ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಸ್ಸಾಂನಲ್ಲಿ 100 ಸ್ಥಾನಗಳ ಗಡಿ ದಾಟಿದ ಎನ್‌ಡಿಎ ಮೈತ್ರಿಕೂಟ

ವಿಧಾನ ಸಭಾ ಚುನಾವಣೆ ಮತ ಎಣಿಕೆಯ ಆರಂಭದಿಂದಲೇ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಆರಂಭದಿಂದಲೇ ಮುನ್ನಡೆ ಸಾಧಿಸಿದೆ. 100 ಸ್ಥಾನಗಳ ಗಡಿ ದಾಟಿದ್ದು, ಈವರೆಗೆ ಅತ್ಯುತ್ತಮ ಪ್ರದರ್ಶನವನ್ನು ಕೂಡ ನೀಡಿದೆ. ವಿರೋಧ ಪಕ್ಷಗಳು ಪ್ರಮುಖ ಕ್ಷೇತ್ರಗಳಲ್ಲಿ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿವೆ.

ಸಂಗ್ರಹ ಚಿತ್ರ

ಅಸ್ಸಾಂ: ಬಿಜೆಪಿ (BJP) ನೇತೃತ್ವದ ಎನ್‌ಡಿಎ ಮೈತ್ರಿಕೂಟವು (NDA alliance) ಮತ ಎಣಿಕೆಯ (election results 2026) ಆರಂಭದಿಂದಲೇ ಅಸ್ಸಾಂನಲ್ಲಿ (Assam) ಮುನ್ನಡೆಯನ್ನು ಪಡೆದಿದೆ. ಈವರೆಗೆ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿರುವ ಎನ್‌ಡಿಎ ಮೈತ್ರಿಕೂಟ 100 ಸ್ಥಾನಗಳ ಗಡಿ ದಾಟಿದ್ದು, ವಿರೋಧ ಪಕ್ಷಗಳು ಪ್ರಮುಖ ಕ್ಷೇತ್ರಗಳಲ್ಲಿ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುವಂತಾಗಿದೆ.126 ವಿಧಾನ ಸಭಾ ಸ್ಥಾನಗಳನ್ನು ಹೊಂದಿರುವ ಅಸ್ಸಾಂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪರವಾಗಿ ನಿಂತಿರುವುದನ್ನು ಇದು ಸ್ಪಷ್ಟಪಡಿಸಿದೆ. ಇಲ್ಲಿ ಎನ್‌ಡಿಎ ಕೇವಲ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿಲ್ಲ ಬದಲಾಗಿ ರಾಜ್ಯಾದ್ಯಂತ ಅದನ್ನು ಬಲವಾಗಿರುವುದನ್ನು ತೋರಿಸಿದೆ.

ಅಸ್ಸಾಂ ರಾಜ್ಯದ್ಯಂತ ಎನ್‌ಡಿಎ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮತ ಎಣಿಕೆಯ ಅಂಕಿ ಅಂಶಗಳ ಪ್ರಕಾರ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಗಣನೀಯವಾಗಿ ಹಿಂದುಳಿದಿವೆ. ಹೀಗಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಗೆಲುವಿನ ಸಂಭ್ರಮದಲ್ಲಿದೆ. ಅಸ್ಸಾಂನ ಎಲ್ಲಾ 126 ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಸುಮಾರು 2.5 ಕೋಟಿ ಮತದಾರರಿಂದ ಶೇಕಡಾ 85.96ರಷ್ಟು ಮತದಾನ ದಾಖಲಾಗಿತ್ತು. ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದು, 35 ಜಿಲ್ಲೆಗಳ 40 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಸಂಜೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

Election Results 2026:ಮ್ಯಾಜಿಕ್ ಸಂಖ್ಯೆ ದಾಟಲು ವಿಫಲವಾದರೆ ಏನು ಮಾಡುತ್ತಾರೆ ನಟ ವಿಜಯ್?

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಯ ಪ್ರಮುಖ ಪಕ್ಷಗಳು ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್). ಬಿಜೆಪಿ 90 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಜಿಪಿ ಮತ್ತು ಬಿಪಿಎಫ್ ಕ್ರಮವಾಗಿ 26 ಮತ್ತು 11 ಅಭ್ಯರ್ಥಿಗಳನ್ನು ಹೊಂದಿವೆ. ವಿರೋಧ ಮೈತ್ರಿಕೂಟದಲ್ಲಿ ಕಾಂಗ್ರೆಸ್ 99 ಅಭ್ಯರ್ಥಿಗಳು, ರೈಜೋರ್ ದಳ 13, ಅಸ್ಸಾಂ ಜಾತಿಯ ಪರಿಷತ್ 10, ಸಿಪಿಐ (ಎಂ) ಮೂವರು ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ (ಎಪಿಎಚ್‌ಎಲ್‌ಸಿ) ಇಬ್ಬರು ಅಭ್ಯರ್ಥಿಗಳನ್ನು ಹೊಂದಿದ್ದಾರೆ.

ಎಐಯುಡಿಎಫ್ 30 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ತಲಾ 18 ಸ್ಥಾನಗಳಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 16 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಇದಲ್ಲದೆ, 258 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.

ಜಲುಕ್ಬರಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ಮುನ್ನಡೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜಲುಕ್ಬರಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಧೇಮಾಜಿಯಲ್ಲಿ ರನೋಜ್ ಪೆಗು, ಜಾಗಿರೋಡ್‌ನಲ್ಲಿ ಪಿಜುಶ್ ಹಜಾರಿಕಾ, ಧೇಕಿಯಾಜುಲಿಯಲ್ಲಿ ಅಶೋಕ್ ಸಿಂಘಾಲ್, ದಿಬ್ರುಗಢದಲ್ಲಿ ಪ್ರಶಾಂತ ಫುಕಾನ್ ಮತ್ತು ಟಿಂಗ್‌ಖಾಂಗ್‌ನಲ್ಲಿ ಬಿಮಲ್ ಬೋರಾ ಸೇರಿದಂತೆ ಅವರ ಸಂಪುಟದ ಹಲವಾರು ಸಚಿವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

Karnataka By-Election Results 2026: ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿ ಮುನ್ನಡೆ

ಚುನಾವಣಾ ಇತಿಹಾಸ

2006ರಲ್ಲಿ ಕಾಂಗ್ರೆಸ್ ನೇತೃತ್ವದ ಬಣವು ಇಲ್ಲಿ 56 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿಗೆ 34 ಮತ್ತು ಇತರರಿಗೆ 36 ಸ್ಥಾನ ಗಳಿಸಿತ್ತು. 2011ರಲ್ಲಿ ಕಾಂಗ್ರೆಸ್ 78, ಬಿಜೆಪಿ 27ಕ್ಕೆ ಇಳಿಯಿತು. 2016 ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 86 ಸ್ಥಾನ ಗಳಿಸಿ ಕಾಂಗ್ರೆಸ್ 26 ಸ್ಥಾನಗಳಿಗೆ ಇಳಿಯಿತು. 2021ರಲ್ಲಿ ಬಿಜೆಪಿ 79 ಮತ್ತು ಕಾಂಗ್ರೆಸ್ 30 ಸ್ಥಾನಗಳಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author