Blouse Fashion 2025: ಮಾನಿನಿಯರ ಮನ ಗೆದ್ದ ಮಧುಬಾಲ ಸೀರೆ ಬ್ಲೌಸ್
Blouse Fashion 2025: ಮಧುಬಾಲ ಡಿಸೈನ್ನ ಸೀರೆ ಬ್ಲೌಸ್ ಇದೀಗ ಮಾನಿನಿಯರನ್ನು ಸವಾರಿ ಮಾಡತೊಡಗಿದೆ. ಟ್ರೆಂಡಿಯಾಗಿದೆ. ಅಲ್ಲದೇ, ಎಲ್ಲಾ ವರ್ಗದ ಮಹಿಳೆಯರನ್ನು ಆವರಿಸಿಕೊಂಡಿದೆ. ಇದ್ಯಾವ ಬಗೆಯ ಬ್ಲೌಸ್ ? ಆಯ್ಕೆ ಹೇಗೆ ? ಈ ಕುರಿತಂತೆ ಸ್ಟೈಲಿಸ್ಟ್ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಚಿತ್ರಕೃಪೆ : ಪಿಕ್ಸೆಲ್ -


ಮಧುಬಾಲ ಡಿಸೈನ್ನ ಸೀರೆ ಬ್ಲೌಸ್ ಸದ್ಯ ಟ್ರೆಂಡಿಯಾಗಿದೆ. ಹೌದು, ಮಧುಬಾಲ ಡಿಸೈನ್ನ ಸೀರೆ ಬ್ಲೌಸ್ ಇತ್ತೀಚೆಗೆ ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ, ಎಲ್ಲಾ ವಯಸ್ಸಿನ ಮಾನಿನಿಯರನ್ನು ಸವಾರಿ ಮಾಡತೊಡಗಿದೆ. ಹುಡುಗಿಯರು ಮಧ್ಯ ವಯಸ್ಕ ಮಹಿಳೆಯರೆನ್ನದೇ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.

ಮಧುಬಾಲ ಬ್ಲೌಸ್ ವಿಶೇಷತೆ ?
ಬಾಲಿವುಡ್ನ ಹಳೆಯ ನಟಿ ಮಧುಬಾಲ ಅವರ ಹೆಸರು ಈ ಬ್ಲೌಸ್ ಡಿಸೈನ್ಗಿದೆ. ಅಂದಿನ ಕಾಲದಲ್ಲೇ ಈ ಡಿಸೈನ್ನ ಅನಾರ್ಕಲಿ ಸೆಲ್ವಾರ್ ಹಾಗೂ ಬ್ಲೌಸ್ಗಳನ್ನು ಮಧುಬಾಲ ಹೆಸರಿನ ನಟಿ ಧರಿಸಿದ್ದರಿಂದ ಈ ವಿನ್ಯಾಸಕ್ಕೆ ಈ ಹೆಸರು ಬಂದಿದೆ. ಈ ಬ್ಲೌಸ್ ವಿನ್ಯಾಸದಲ್ಲಿ ಹೆಚ್ಚಾಗಿ ಬೋಟ್ ನೆಕ್ ಡೀಪ್ ನೆಕ್ಲೈನ್ಗಳನ್ನು ಕಾಣಬಹುದು. ಬ್ಲೌಸ್ನ ಮುಂಭಾಗ ಕೂಡ ಕಟೋರಿ ಕಟ್ ಹೊಂದಿರುತ್ತದೆ. ಇಲ್ಲವೇ ಪ್ರಿನ್ಸ್ ಕಟ್ ವಿನ್ಯಾಸ ಹೊಂದಿರುತ್ತದೆ. ಹಾಗಾಗಿ ಇದು ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ.

ಮಧುಬಾಲ ಬ್ಲೌಸ್ಗೆ ಸೇರಿಕೊಂಡ ಟೈಯಿಂಗ್ ಅಪ್ಷನ್
ಇನ್ನು, ಎಲ್ಲಾ ಬ್ಲೌಸ್ಗಳಿಗೂ ಬ್ಲೌಸ್ನ ಹಿಂಭಾಗ ಟೈಯಿಂಗ್ ಅಪ್ಷನ್ ಇರುತ್ತದೆ. ಈ ಬ್ಲೌಸ್ನಲ್ಲಿ ಟೈಯಿಂಗ್ ಹಿಂಭಾಗದಲ್ಲಿದ್ದರೂ ಮುಂಭಾಗದಿಂದಲೇ ದಾರವನ್ನು ಹಿಂದಕ್ಕೆ ತಂದು ಕಟ್ಟುವ ರೀತಿಯಲ್ಲಿ ಡಿಸೈನ್ ಮಾಡಲಾಗಿರುತ್ತದೆ. ಹಾಗಾಗಿ ಈ ಬ್ಲೌಸ್ ಸೀರೆಯೊಂದಿಗೆ ಧರಿಸಿದಾಗ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಬ್ಲೌಸ್ ಸ್ಪೆಷಲಿಸ್ಟ್ಗಳು.

ಡಬ್ಬಲ್ ಕಲರ್ ಮಧುಬಾಲ ಬ್ಲೌಸ್
ಇಂದಿನ ಜನರೇಷನ್ ಹುಡುಗಿಯರು ಈ ಮಧುಬಾಲ ಬ್ಲೌಸ್ ಡಿಸೈನ್ ಅನ್ನು ಮಿಕ್ಸ್ ಮ್ಯಾಚ್ ಮಾಡುವಂತೆ ಡಬ್ಬಲ್ ಕಲರ್ನಲ್ಲಿ ಹೊಲೆಸುತ್ತಿದ್ದಾರೆ. ಅಲ್ಲದೇ ಸೆರಗನ್ನು ಕೊಂಚ ಇಳಿಸಿ ಪ್ಲೀಟ್ ಮಾಡುವುದರಿಂದ ಈ ಬ್ಲೌಸ್ನ ವಿನ್ಯಾಸವು ಅನಾವರಣಗೊಳ್ಳುತ್ತಿದೆ. ಇದು ಈ ಜನರೇಷನ್ ಹುಡುಗಿಯರ ಆಯ್ಕೆಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಮಧುಬಾಲ ಬ್ಲೌಸ್ ಪ್ರಿಯರಿಗೆ 3 ಟಿಪ್ಸ್
- ನಿಮ್ಮ ಪರ್ಸನಾಲಿಟಿಗೆ ಹೊಂದುತ್ತದೆಯೇ ಎಂಬುದನ್ನು ತಿಳಿದು ಹೊಲೆಸಿ. ಯಾವುದೇ ರೆಡಿಮೇಡ್ ಮಧುಬಾಲ ಬ್ಲೌಸನ್ನು ಒಮ್ಮೆ ಟ್ರಯಲ್ ಮಾಡಿ ನೋಡಿ ಚೆಕ್ ಮಾಡಿಕೊಳ್ಳಿ.
- ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಆಯ್ಕೆ ಮಾಡಿ.
- ಸೀರೆಗೆ ಹೊಂದುವಂತಹ ಡಿಸೈನ್ ಚೂಸ್ ಮಾಡಿ.