| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಿಲ್ಲಿಯ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ (Bigboss Fashion 2026) ಔಟ್‌ಫಿಟ್ಟನ್ನು ಸೆಲೆಬ್ರೆಟಿ ಡಿಸೈನರ್ ಚಂದನ್ ಗೌಡ ವಿನ್ಯಾಸಗೊಳಿಸಿದ್ದಾರೆ. ಹೌದು, ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳಿಗೆ ಹಾಗೂ ಬಿಗ್‌ಬಾಸ್ ಕಂಟೆಸ್ಟಂಟ್‌ಗಳಿಗೆ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಿರುವ ಸೆಲೆಬ್ರೆಟಿ ಡಿಸೈನರ್ ಹಾಗೂ ಸ್ಟೈಲಿಸ್ಟ್ ಚಂದನ್ ಗೌಡ, ಗಿಲ್ಲಿ ನಟನಿಗೂ (Gilli Nata) ಕೂಡ ಎಕ್ಸ್‌ಕ್ಲೂಸಿವ್ ಡಿಸೈನರ್‌ವೇರ್ ಸಿದ್ಧಪಡಿಸಿದ್ದು, ಈಗಾಗಲೇ ಇವರ ಈ ಡಿಸೈನರ್‌ವೇರ್ ಝಲಕ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗೆಂದು ಇದ್ಯಾವ ಬಗೆಯ ಔಟ್‌ಫಿಟ್? ಎಂಬುದನ್ನು ಮಾತ್ರ ಚಂದನ್ ತಿಳಿಸಿಲ್ಲ! ಬದಲಿಗೆ ಸದ್ಯದಲ್ಲೆ ಬಿಗ್‌ಬಾಸ್ ವೇದಿಕೆ ಮೇಲೆ ಅನಾವರಣಗೊಳ್ಳಲಿದೆ ಎಂಬುದಷ್ಟನ್ನೇ ವಿಡಿಯೋದಲ್ಲಿ ತಿಳಿಸಿದ್ದಾರೆ. ಔಟ್‌ಫಿಟ್‌ನ ಕಂಪ್ಲೀಟ್ ಫೋಟೋ, ವಿಡಿಯೋ ಮರೆಮಾಚಿದ್ದಾರೆ.
ಡಿಸೈನ್ ಬಗ್ಗೆ ಸುಳಿವು ಕೊಡದ ಚಂದನ್ ಗೌಡ
ಕಲರ್ ವಾಹಿನಿಯ ಸೂಚನೆಯಂತೆ ನಾವೀಗ ಈ ಔಟ್‌ಫಿಟ್‌ನ ಬಗ್ಗೆ ಹೇಳುವಂತಿಲ್ಲ! ಎಂದು ವಿಶ್ವವಾಣಿ ನ್ಯೂಸ್ ಪ್ರಶ್ನೆಗೆ ಉತ್ತರಿಸಿರುವ ಚಂದನ್ ಗೌಡ, ಇನ್ನೇನೂ ಸದ್ಯದಲ್ಲೆ ಈ ಅತ್ಯಾಕರ್ಷಕ ಔಟ್‌ಫಿಟ್ ಅನಾವರಣಗೊಳ್ಳಲಿದೆ. ಫ್ಯಾಷನ್ ಪ್ರಿಯರ ಮೆಚ್ಚುಗೆ ಪಡೆಯಲಿದೆ ಎಂಬುದರ ಮುನ್ಸೂಚನೆಯನ್ನಷ್ಟೆ ನೀಡಿದರು.
ವೈರಲ್ ಆದ ಗಿಲ್ಲಿ ಔಟ್‌ಫಿಟ್ ವಿಡಿಯೋ
ಗಿಲ್ಲಿಯ ಕ್ರೇಝ್ ಹೆಚ್ಚಾದಂತೆ ಅವರ ಒಂದೊಂದು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಚಂದನ್ ಗೌಡ ಅವರು ಅಪ್‌ಲೋಡ್ ಮಾಡಿರುವ ಔಟ್‌ಫಿಟ್ ಕುರಿತಾದ ವಿಡಿಯೋ ಕೂಡ ವೈರಲ್ ಆಗಿದೆ.
ಗೆಸ್ ಮಾಡಿರುವ ಗಿಲ್ಲಿ ಅಭಿಮಾನಿಗಳು
ಅಂದ ಹಾಗೆ, ಗಿಲ್ಲಿ ಅಭಿಮಾನಿಗಳು ಮಾತ್ರವಲ್ಲ, ಫ್ಯಾಷನ್ ವಿಶ್ಲೇಷಕರು ಕೂಡ ಗಿಲ್ಲಿಯ ಈ ಔಟ್‌ಫಿಟ್ ಯಾವುದೆಂಬುದನ್ನು ಈಗಾಗಲೇ ಗೆಸ್ ಮಾಡಿದ್ದಾರೆ. ವೈಟ್ ಶರ್ಟ್ ಮೇಲೆ ಬೋ ಇರುವಂತಹ ಗೋಲ್ಡನ್ ಹ್ಯಾಂಡ್ ಎಂಬ್ರಾಯ್ಡರಿಯ ಬ್ಲ್ಯಾಕ್ ಸೂಟ್ ಅಥವಾ ಬ್ಲೇಜರ್ ಇದಾಗಿದೆ. ಇದರಲ್ಲಿ ಗಿಲ್ಲಿ ಸ್ಟಾರ್‌ನಂತೆ ಕಾಣಿಸುವುದು ಗ್ಯಾರಂಟಿ! ಎಂದಿದ್ದಾರೆ.