ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

624 ಕೋಟಿ ರೂ. ಸಂಪತ್ತಿನ ಒಡೆಯ ನಟ, ರಾಜಕಾರಣಿ ದಳಪತಿ ವಿಜಯ್

ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ದಶಕಗಳ ಕಾಲ ಆಡಳಿತ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಸೋಲುಣಿಸಿದೆ. ಈ ಮೂಲಕ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮಿದ್ದು, ಇವರ ಒಟ್ಟು ಆಸ್ತಿ ಎಷ್ಟಿದೆ ? ಎನ್ನುವ ಕುರಿತು ವಿವರ ಇಲ್ಲಿದೆ.

ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamilnadu assembly election) ನಟ ವಿಜಯ್ (Thalapathy Vijay) ಅವರ ತಮಿಳಗ ವೆಟ್ರಿ ಕಳಗಂ (Tamil Vetri Kalagam) ಪಕ್ಷವು 111 ಸ್ಥಾನಗಳಲ್ಲಿ ಮುನ್ನಡೆ (Election Results 2026) ಸಾಧಿಸುವ ಮೂಲಕ ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಸೋಲುಣಿಸಿ ತಮಿಳುನಾಡು ರಾಜಕೀಯದಲ್ಲಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮಿರುವ ನಟ ವಿಜಯ್ ಅವರು ಒಟ್ಟು 624 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.

ವಿಜಯ್ ಅವರು ಕಳೆದ ಮಾರ್ಚ್ ಅಂತ್ಯದಲ್ಲಿ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ನಲ್ಲಿ 624 ಕೋಟಿ ರೂ. ನಿವ್ವಳ ಮೌಲ್ಯದ ಸಂಪತ್ತನ್ನು ಘೋಷಿಸಿದ್ದಾರೆ. ಅವರ ಆಸ್ತಿಗಳು ಹೆಚ್ಚಾಗಿ ಬ್ಯಾಂಕ್ ಠೇವಣಿ, ರಿಯಲ್ ಎಸ್ಟೇಟ್ ನಲ್ಲಿದೆ. ಸುಮಾರು 404 ಕೋಟಿ ರೂ. ಚರ ಆಸ್ತಿ ಮತ್ತು 220 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ತಮಿಳುನಾಡು ರಾಜಕಾರಣದಲ್ಲಿ ʻಸೀಟಿʼ ಊದಿಕೊಂಡೇ ಸುನಾಮಿ ಎಬ್ಬಿಸಿದ ನಟ ವಿಜಯ್; ‌ʻದಳಪತಿʼ ಗೆಲುವಿಗೆ ಸಂಭ್ರಮಿಸಿದ ಚಿತ್ರರಂಗ

ಸಾಲಿಗ್ರಾಮದಲ್ಲಿರುವ ಭಾರತೀಯ ಸಾಗರೋತ್ತರ ಬ್ಯಾಂಕ್ ನಲ್ಲಿರುವ ಒಂದೇ ಖಾತೆಯಲ್ಲಿ 213 ಕೋಟಿ ರೂ. ಗಳಿಗಿಂತ ಹೆಚ್ಚಿನ ಬ್ಯಾಲೆನ್ಸ್ ಹೊಂದಿರುವ ಅವರು 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 184.53 ಕೋಟಿ ರೂ. ಆದಾಯವನ್ನು ಘೋಷಿಸಿದ್ದರು.

ನಾಲ್ಕು ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಹೊಂದಿರುವ ಅವರು ಇವುಗಳಲ್ಲಿ ಒಟ್ಟು 100 ಕೋಟಿ ರೂ. ಅನ್ನು ಹೊಂದಿದ್ದಾರೆ. ಇವುಗಳಲ್ಲಿ ಆಕ್ಸಿಸ್ ಬ್ಯಾಂಕಿನಲ್ಲಿ 40 ಕೋಟಿ ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕಿನಲ್ಲಿ 25 ಕೋಟಿ ರೂ., ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 20 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 15 ಕೋಟಿ ರೂ. ಇವೆ.

ಜಯ ನಗರ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸುಮಾರು 19.69 ಲಕ್ಷ ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ 9,600 ರೂ., ಸನ್ ಪೇಪರ್ ಮಿಲ್ ಲಿಮಿಟೆಡ್ ನ ರೂ. 25,000 ರೂ. ಮೌಲ್ಯದ ಷೇರುಗಳನ್ನು ಹೊಂಡಿರುವ ಅವರ ಷೇರು ಮಾರುಕಟ್ಟೆ ಮೌಲ್ಯ 20 ಲಕ್ಷ ರೂ. ಗಿಂತಲೂ ಕಡಿಮೆ ಇದೆ.

ಸರಿಸುಮಾರು 220 ಕೋಟಿ ರೂ. ಗಳ ಸ್ಥಿರ ಆಸ್ತಿ ವಸತಿ, ವಾಣಿಜ್ಯ ಮತ್ತು ಕೃಷಿ ಆಸ್ತಿಗಳನ್ನು ಅವರು ಹೊಂದಿದ್ದಾರೆ. ಇವರ ಆದಾಯ ಮೂಲ ಮುಖ್ಯವಾಗಿ ಸ್ವ-ಉದ್ಯೋಗ, ಬಡ್ಡಿ, ಆಸ್ತಿಗಳ ಬಾಡಿಗೆ ಆದಾಯ ಸೇರಿದೆ.

ವಿಜಯ್ ಅವರು ಹೊಂದಿರುವ ವಾಹನಗಳಲ್ಲಿ 2024 ಟೊಯೋಟಾ ಲೆಕ್ಸಸ್ 350, 2024 ಬಿಎಂಡಬ್ಲ್ಯೂ ಐ7, 2024 ಟೊಯೋಟಾ ವೆಲ್‌ಫೈರ್, 2020 ಬಿಎಂಡಬ್ಲ್ಯೂ 530, 2024 ಮಾರುತಿ ಸ್ವಿಫ್ಟ್ ಮತ್ತು 2025 ಟಿವಿಎಸ್ ಎಕ್ಸ್‌ಎಲ್ ಸೂಪರ್ ಬೈಕ್ ಸೇರಿದೆ. ಒಟ್ಟು 1.2 ಕೋಟಿ ಮೌಲ್ಯದ 883 ಗ್ರಾಂ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಘೋಷಿಸಿಕೊಂಡಿರುವ ಅವರ ಪತ್ನಿ ಸಂಗೀತ ವಿಜಯ್‌ ಬಳಿ 12.6 ಕೋಟಿ ರೂ, ಮಕ್ಕಳಾದ ಜೇಸನ್ ಸಂಜಯ್‌ ಬಳಿ 8.78 ಲಕ್ಷ ರೂ ಮತ್ತು ದಿವ್ಯಾ ಸಾಶಾ ಬಳಿ 4.6 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿರುವುದಾಗಿ ತಿಳಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು: ಯಾರ ಕೈಹಿಡಿಯಲಿದ್ದಾರೆ 'ಜನನಾಯಕ'?

ಇನ್ನು ವಿಜಯ್ ಅವಾರ್ಯ್ ಯಾವುದೇ ಸಾಲ ಹೊಂದಿಲ್ಲ. ಅವರ ಪತ್ನಿ ಸಂಗೀತಾ ಅವರು ಒಟ್ಟು 15.76 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ 15.51 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 25 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿ ಸೇರಿವೆ.

ವಿದ್ಯಾ ಇರ್ವತ್ತೂರು

View all posts by this author