Akshaya Tritiya 2026: ಅಕ್ಷಯ ತೃತೀಯಾ ಸ್ವಾಗತಕ್ಕೆ ಜ್ಯುವೆಲರಿ ಲೋಕ ಸಜ್ಜು
Akshaya Tritiya: ಅಕ್ಷಯ ತೃತೀಯಾಗೆ ಈಗಾಗಲೇ ಜ್ಯುವೆಲರಿ ಲೋಕ ಸಜ್ಜಾಗಿದೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಆಭರಣ ಪೂರೈಸಲು ರೆಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ವೈವಿಧ್ಯಮಯ ಆಭರಣಗಳು ಜ್ಯುವೆಲರಿಗೆ ಎಂಟ್ರಿ ನೀಡಿವೆ. ಈ ಬಗ್ಗೆ ಇಲ್ಲಿದೆ ವಿವರ.
ಜ್ಯುವೆಲರಿ ಶಾಪ್‌ಗಳಲ್ಲಿ ಹಬ್ಬದ ಕಳೆ
ಅಕ್ಷಯ ತೃತೀಯಾಗೆ ಜ್ಯುವೆಲರಿ ಲೋಕ ಸಜ್ಜಾಗಿದೆ. ಹೌದು, ಇದಕ್ಕೆ ಪೂರಕ ಎಂಬಂತೆ, ರಾಜ್ಯದೆಲ್ಲೆಡೆಯ ಜ್ಯುವೆಲರಿ ಶಾಪ್‌ಗಳು ಜಗಮಗಿಸುತ್ತಿವೆ.
ಅಕ್ಷಯ ತೃತೀಯಾ ಪ್ರಯುಕ್ತ ಆರ್ಡರ್‌ಗಳ ಸುರಿಮಳೆ
ಕಳೆದ ಕೆಲವು ವರ್ಷಗಳಿಂದ ಅಕ್ಷಯ ತೃತೀಯ ದಿನದಂದು ಕೈ ಸೇರುವಂತೆ ಮಾಡುವ ಸ್ಕೀಮ್‌ಗಳು ಹೆಚ್ಚಾಗಿವೆ. ಮೊದಲೇ ಆಭರಣಗಳನ್ನು ಆರ್ಡರ್ ಕೊಟ್ಟು ಆ ದಿನದಂದು ತೆಗೆದುಕೊಳ್ಳುವ ಕಾನ್ಸೆಪ್ಟ್ ಹೆಚ್ಚಾಗಿದೆ. ಈ ಹಿಂದಿನ ವರ್ಷಗಳಿಗೆ ಹೊಲಿಸಿದಲ್ಲಿ, ಈ ಬಾರಿ ಆರ್ಡರ್ ಕೊಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಪೂರ್ತಿ ಜ್ಯುವೆಲರಿ ಶಾಪ್‌ವೊಂದರ ಮಾಲೀಕರು.
ಹೊಸ ಡಿಸೈನ್‌ನ ನ್ಯೂ ಅರೈವಲ್ಸ್‌ಗೆ ಬೇಡಿಕೆ
ಈ ಸೀಸನ್‌ನಲ್ಲಿ ಅದರಲ್ಲೂ ಜೆನ್ ಜಿ ಯುವತಿಯರು ನ್ಯೂ ಅರೈವಲ್ಸ್ ಕೆಗಟರಿಯ ಆಭರಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇನ್ನು, ಇದಕ್ಕೆ ವಿವಾಹಿತ ಮಹಿಳೆಯರು ಕೂಡ ಹೊರತಾಗಿಲ್ಲ! ತಾವು ಧರಿಸುವ ಆಭರಣ ಹೊಸತಾಗಿರಬೇಕು ಎಂಬ ಮನೋಭಾವನೆ ಮಹಿಳೆಯರಲ್ಲಿ ಹೆಚ್ಚಾಗಿದೆ. ಅಷ್ಟ್ಯಾಕೆ! ಟಿನೇಜ್ ಹುಡುಗಿಯರಿಂದಿಡಿದು ವರ್ಕಿಂಗ್ ವುಮೆನ್ ಕೆಟಗರಿಯವರೂ ಕೂಡ ಕಂಟೆಂಪರರಿ ವಿನ್ಯಾಸಗಳಿಗೆ ಮನಸೋಲುತ್ತಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಕ್ಷ್.
ಆಭರಣದ ಶಾಪ್‌ಗಳಲ್ಲಿ ಹೆಚ್ಚಾದ ಆಫರ್ಸ್
ಬಹುತೇಕ ಜ್ಯುವೆಲರಿ ಶಾಪ್‌ಗಳಲ್ಲಿ ಈಗಾಗಲೇ, ಇಂತಿಷ್ಟು ಬಂಗಾರದ ಆಭರಣ ಕೊಂಡಲ್ಲಿ ಬೆಳ್ಳಿ ಕಾಯಿನ್ ಉಚಿತ, ವಜ್ರದ ಆಭರಣ ಕೊಂಡರೇ ಚಿನ್ನದ ನಾಣ್ಯ, ಇಲ್ಲವೇ, ಪೆಂಡೆಂಟ್ ಉಚಿತ, ಹಳೆ ಚಿನ್ನಕ್ಕೆ ಹೊಸ ಚಿನ್ನ, ಮೇಕಿಂಗ್ ಚಾರ್ಜ್‌ನಲ್ಲಿ ಕಡಿತ ಹೀಗೆ ನಾನಾ ಬಗೆಯ ಆಫರ್‌ಗಳನ್ನು ನೀಡುತ್ತಿರುವುದು ಹೆಚ್ಚಾಗಿ ಕಂಡು ಬಂದಿದೆ. ಆದರೆ, ಮೊದಲೇ ಈ ಕುರಿತ ನಾನಾ ಕಂಡಿಷನ್‌ಗಳನ್ನು ಅರಿತು ಆಭರಣಗಳನ್ನು ಖರೀದಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.
ನಯಾ ವಿನ್ಯಾಸದ ಡಿಸೈನ್ಸ್
ಭಾರಿ ಡಿಸೈನ್‌ನ ಆಂಟಿಕ್, ಟೆಂಪಲ್ ಡಿಸೈನ್‌ಗಳ ಜತೆಗೆ ಸಿಂಪಲ್ ಇಟಾಲಿಯನ್ ಹಾಗೂ ಕೊರಿಯನ್ ಶೈಲಿಯವು ಹಾಗೂ ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ನ ಮಿಕ್ಸ್ ಮ್ಯಾಚ್ ಜ್ಯುವೆಲರಿಗಳು, ಫ್ಯಾಷನ್ ಜ್ಯುವೆಲರಿಗಳು, ಊಹೆಗೂ ಮೀರಿದ ಡಿಸೈನ್‌ನಲ್ಲಿ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಜ್ಯುವೆಲರಿ ಸಲಹೆಗಾರರು.