ಡಾ.ಗೀತಾ ಬಿ. ಶೆಟ್ಟಿ "ಇಂಪ್ಯಾಕ್ಟ್ ಆಫ್ ಕಂಬೈನ್ಡ್ ನ್ಯಾಚುರೋಪಥಿ ಆಂಡ್ ಯೋಗ ಥೆರಫಿ ಆನ್ ಕ್ಲಿನಿಕಲ್ ಔಟ್‌ಕಂಮ್ಸ್ ಇನ್ ರುಮಟಾಯ್ಡ್ ಆರ್ಥರೈಟಿಸ್ ಪೆಶಂಟ್ಸ್ - ಅ ರ್ಯಾಂಡ ಮೈಸ್ಡ್ ಕಂಟ್ರೋಲ್ ಟ್ರಯಲ್" (Impact of combined Naturopathy and Yoga therapy on clinical outcomes in Rheumatoid arthritis patients- a randomised control trial) ಎಂಬ ವಿಷಯದ ಮೇಲೆ ಸಂಶೋಧನೆ ನಡೆಸುವ ಮೂಲಕ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿ ಪಡೆದುಕೊಂಡಿದ್ದಾರೆ.
ಇವರ ವೃತ್ತಿಜೀವನದ ಅತ್ಯಂತ ಗಮನಾರ್ಹ ಸಾಧನೆ ಎಂದರೆ, ಭಾರತದಲ್ಲಿ ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಬಿಎನ್‌ವೈಎಸ್, ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಎಂ.ಡಿ, ಹಾಗೂ ನ್ಯಾಚುರೋಪಥಿಯಲ್ಲಿ ಪಿಎಚ್.ಡಿ ಎಂಬ ಪೂರ್ಣ ಶೈಕ್ಷಣಿಕ ತ್ರಯವನ್ನು ಪೂರ್ಣ ಗೊಳಿಸಿದ ಮೊದಲ ವ್ಯಕ್ತಿ ಎಂಬುದು. ಈ ಸಾಧನೆ ದೇಶದ ಪ್ರಕೃತಿ ಚಿಕಿತ್ಸಾ ಶಿಕ್ಷಣ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ಡಾ.ಗೀತಾ ಬಿ.ಶೆಟ್ಟಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಶ್ರೇಷ್ಠ ಶಿಕ್ಷಣ ತಜ್ಞೆ, ವೈದ್ಯೆ ಹಾಗೂ ಸಂಶೋಧಕಿ. ಇವರು ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಪ್ರಸ್ತುತ ಇವರು ಅದೇ ಸಂಸ್ಥೆಯಲ್ಲಿ ನ್ಯೂಟ್ರೀಷನ್ ಹಾಗೂ ಡಯೆಟಿಕ್ಸ್ ವಿಭಾಗದ ಪ್ರೊಫೆಸರ್ ಹಾಗೂ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವತ್ತಕ್ಕೂ ಹೆಚ್ಚು ವರ್ಷಗಳ ವಿಶಿಷ್ಟ ಬೋಧನಾ ಅನುಭವ ಹೊಂದಿರುವ ಇವರು ಪದವಿ ಮತ್ತು ಸ್ನಾತಕೋತ್ತರ ಮಟ್ಟಗಳಲ್ಲಿ ಅನೇಕ ಪ್ರಕೃತಿ ಚಿಕಿತ್ಸಾ ವೈದ್ಯರಿಗೆ ತರಬೇತಿ ನೀಡಿ ಪ್ರೇರೇಪಿಸಿದ್ದಾರೆ.
ಇದನ್ನೂ ಓದಿ: Ph.D: ರೇವಣಸಿದ್ದಪ್ಪ. ಎಂ. ನಡಕಟ್ಟಿ ಗೆ ಪಿ. ಎಚ್.ಡಿ ಪದವಿ ಪ್ರದಾನ
ಇವರು 1994ರಿಂದ ಮೆಡಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೈಗ್ರೇನ್ ಮತ್ತು ಸಂಧಿ ನೋವು ಸೇರಿದಂತೆ ನರ ಮತ್ತು ಸ್ನಾಯು-ಅಸ್ಥಿ ಸಂಬಂಧಿತ ಅನೇಕ ಕಾಯಿಲೆ ಗಳಿಗೆ ಅಕುಪಂಕ್ಚರ್, ಪ್ರಕೃತಿ ಚಿಕಿತ್ಸೆ ಹಾಗೂ ಯೋಗದ ಸಮಗ್ರ ವಿಧಾನಗಳ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಇವರು ಖ್ಯಾತ ಸಂಶೋಧಕಿಯಾಗಿಯೂ ಗುರುತಿಸಿಕೊಂಡಿದ್ದು, ಎಂ.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಆಯುಷ್ ಸಚಿವಾಲಯದ ಅನೇಕ ಸಂಶೋಧನಾ ಯೋಜನೆಗಳಿಗೆ ನೇತೃತ್ವ ವಹಿಸಿದ್ದಾರೆ.
ಅವರ ಸಂಶೋಧನಾ ಆಸಕ್ತಿಗಳಲ್ಲಿ ಹೈಪೋಥೈರಾಯ್ಡಿಸಂ, ಪಿಸಿಒಡಿ, ಬೊಜ್ಜು, ಜೀವನ ಶೈಲಿ ಚಿಕಿತ್ಸೆ, ಜಲಚಿಕಿತ್ಸೆ, ಅಕುಪಂಕ್ಚರ್ ಹಾಗೂ ಉಪವಾಸ ಚಿಕಿತ್ಸೆ ಸೇರಿವೆ. ಇವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಸಂಶೋ ಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು "ಎ ಹೋಲಿಸ್ಟಿಕ್ ಗೈಡ್ ಟು ಹೇಲ್ದಿ ಇಟಿಂಗ್" ಎಂಬ ಪುಸ್ತಕವನ್ನು ರಚಿಸಿದ್ದಾರೆ.
ಇವರ ಶೈಕ್ಷಣಿಕ ನಾಯಕತ್ವವು ಅನೇಕ ಪ್ರಮುಖ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ, ನೈತಿಕ ಸಮಿತಿ ಮತ್ತು ಸಂಯೋಜನಾ ಸಮಿತಿಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ಯ ಮೂಲಕ ವ್ಯಕ್ತವಾಗಿದೆ. ಇದರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾ ಲಯ, ಯೆನೆಪೊಯ ವಿಶ್ವವಿದ್ಯಾಲಯ ಮತ್ತು ಎಸ್ ವ್ಯಾಸ ವಿಶ್ವವಿದ್ಯಾಲಯ ಸೇರಿವೆ. ಅವರು ಭಾರತದೆಲ್ಲೆಡೆ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಿಗಾಗಿ ಬೇಡಿಕೆಯ ಪರೀಕ್ಷಕ ರಾಗಿದ್ದಾರೆ.
ಇವರು ರಾಜ್ಯಮಟ್ಟದ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿದ್ದು, ರೇಡಿಯೋ ಟಾಕ್, ಪತ್ರಿಕೆಗಳಿಗೆ ಲೇಖನಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ವೈದ್ಯ ಕೀಯ ಮತ್ತು ಆರೋಗ್ಯ ಶಿಬಿರಗಳ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇವರಿಗೆ ಎಸ್-ವ್ಯಾಸ ವಿಶ್ವವಿದ್ಯಾಲಯದಿಂದ ಬೆಸ್ಟ್ ಓರಲ್ ಪ್ರೆಸೆಂಟೇಶನ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿವೆ. ಇವರು ಸಮೂಹ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಿನ್ನೆಸ್ ವಿಶ್ವ ದಾಖಲೆಯ ತಂಡದ ಸದಸ್ಯೆಯೂ ಆಗಿದ್ದಾರೆ.