ಬೆಂಗಳೂರು: GITAM (Deemed to be University) ತನ್ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದು, ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಕಾರ್ಯಕ್ರಮಗಳ 1,256 ಪದವೀಧರರಿಗೆ ಪದವಿಗಳನ್ನು ಪ್ರದಾನ ಮಾಡಿತು. ವಿದ್ಯಾರ್ಥಿಗಳು, ಬೋಧಕ ವರ್ಗ, ಪೋಷಕರು ಹಾಗೂ ಗಣ್ಯ ಅತಿಥಿಗಳು ಭಾಗವಹಿಸಿದ್ದ ಈ ಸಮಾರಂಭವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು. ಇದೇ ವೇಳೆ ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್‌ನ್ನೂ ಪ್ರದಾನ ಮಾಡಲಾಯಿತು.
ಪದವಿ ಪಡೆದವರಲ್ಲಿ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವಿಜ್ಞಾನ, ಮಾನವಿಕ ಶಾಸ್ತ್ರ, ವಾಸ್ತುಶಿಲ್ಪ ಮತ್ತು ಫಾರ್ಮಸಿ ವಿಭಾಗಗಳ ಒಟ್ಟು 1,224 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 32 ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿಗಳು ಸೇರಿದ್ದಾರೆ. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 13 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಚಿನ್ನದ ಪದಕಗಳನ್ನು ಪ್ರದಾನಿಸಿ ಗೌರವಿಸಿತು.
ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಶ್ರೀಮತಿ ಗೀತಾ ಧರ್ಮರಾಜ್ ಅವರಿಗೆ ವಿಶ್ವ ವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾಗೂ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಅಧ್ಯಕ್ಷರಾದ ಡಾ. ಅಶೋಕ್ ದಳವಾಯಿ, IAS (ನಿವೃತ್ತ) ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
GITAM (Deemed to be University)ನ ಕುಲಪತಿ ಡಾ. ವಿರೇಂದರ್ ಸಿಂಗ್ ಚೌಹಾಣ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶಾಖಪಟ್ಟಣಂನ ಸಂಸದರು ಹಾಗೂ GITAM ವಿಶ್ವವಿದ್ಯಾಲಯದ ಅಧ್ಯಕ್ಷ ಶ್ರೀ ಎಂ. ಶ್ರೀಭರತ್, ಉಪಕುಲಪತಿ ಪ್ರೊ. ಎರೋಲ್ ಡಿ'ಸೋಜಾ ಹಾಗೂ ಬೆಂಗಳೂರು ಕ್ಯಾಂಪಸ್‌ನ ಪ್ರೊ-ವೈಸ್ ಚಾನ್ಸಲರ್ ಪ್ರೊ. ಬಸವರಾಜ್ ಜಿ. ಕಟಗೇರಿ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪದವೀಧರರನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಾ.ಅಶೋಕ್ ದಳವಾಯಿ ಅವರು, “ಇಂದು ನಿಮ್ಮ ಜೀವನದ ಒಂದು ಮಹತ್ವದ ಮೈಲಿಗಲ್ಲು. ಆದರೆ, ಇದೇ ವೇಳೆ ಇದು ಇನ್ನೂ ದೊಡ್ಡ ಪ್ರಯಾಣದ ಆರಂಭವೂ ಹೌದು. ವಿಶ್ವವಿದ್ಯಾಲಯದ ಹೊರಗಿನ ಜಗತ್ತಿಗೆ ಕಾಲಿಡುವಾಗ, ವೃತ್ತಿಪರವಾಗಿ ನೀವು ಏನಾಗಲು ಬಯಸುತ್ತೀರಿ ಎಂಬುದು ಮತ್ತು ಜೀವನದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದು ಎರಡು ವಿಭಿನ್ನ ಸಂಗತಿಗಳೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ವೃತ್ತಿಯು ನಿಮಗೆ ಉದ್ಯೋಗ, ಸ್ಥಾನಮಾನ ಮತ್ತು ಜೀವನೋಪಾಯವನ್ನು ನೀಡಬಹುದು. ಆದರೆ, ನಿಮ್ಮ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಸಮಾಜದ ಸೇವೆಗೆ ಬಳಸುವ ಮೂಲಕ ನಿಮ್ಮನ್ನು ಮೀರಿ ಯೋಚಿಸಿದಾಗ ಜೀವನದ ನಿಜವಾದ ಉದ್ದೇಶ ದೊರೆಯುತ್ತದೆ,” ಎಂದರು.
ಅವರು ಮುಂದುವರಿಸಿ, “ವಿಫಲತೆಯನ್ನು ಭಯಪಡಬೇಡಿ. ನೀವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದರೆ ಮತ್ತು ನಿಮ್ಮನ್ನು ನೀವು ಸವಾಲಿಗೆ ಒಳಪಡಿಸುತ್ತಿದ್ದರೆ, ಕೆಲವೊಮ್ಮೆ ವಿಫಲರಾಗುವುದು ಸಹಜ. ಆ ವೈಫಲ್ಯಗಳೇ ಯಶಸ್ಸಿನತ್ತ ಸಾಗುವ ಮೊದಲ ಹೆಜ್ಜೆಗಳಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೈತಿಕತೆ, ಕರುಣೆ ಮತ್ತು ಪ್ರಾಮಾಣಿಕತೆಯನ್ನು ನಿಮ್ಮ ಜೀವನದ ಭಾಗವಾಗಿಸಿಕೊಳ್ಳಿ. ಬುದ್ಧಿವಂತಿಕೆ ಮತ್ತು ಕೌಶಲ್ಯಗಳು ನಿಮ್ಮನ್ನು ಬಹಳ ದೂರ ಕೊಂಡೊಯ್ಯ ಬಹುದು. ಆದರೆ, ಅಂತಿಮವಾಗಿ ನೀವು ಯಾವ ರೀತಿಯ ವೃತ್ತಿಪರ, ನಾಗರಿಕ ಮತ್ತು ಮಾನವ ನಾಗುತ್ತೀರಿ ಎಂಬುದನ್ನು ನಿರ್ಧರಿಸುವುದು ಈ ಮೌಲ್ಯಗಳೇ,” ಎಂದು ಹೇಳಿದರು.
GITAM ವಿಶ್ವವಿದ್ಯಾಲಯದ ಅಧ್ಯಕ್ಷರು ಹಾಗೂ ವಿಶಾಖಪಟ್ಟಣಂನ ಸಂಸದರಾದ ಶ್ರೀ ಎಂ. ಶ್ರೀಭರತ್ ಅವರು ಮಾತನಾಡಿ, “ತಂತ್ರಜ್ಞಾನವು ಕೆಲವೇ ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದ ವೇಗದಲ್ಲಿ ಪ್ರತಿಯೊಂದು ಉದ್ಯಮವನ್ನೂ ಮರುರೂಪಿಸುತ್ತಿದೆ. ಕೃತಕ ಬುದ್ಧಿಮತ್ತೆ, ಆಟೋಮೇಷನ್ ಮತ್ತು ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಗಳು ನಮ್ಮ ಪದವೀಧರರು ಸೇರುವ ಉದ್ಯೋಗ ಕ್ಷೇತ್ರಗಳನ್ನು ಮಾತ್ರವಲ್ಲದೆ, ವ್ಯವಹಾರಗಳು ನವೀನತೆಯನ್ನು ಅಳವಡಿಸಿ ಕೊಳ್ಳುವ ವಿಧಾನ, ಸರ್ಕಾರಗಳು ಸೇವೆಗಳನ್ನು ಒದಗಿಸುವ ರೀತಿ ಮತ್ತು ಸಮಾಜಗಳು ಸಂಕೀರ್ಣ ಸವಾಲುಗಳನ್ನು ಪರಿಹರಿಸುವ ವಿಧಾನವನ್ನೂ ಬದಲಾಯಿಸುತ್ತಿವೆ,” ಎಂದರು.
“ಇಂತಹ ಪರಿಸ್ಥಿತಿಯಲ್ಲಿ ತಾಂತ್ರಿಕ ಜ್ಞಾನವೊಂದೇ ಸಾಕಾಗುವುದಿಲ್ಲ. ಬಲವಾದ ಮೂಲಭೂತ ಜ್ಞಾನವನ್ನು ಕುತೂಹಲ, ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ನಿರಂತರವಾಗಿ ಕಲಿಯುವ ಮನೋಭಾವದೊಂದಿಗೆ ಸಂಯೋಜಿಸುವ ಪದವೀಧರರು ಭವಿಷ್ಯದಲ್ಲಿ ಯಶಸ್ವಿಯಾಗುತ್ತಾರೆ. ವಿಶ್ವವಿದ್ಯಾಲಯದಲ್ಲಿ ನೀವು ಕಲಿತಿರುವುದು ಕೇವಲ ಮೊದಲ ಹೆಜ್ಜೆ. ಒಂದು ಕಾಲದಲ್ಲಿ ಒಂದು ಕೌಶಲ್ಯವನ್ನು ಉತ್ತಮವಾಗಿ ಕಲಿತರೆ ಅದೇ ಕೌಶಲ್ಯದ ಆಧಾರದ ಮೇಲೆ ದಶಕಗಳ ಕಾಲ ವೃತ್ತಿಜೀವನ ನಡೆಸಬಹುದಾಗಿತ್ತು. ಆದರೆ ಆ ಜಗತ್ತು ವೇಗವಾಗಿ ಬದಲಾಗುತ್ತಿದೆ,” ಎಂದು ಅವರು ಹೇಳಿದರು.
“ಉದ್ಯೋಗಗಳು ಬದಲಾಗಲಿವೆ, ಕೌಶಲ್ಯಗಳು ಹಳೆಯದಾಗಲಿವೆ ಮತ್ತು ಹೊಸ ಅವಕಾಶಗಳು ಹಿಂದಿಗಿಂತಲೂ ವೇಗವಾಗಿ ಮೂಡಿಬರಲಿವೆ. ನಿರಂತರವಾಗಿ ಕಲಿಯುವವರು, ಬದಲಾವಣೆಗೆ ಹೊಂದಿಕೊಳ್ಳುವವರು ಮತ್ತು ಬದಲಾವಣೆ ಅನಿವಾರ್ಯವಾಗುವ ಮುನ್ನವೇ ಅದಕ್ಕೆ ಸಿದ್ಧರಾಗುವ ಧೈರ್ಯ ಹೊಂದಿರುವವರು ಯಶಸ್ವಿಯಾಗುತ್ತಾರೆ. ಶೀಘ್ರದಲ್ಲೇ ನಿಮ್ಮ ಅಂಕಗಳಿಗಿಂತ ನೀವು ಯಾವ ರೀತಿಯ ವ್ಯಕ್ತಿಯಾಗುತ್ತೀರಿ ಮತ್ತು ಜೀವನದುದ್ದಕ್ಕೂ ಕಲಿಯುವುದನ್ನು ಮುಂದುವರಿಸುವ ನಿಮ್ಮ ಮನೋಭಾವವೇ ಹೆಚ್ಚು ಮಹತ್ವ ಪಡೆಯಲಿದೆ. GITAMನಲ್ಲಿ ಕಳೆದ ವರ್ಷಗಳು ಅದಕ್ಕೆ ಅಗತ್ಯವಾದ ಬಲವಾದ ಅಡಿಪಾಯವನ್ನು ನಿಮಗೆ ನೀಡಿವೆ ಎಂದು ನಾನು ಆಶಿಸುತ್ತೇನೆ,” ಎಂದು ಶ್ರೀಭರತ್ ಹೇಳಿದರು.
ಸಂಶೋಧನೆ ಮತ್ತು ನವೀನತೆಗೆ ಮತ್ತಷ್ಟು ಒತ್ತು
ಮತ್ತೊಂದು ವರ್ಷದ ಶೈಕ್ಷಣಿಕ ಮತ್ತು ಸಂಶೋಧನಾ ಪ್ರಗತಿಯೊಂದಿಗೆ, GITAMನ ಬೆಂಗಳೂರು ಕ್ಯಾಂಪಸ್ ಉದಯೋನ್ಮುಖ ತಂತ್ರಜ್ಞಾನಗಳು, ಉದ್ಯಮದ ಅಗತ್ಯಗಳಿಗೆ ಹೊಂದಿಕೊಳ್ಳುವ ಕಲಿಕೆ ಮತ್ತು ನವೀನತೆಗೆ ತನ್ನ ಒತ್ತು ಮುಂದುವರಿಸಿದೆ.
ಈ ಅವಧಿಯಲ್ಲಿ ಕ್ಯಾಂಪಸ್‌ನ ಬೋಧಕ ಸಿಬ್ಬಂದಿ ಒಟ್ಟು 317 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ 157 ಪ್ರಬಂಧಗಳು Scopus ಸೂಚ್ಯಂಕ ಹೊಂದಿರುವ Q1 ಮತ್ತು Q2 ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ.
ಇದಲ್ಲದೆ, BRNS, ANRF, UGC-DAE CSR, TIH Foundation IIT Bombay ಮತ್ತು TiHAN IIT Hyderabad ಸೇರಿದಂತೆ ವಿವಿಧ ಸಂಸ್ಥೆಗಳಿಂದ ಒಟ್ಟು ರೂ. 2.54 ಕೋಟಿ ಮೌಲ್ಯದ ಆರು ಬಾಹ್ಯ ಅನುದಾನಿತ ಸಂಶೋಧನಾ ಯೋಜನೆಗಳನ್ನು ಕ್ಯಾಂಪಸ್ ಪಡೆದುಕೊಂಡಿದೆ. ಬೋಧಕ ಸಿಬ್ಬಂದಿ 10 ಪೇಟೆಂಟ್‌ಗಳನ್ನು ಸಹ ಪ್ರಕಟಿಸಿದ್ದಾರೆ.
ಮುಂದುವರಿದ ಸಂಶೋಧನೆ ಮತ್ತು ಕಲಿಕಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಹಲವು ಹೊಸ ಸೌಲಭ್ಯಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ Centre of Excellence in Electric Vehicles, Advanced Extended Reality (AXR) Research Laboratory, Drone Laboratory, Networking Technologies Lab ಹಾಗೂ School of Sciences ಅಡಿಯಲ್ಲಿ Cosmos Lab ಪ್ರಮುಖವಾಗಿವೆ.
ಈ ಹೊಸ ಸೌಲಭ್ಯಗಳಿಗಾಗಿ ಒಟ್ಟು ರೂ. 5.65 ಕೋಟಿ ಹೂಡಿಕೆ ಮಾಡಲಾಗಿದೆ. ಇದರೊಂದಿಗೆ ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಸಂಶೋ ಧನಾ ಪ್ರಯೋಗಾಲಯಗಳ ಒಟ್ಟು ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
GITAM (Deemed to be University) ಕುರಿತು 1980ರಲ್ಲಿ ವಿಶಾಖಪಟ್ಟಣದಲ್ಲಿ ಸ್ಥಾಪನೆಯಾದ GITAM (Deemed to be University), ವಿಶಾಖಪಟ್ಟಣಂ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಕ್ಯಾಂಪಸ್‌ಗಳನ್ನು ಹೊಂದಿರುವ ಬಹುಶಿಸ್ತೀಯ ಶಿಕ್ಷಣ ಸಂಸ್ಥೆಯಾಗಿದೆ. ಇದರ ವ್ಯಾಪ್ತಿಯಲ್ಲಿ GITAM Institute of Medical Sciences and Research ಕೂಡ ಕಾರ್ಯನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯವು 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, 105 ದೇಶಗಳಲ್ಲಿ 96,000ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳ ಜಾಗತಿಕ ಅಲ್ಯುಮ್ನಿ ಜಾಲವನ್ನು ಹೊಂದಿದೆ.
GITAM ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವಿಜ್ಞಾನ, ಫಾರ್ಮಸಿ, ಕಾನೂನು, ವಾಸ್ತುಶಿಲ್ಪ, ಮಾನವಿಕ ಶಾಸ್ತ್ರ, ವೈದ್ಯಕೀಯ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸಂಶೋಧನೆ, ನವೀನತೆ, ಉದ್ಯಮಶೀಲತೆ ಮತ್ತು ಉದ್ಯಮದೊಂದಿಗೆ ಬಲವಾದ ಸಂಪರ್ಕಕ್ಕೆ ವಿಶ್ವವಿದ್ಯಾಲಯ ವಿಶೇಷ ಒತ್ತು ನೀಡುತ್ತಿದೆ.
GITAM ವಿಶ್ವವಿದ್ಯಾಲಯವು NAACನಿಂದ A++ ಗ್ರೇಡ್ ಪಡೆದಿದ್ದು, UGC Category I ಮಾನ್ಯತೆ ಯನ್ನು ಹೊಂದಿದೆ. NIRF Rankings 2025ರಲ್ಲಿ ವಿಶ್ವವಿದ್ಯಾಲಯ ವಿಭಾಗದಲ್ಲಿ 88ನೇ ಸ್ಥಾನ ಪಡೆದಿದ್ದು, QS Asia University Rankings 2026ರಲ್ಲಿ 801–850 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ.
“Transformation. It begins here.” ಎಂಬ ತನ್ನ ದೃಷ್ಟಿಕೋನದೊಂದಿಗೆ GITAM ಶೈಕ್ಷಣಿಕ ಶ್ರೇಷ್ಠತೆ, ಜಾಗತಿಕ ದೃಷ್ಟಿಕೋನ ಮತ್ತು ಸಮಾಜದ ಮೇಲೆ ಅರ್ಥಪೂರ್ಣ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವ ಭವಿಷ್ಯ ಸಿದ್ಧ ಪದವೀಧರರನ್ನು ರೂಪಿಸುವ ಬದ್ಧತೆಯನ್ನು ಮುಂದುವರಿಸಿದೆ.