ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beauty Trend 2025: ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!

Beauty Trend 2025: ಹುಬ್ಬಿನ ಸೌಂದರ್ಯ ಹೆಚ್ಚಿಸಲು ಐಬ್ರೋ ಟ್ಯಾಟೂ ಪೆನ್‌ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ‌ಅಂದಹಾಗೆ, ನೋಡಲು ಸಾಮಾನ್ಯ ಜೆಲ್ ಪೆನ್‌ನಂತೆಯೇ ಬರೆಯಬಹುದಾದ ಐಬ್ರೋ ಟ್ಯಾಟೂ ಸ್ಕೆಚ್ ಪೆನ್‌ಗಳಿವು. ಈ ಕುರಿತು ಇಲ್ಲಿದೆ ಮಾಹಿತಿ.

ಚಿತ್ರಕೃಪೆ: ಪಿಕ್ಸೆಲ್
1/5

ಇನ್‌ಸ್ಟಂಟ್ ಆಗಿ ಹುಬ್ಬಿನ ಸೌಂದರ್ಯ ಹೆಚ್ಚಿಸುವ ಐಬ್ರೋ ಟ್ಯಾಟೂ ಪೆನ್‌ಗಳು ಇದೀಗ ಬ್ಯೂಟಿ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ನನ್ನ ಐಬ್ರೋ ದಟ್ಟವಾಗಿಲ್ಲ! ನೋಡಲು ತೆಳುವಾಗಿದೆ. ಪೆನ್ಸಿಲ್‌ನಲ್ಲಿ ತೀಡಿದರೇ ಚೆನ್ನಾಗಿ ಕಾಣಿಸುವುದಿಲ್ಲ! ಎಂದು ಹೇಳುವವರಿಗೆ ಪರ್ಯಾಯ ಮಾರ್ಗವಾಗಿ ಈ ಐಬ್ರೋ ಟ್ಯಾಟೂ ಪೆನ್‌ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಮಾನಿನಿಯರ ಐ ಮೇಕಪ್‌ಗೆ ಸಾಥ್ ನೀಡುತ್ತಿವೆ.

ಏನಿದು ಐಬ್ರೋ ಟ್ಯಾಟೂ ಪೆನ್?

ಅಂದಹಾಗೆ, ನೋಡಲು ಸಾಮಾನ್ಯ ಜೆಲ್ ಪೆನ್‌ನಂತೆಯೇ ಬರೆಯಬಹುದಾದ ಐಬ್ರೋ ಟ್ಯಾಟೂ ಸ್ಕೆಚ್ ಪೆನ್‌ಗಳಿವು.

2/5

ಬಳಕೆ ಹೇಗೆ?

ಐಬ್ರೋಗೆ ಇದನ್ನು ಹಚ್ಚುವುದು ಕೂಡ ಸುಲಭ. ಪೆನ್ಸಿಲ್‌ನಂತೆ ತಿದ್ದಿ ತೀಡುವ ಅಗತ್ಯವಿಲ್ಲ!, ಮೈಕ್ರೋ ಬ್ಲೇಡ್ ಮಾದರಿಯ ಸ್ಕೆಚ್ ಇಂಕ್ ರಿಲೀಸ್ ಮಾಡುವ ಇವು ಮೈಕ್ರೋ ಬ್ರಶ್‌ನಂತೆ ಕಾರ್ಯ ನಿರ್ವಹಿಸುತ್ತವೆ. ಇವು ಹೊರಸೂಸುವ ಇಂಕ್ ಹುಬ್ಬಿನ ಮೇಲೆ ಬರೆದಾಗ ನೈಜ ಕೂದಲಿನಂತೆಯೇ ಕಾಣುತ್ತವೆ. ಅವರವರ ಹುಬ್ಬಿನ ಆಕಾರಕ್ಕೆ ತಕ್ಕಂತೆ ಬರೆಯುವ ಕಲೆ ಇದ್ದರಾಯಿತು. ತಾವೇ ಖುದ್ದಾಗಿ ಐಬ್ರೋ ಪೆನ್‌ನಿಂದ ತಾತ್ಕಲಿಕವಾದ ಶೇಡ್ ಬರೆದಲ್ಲಿ ಟ್ಯಾಟೂವಿನಂತೆ ಅಂಟಿಕೊಳ್ಳುತ್ತದೆ, ನೋಡಲು ನೈಜ ಹುಬ್ಬನ್ನು ತೀಡಿದಂತೆ ಕಾಣುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞರು.

3/5

ಟೆಂಪರರಿ ಐಬ್ರೋ ಶೇಪ್

ನಾನಾ ಬ್ರ್ಯಾಂಡ್‌ಗಳಲ್ಲಿ ಲಭ್ಯವಿರುವ ಈ ಐಬ್ರೋ ಟ್ಯಾಟೂ ಪೆನ್‌ಗಳ ಬೆಲೆ ದುಬಾರಿ. ಒಮ್ಮೆ ಹಚ್ಚಿದಲ್ಲಿ ಕನಿಷ್ಠವೆಂದರೂ ಎರಡ್ಮೂರು ದಿನ ಅಳಿಸಿ ಹೋಗುವುದಿಲ್ಲ. ನಂತರ ಪೀಲ್ ಆಗುತ್ತದೆ. ಒಂದೊಂದು ಬಗೆಯ ಐಬ್ರೋ ಪೆನ್‌ಗಳು ಒಂದೊಂದು ಬಗೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

4/5

ಖರೀದಿಸುವ ಮುನ್ನ ಟ್ರಯಲ್ ಅಗತ್ಯ

ಐಬ್ರೋ ಪೆನ್ಸಿಲ್ ಖರೀದಿಸುವ ಮುನ್ನ ಯಾವುದೇ ಕಾಸ್ಮೆಟಿಕ್ ಸೆಂಟರ್‌ನಲ್ಲಿ ನೀಡುವ ಟ್ರಯಲ್ ಅಥವಾ ಡೆಮೋ ನೋಡಿ. ನಿಮಗೆ ಮ್ಯಾಚ್ ಆಗುವ ಬ್ಲಾಕ್ ಇಲ್ಲವೇ ಬ್ರೌನ್ ಶೇಡ್‌ನವನ್ನು ಕೊಳ್ಳಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

5/5

ಐಬ್ರೋ ಟ್ಯಾಟೂ ಪೆನ್ ಟಿಪ್ಸ್

  • ಕಳಪೆ ಐಬ್ರೋ ಟ್ಯಾಟೂ ಪೆನ್ ಕೂದಲನ್ನು ಉದುರುವಂತೆ ಮಾಡಬಹುದು. ಹೀಗಾಗಿ ಗುಣಮಟ್ಟದ್ದು ಬಳಸಿ.
  • ಹುಬ್ಬಿನ ಚರ್ಮ ಸೂಕ್ಷ್ಮವಾಗಿದ್ದಲ್ಲಿ ಬಳಕೆ ಅವಾಯ್ಡ್ ಮಾಡಿ. ಪೀಲ್ ಆಗುವಾಗ ಸ್ಕಿನ್ ಕಿತ್ತು ಬರಬಹುದು.

ಶೀಲಾ ಸಿ ಶೆಟ್ಟಿ

View all posts by this author