Star Fashion 2025: ಸೋನಂ ಕಪೂರ್ ಬೆಳ್ಳಿ ಸ್ಲಿಂಗ್ ಬ್ಯಾಗ್ ನೋಡಿದಿರಾ!
Star Fashion 2025: ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ತಗುಲಿ ಹಾಕಿಕೊಂಡಿರುವ ಬೆಳ್ಳಿ ಆನೆಯ ಸ್ಲಿಂಗ್ ಬ್ಯಾಗ್ ಫ್ಯಾಷನ್ ಪ್ರಿಯರ ಹುಬ್ಬೇರಿಸಿದೆ. ಸದ್ಯ ಹೈ ಫ್ಯಾಷನ್ ಲೋಕದಲ್ಲಿ ನಯಾ ಟ್ರೆಂಡ್ ಹುಟ್ಟು ಹಾಕುವ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಫ್ಯಾಷನಿಸ್ಟಾಗಳು ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸೋನಂ ಕಪೂರ್, ಬಾಲಿವುಡ್ ನಟಿ., ಚಿತ್ರ ಕೃಪೆ: ಅವಿರಾಜ್ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಸೋನಂ ಕಪೂರ್ ನೇತುಹಾಕಿಕೊಂಡಿರುವ ಬೆಳ್ಳಿ ಆನೆಯ ಸ್ಲಿಂಗ್ ಬ್ಯಾಗ್ ಸದ್ಯ ಫ್ಯಾಷನ್ ಪ್ರಿಯರ ಹುಬ್ಬೇರಿಸಿದೆ. ಹೌದು, ತಮ್ಮ ಸಹೋದರಿ ರಿಯಾ ಕಪೂರ್ ಹಾಗೂ ಸನ್ಯಾ ಕಪೂರ್ ಜಂಟಿ ಸ್ಟೈಲಿಂಗ್‌ನಲ್ಲಿ ಫ್ಯಾಷನ್ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಸೋನಂ ಕಪೂರ್, ಔಟ್‌ಫಿಟ್ ಜತೆಜತೆಗೆ ಹೆಗಲಿಗೆ ನೇತು ಹಾಕಿಕೊಂಡಿರುವ ಅತ್ಯಾಕರ್ಷಕ ಕಲಾತ್ಮಕ ವಿನ್ಯಾಸದಲ್ಲಿ ಮೂಡಿರುವ, ಬೆಳ್ಳಿಯ ಮಿನಿ ಆನೆಯ ಸ್ಲಿಂಗ್ ಬ್ಯಾಗ್ ಇದೀಗ ಇಂಡೋ-ವೆಸ್ಟರ್ನ್ ಸ್ಟೈಲಿಂಗ್ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಈ ಬೆಳ್ಳಿಯ ಸ್ಲಿಂಗ್ ಬ್ಯಾಗ್ ಆಕ್ಸೆಸರೀಸ್, ಸದ್ಯ ನಯಾ ಟ್ರೆಂಡ್ ಹುಟ್ಟು ಹಾಕುವ ಮುನ್ಸೂಚನೆ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಫ್ಯಾಷನ್ ಲೋಕಕ್ಕೆ ಮರಳಿದ ಸೋನಂ
ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ, ಸೋನಂ ಕಪೂರ್ ಮೊದಲಿನಿಂದಲೂ ಫ್ಯಾಷೆನಬಲ್ ನಟಿ. ಸಿನಿಮಾ ಮಾತ್ರವಲ್ಲ, ಸಾಕಷ್ಟು ಫ್ಯಾಷನ್ ವೀಕ್ ಹಾಗೂ ಫ್ಯಾಷನ್ ಬ್ರಾಂಡ್‌ಗಳಿಗೂ ಬ್ರಾಂಡ್ ಅಂಬಾಸಡರ್ ಆದಾಕೆ. ಮದುವೆ, ಮಗುವಿನ ನಂತರ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಫ್ಯಾಷನ್ ಶೂಟ್ ಹಾಗೂ ಫ್ಯಾಷನ್ ಶೋಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಆಕೆಯ ಸಹೋದರಿ ರಿಯಾ ಕಪೂರ್ ಸೆಲೆಬ್ರೆಟಿ ಸ್ಟೈಲಿಶ್. ತನ್ನ ಸಹೋದರಿಯ ಸ್ಟೈಲಿಂಗ್‌ನಲ್ಲಿ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ತಾಯಿಯ ಜ್ಯುವೆಲರಿ ಧರಿಸಿದ ಸೋನಂ
ಡಿಸೈನರ್ ಸಿದ್ಧಾರ್ಥ್ ಬನ್ಸಾಲ್ ಅವರ ಚಾಕೋಲೇಟ್ ಕಲರ್‌ನ ಬ್ಲೇಜರ್ ಅಥವಾ ಜಾಕೆಟ್ ಸ್ಕರ್ಟ್ ಕೋ ಆರ್ಡ್ ಸೂಟ್‌ನಲ್ಲಿ ಸೋನಂ ಕಪೂರ್ ಅವರು ಕಾಣಿಸಿಕೊಂಡಿದ್ದು, ಈ ಔಟ್‌ಫಿಟ್‌ಗೆ ತನ್ನ ತಾಯಿ ಸುನೀತಾ ಅವರ ಜ್ಯುವೆಲರಿಗಳನ್ನು ಮ್ಯಾಚ್ ಮಾಡಿದ್ದಾರೆ. ಇನ್ನು ರಿಯಾ ಅವರೊಂದಿಗೆ ಸನ್ಯಾ ಕಪೂರ್ ಕೂಡ ಸ್ಟೈಲಿಂಗ್ ಮಾಡಿದ್ದಾರೆ.

ಎಲ್ಲರನ್ನೂ ಸೆಳೆದ ಬೆಳ್ಳಿಯ ಮಿನಿ ಆನೆಯ ಸ್ಲಿಂಗ್ ಬ್ಯಾಗ್
ಈ ಕಂಪ್ಲೀಟ್ ಸ್ಟೈಲಿಂಗನ್ನು ಹೈಲೈಟ್ ಮಾಡಿರುವುದು ಅಭಿಲಾಷ ಜ್ಯುವೆಲರಿ ಕಲೆಕ್ಷನ್‌ನ ಬೆಳ್ಳಿ ಆನೆಯ ಸ್ಲಿಂಗ್ ಬ್ಯಾಗ್ ಎಂದು ಹೇಳಲೇಬೇಕು. ಕಲಾತ್ಮಕ ವಿನ್ಯಾಸ ಹೊಂದಿರುವ ಕ್ಲಚ್ ರೀತಿಯ ಈ ಮಿನಿ ಬೆಳ್ಳಿ ಆನೆಯ ಸ್ಲಿಂಗ್ ಬ್ಯಾಗ್ ಬೆಳ್ಳಿಯ ಕುಚ್ಚು, ಗುಂಡಿನ ಜತೆಗೆ ದಪ್ಪನೆಯ ಕಪ್ಪು ದಾರದಲ್ಲಿ ನೇತುಹಾಕಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ. ಇದು ಸೋನಂ ಅವರ ಇಡೀ ಲುಕ್ಕನ್ನು ಡಿಫರೆಂಟ್ ಆಗಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Dasara Holiday Fashion 2025: ದಸರಾ ರಜೆಯ ಮೋಜಿಗೂ ಬಂತು ಹಾಲಿಡೇ ಫ್ಯಾಷನ್ ವೇರ್ಸ್