಿಗಾಗಿಯೇ ಈ ಕ್ರೀಡೆಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 35 ಜನರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರು, ವೈದ್ಯರು, ಶುಷ್ರೂಷಕರಿಗೆ “ಪಿಕಲ್‌ಬಾಲ್” ಪಂದ್ಯಾವಳಿಯನ್ನು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು ಆಯೋಜಿಸಲಾಗಿತ್ತು.
'ಯುನೈಟೆಡ್ ಬೈ ಯೂನಿಯನ್' ಎಂಬ ಶೀರ್ಷಿಕೆಯಡಿ, ಕ್ರೀಡೆಯ ಮೂಲಕ ಏಕತೆಯ ಪ್ರಜ್ಞೆ ಯನ್ನು ಬೆಳೆಸುವ ಉದ್ದೇಶದಿಂದ ಕ್ಯಾನ್ಸರ್ ಚಾಂಪಿಯನ್‌ಗಳ ವೈಯಕ್ತಿಕ ವಿಷಯವನ್ನು ಆಚರಿ ಸಲು ವಿಶ್ವ ಕ್ಯಾನ್ಸರ್ ದಿನದಂದು ಅವರಿಗಾಗಿಯೇ ಈ ಕ್ರೀಡೆಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 35 ಜನರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Dalai Lama: ಧರ್ಮಗುರು ದಲೈ ಲಾಮಾ ಆರೋಗ್ಯ ವಿಚಾರಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಈ ಕುರಿತು ಮಾತನಾಡಿದ ಎಚ್‌ಸಿಜಿ ಕಾರ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಷಾ ಕುಮಾರ್, ಕ್ಯಾನ್ಸರ್ ಗೆ ತುತ್ತಾದವರು ತಮ್ಮ ಬದುಕಿಗಾಗಿ ಹೋರಾಡಿ ಗೆಲ್ಲುವುದು ಜೀವನವನ್ನೇ ಗೆದ್ದಂತೆ. ಅವರ ಈ ಬದುಕಿನ ಸಂಭ್ರಮವನ್ನು ಆಚರಿಸಲೆಂದೇ ವಿಶ್ವ ಕ್ಯಾನ್ಸರ್ ದಿನದಂದು ನಮ್ಮ ಎಲ್ಲಾ ಕ್ಯಾನ್ಸರ್‌ನಿಂದ ಬದುಕುಳಿದವರಿಗಾಗಿ ಈ ಪಿಕಲ್‌ಬಾಲ್ ಕ್ರೀಡೆಯನ್ನು ಹಮ್ಮಿಕೊಂಡಿದ್ದೆವು. ಇವರ ಕುಟುಂಬಸ್ಥರು, ವೈದ್ಯರು, ಶುಷ್ರೂಷಕರು ಸಹ ಪಾಲ್ಗೊಂಡಿದ್ದರು.
ಕ್ಯಾನ್ಸರ್ ಚಾಂಪಿಯನ್‌ಗಳನ್ನು ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿ ಮತ್ತು ಸಾಮಾಜಿಕ ವಾಗಿ ಸಬಲೀಕರಣಗೊಳಿಸುವ ಉದ್ದೇಶವೂ ಇದರ ಭಾಗವಾಗಿದೆ ಎಂದು ಹೇಳಿದರು.