ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅನ್ವೇಷಣಾ 2026ರಲ್ಲಿ 61 ಯುವ ಸಂಶೋಧಕರು 20 ಸ್ವತಂತ್ರ ಸಂಶೋಧನಾ ಯೋಜನೆಗಳ ಪ್ರದರ್ಶನ

ಪ್ರಯೋಗದ ವಿದ್ಯಾರ್ಥಿ ಸಂಶೋಧನಾ ಕಾರ್ಯಕ್ರಮದ ಎರಡು ದಿನಗಳ ಸಮಾರೋಪವು ಕುತೂಹಲ, ವೈಜ್ಞಾನಿಕ ಅನ್ವೇಷಣೆ ಮತ್ತು ಮುಂದಿನ ಪೀಳಿಗೆಯ ಸಂಶೋಧಕರನ್ನು ಸಂಭ್ರಮಿಸಿತು. ಅನ್ವೇಷಣಾ 2026ರಲ್ಲಿ ಪ್ರಸ್ತುತಪಡಿಸಲಾದ 20 ಸಂಶೋಧನಾ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅತ್ಯುತ್ತಮ ಪ್ರದರ್ಶನ ನೀಡಿದ ಯೋಜನೆಗಳಾಗಿ ಹೊರಹೊಮ್ಮಿದವು.

ಬೆಂಗಳೂರು: ಬೆಂಗಳೂರು ಮೂಲದ ‘ಪ್ರಯೋಗ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಸಂಸ್ಥೆಯು ಆಯೋಜಿಸಿದ್ದ ಪ್ರಮುಖ ವಿದ್ಯಾರ್ಥಿ ಸಂಶೋಧನಾ ಕಾರ್ಯಕ್ರಮ ‘ಅನ್ವೇಷಣ 2026’ ಯಶಸ್ವಿಯಾಗಿ ನೆರವೇರಿತು. ಶಾಲಾ ಹಂತದಲ್ಲೇ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಇರುವ ಅಪಾರ ಅವಕಾಶಗಳನ್ನು ಎತ್ತಿ ಹಿಡಿದ ಈ ಕಾರ್ಯಕ್ರಮದಲ್ಲಿ 9 ರಿಂದ 12 ನೇ ತರಗತಿಯ ಒಟ್ಟು 61 ವಿದ್ಯಾರ್ಥಿಗಳು 20 ಸಂಶೋಧನಾ ಯೋಜನೆಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿದರು.

ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ನಡೆದ ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ, ಅಂತಿಮ ಆಯ್ಕೆಯಲ್ಲಿದ್ದ ಅತ್ಯುತ್ತಮ ನಾಲ್ಕು ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸ ಲಾಯಿತು.

ಐದು ತಿಂಗಳ ಅವಧಿಯ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ಸಂಶೋಧನಾ ಕಾರ್ಯಕ್ರಮವಾದ ‘ಅನ್ವೇಷಣ’ಕ್ಕೆ ಈ ಬಾರಿ ಲೇಹ್ ಸೇರಿದಂತೆ ದೇಶಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗಿದೆ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯ ಅವಕಾಶ ಕಲ್ಪಿಸುತ್ತಿರುವ ‘ಪ್ರಯೋಗ’ ಸಂಸ್ಥೆಯ ಈ ಪ್ರಯತ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕಳೆದ ಮಾರ್ಚ್ ತಿಂಗಳ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಲ್ಲೇಖಿಸಿ ಶ್ಲಾಘಿಸಿದ್ದರು. ಇದರಿಂದಾಗಿ ಈ ಉಪಕ್ರಮಕ್ಕೆ ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಗಮನ ಹಾಗೂ ಮನ್ನಣೆ ದೊರೆತಿದೆ.

ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್

ಈ ಬೃಹತ್ ಕಾರ್ಯಕ್ರಮದ ನಿರ್ಣಾಯಕ ಹಂತವು ಶನಿವಾರವೇ ಪ್ರಯೋಗ ಕ್ಯಾಂಪಸ್‌ನಲ್ಲಿ ಚಾಲನೆ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿದ್ದ ಎಲ್ಲಾ 20 ಸಂಶೋಧನಾ ತಂಡಗಳು ವಿಷಯ ತಜ್ಞರನ್ನೊಳಗೊಂಡ ತೀರ್ಪುಗಾರರ ಮಂಡಳಿಯ ಮುಂದೆ ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಿದರು.

ತಲಾ 10 ಯೋಜನೆಗಳಂತೆ ಎರಡು ಪ್ರತ್ಯೇಕ ಸಮಿತಿಗಳು ಏಕಕಾಲದಲ್ಲಿ ವಿದ್ಯಾರ್ಥಿಗಳ ಸಂಶೋ ಧನಾ ಪ್ರಶ್ನೆಗಳು, ಕೈಗೊಂಡ ಪ್ರಯೋಗ ವಿಧಾನಗಳು, ಸಾಕ್ಷ್ಯಾಧಾರಗಳು, ಕಂಡುಕೊಂಡ ತೀರ್ಮಾನಗಳು ಹಾಗೂ ವಿಷಯ ಮಂಡನೆಯ ಕೌಶಲವನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಿದರು.ಈ ತೀವ್ರ ಪೈಪೋಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಾಲ್ಕು ಪ್ರಮುಖ ಯೋಜನೆಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಭಾನುವಾರ ನಡೆಯಲಿರುವ ಪ್ರಸ್ತುತಿಯಲ್ಲಿ ಪ್ರದರ್ಶನಗೊಳ್ಳಲಿವೆ.

Anveshane 2

ಕಾರ್ಯಕ್ರಮದಲ್ಲಿ ತೀವ್ರ ಪೈಪೋಟಿಯ ನಡುವೆ ಅತ್ಯುತ್ತಮ ಸಾಧನೆ ತೋರಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡ ಪ್ರಮುಖ ಸಂಶೋಧನಾ ಯೋಜನೆಗಳು ಹೀಗಿವೆ:

ಪ್ರಥಮ ಸ್ಥಾನ: ಮಾಲಿಕ್ಯೂಲರ್ ಡಾಕಿಂಗ್, ಎನ್‌ಹ್ಯಾನ್ಸ್ಡ್ ಸ್ಯಾಂಪ್ಲಿಂಗ್ ಮಾಲಿಕ್ಯೂಲರ್ ಡೈನಾ ಮಿಕ್ಸ್ ಮತ್ತು ಕೆಲವು ಜೈವಿಕ ಸಕ್ರಿಯ ಸಂಯುಕ್ತಗಳ ಔಷಧೀಯ ಗುಣಗಳನ್ನು ಸಂಯೋಜಿಸುವ ಮಲ್ಟಿಸ್ಕೇಲ್ ಕಂಪ್ಯೂಟೇಶನಲ್ ವಿಧಾನ.

ದ್ವಿತೀಯ ಸ್ಥಾನ: ಭಾರತದಲ್ಲಿ ಮಾರಾಟವಾಗುವ ಪ್ರಮುಖ ಟೀ ಬ್ರಾಂಡ್‌ಗಳಲ್ಲಿರುವ ಕೀಟನಾಶಕ ಅವಶೇಷಗಳು, ಹಾನಿಕಾರಕ ರಾಸಾಯನಿಕಗಳು ಮತ್ತು ಲೋಹದ ಕಲ್ಮಶಗಳ ಗುಣಾತ್ಮಕ ವಿಶ್ಲೇಷಣೆ.

ತೃತೀಯ ಸ್ಥಾನ: ಥರ್ಮೋಫಿಲಿಕ್ ಸೂಕ್ಷ್ಮಜೀವಿ-ಎಂಜೈಮ್ ವ್ಯವಸ್ಥೆಯನ್ನು ಬಳಸಿ ಅಡುಗೆಮನೆಯ ತ್ಯಾಜ್ಯವನ್ನು ತ್ವರಿತವಾಗಿ ಗೊಬ್ಬರ ಮಾದರಿಯ ಮಣ್ಣಾಗಿ ಪರಿವರ್ತಿಸುವ ಜೈವಿಕ ಪ್ರಕ್ರಿಯೆ.

ನಾಲ್ಕನೇ ಸ್ಥಾನ: ನೈಸರ್ಗಿಕ ಲ್ಯಾಟೆಕ್ಸ್‌ನ ಹಸಿರು ಹೆಪ್ಪುಗಟ್ಟಿಸುವಿಕೆ ಮತ್ತು ತ್ಯಾಜ್ಯ ಸಸ್ಯ ನಾರು ಗಳನ್ನು ಬಳಸಿ ಸುಸ್ಥಿರ ಸಂಯೋಜಿತ ವಸ್ತುಗಳ ಅಭಿವೃದ್ಧಿ.

ಈ ಸಂಶೋಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ 20 ತಂಡಗಳಿಗೂ ತಮ್ಮ ಯೋಜನೆ ಗಳನ್ನು ಪ್ರಸ್ತುತಪಡಿಸಲು ವೇದಿಕೆ ಕಲ್ಪಿಸಲಾಗಿತ್ತು. ಪೋಸ್ಟರ್ ಪ್ರದರ್ಶನದ ಮೂಲಕ ವಿದ್ಯಾರ್ಥಿ ಗಳು ತಮ್ಮ ಸಂಶೋಧನಾ ವಿಚಾರಗಳನ್ನು ಆಗಮಿಸಿದ್ದ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಉದ್ಯಮ ಕ್ಷೇತ್ರದ ಗಣ್ಯರು ಹಾಗೂ ಪೋಷಕರೊಂದಿಗೆ ನೇರವಾಗಿ ಹಂಚಿಕೊಂಡು ಸಂವಾದ ನಡೆಸಿದರು.