Celebrity Fashion 2025: ಫಾಲೋವರ್‌ಗಳ ಮೆಚ್ಚುಗೆ ಗಳಿಸಿದ ಗೌರಿ ಶ್ರುತಿ ಟ್ರೆಡಿಷನಲ್ ಲುಕ್
Gowri Shruthi: ಹಿರಿಯ ನಟಿ ಶ್ರುತಿ ಅವರ ಮಗಳಾದ ಗೌರಿಯವರ ಫೆಸ್ಟೀವ್ ಸೀಸನ್‌ನ ಟ್ರೆಡಿಷನಲ್ ಲುಕ್ ಸೆಲೆಬ್ರೆಟಿಗಳ ಪ್ರಶಂಸೆ ಮಾತ್ರವಲ್ಲ, ಸಾಕಷ್ಟು ಫಾಲೋವರ್‌ಗಳ ಮೆಚ್ಚುಗೆಯನ್ನು ಕೂಡ ಗಳಿಸಿದೆ. ಅವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರ ರಿವ್ಯೂ ಏನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಗೌರಿ ಶ್ರುತಿ., ಪೋಟೋಗ್ರಾಫಿ: ಎಜೆ ಶೆಟ್ಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ ಶ್ರುತಿ (Gowri Shruthi) ಅವರ ಫೆಸ್ಟೀವ್ ಸೀಸನ್‌ನ ಟ್ರೆಡಿಷನಲ್ ಲುಕ್‌ಗೆ ಸೆಲೆಬ್ರೆಟಿಗಳು ಮಾತ್ರವಲ್ಲ, ಸಾಕಷ್ಟು ಫಾಲೋವರ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಹೌದು, ವಿಜಯದಶಮಿಯಂದು ಗೌರಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರೆಡಿಷನಲ್ ಲುಕ್ (Celebrity Fashion 2025) ಪ್ರೊಫೆಷನಲ್ ಸೂಪರ್ ಮಾಡೆಲ್ ಲುಕ್‌ನಂತಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.

ಗೌರಿಯ ಟ್ರೆಡಿಷನಲ್ ಫ್ಯಾಷನ್
ಅಂದಹಾಗೆ, ಹಿರಿಯ ನಟಿ ಶ್ರುತಿಯವರ ಮುದ್ದಿನ ಮಗಳೇ ಗೌರಿ. ಇತ್ತೀಚೆಗಷ್ಟೇ ಅಮ್ಮನ 50ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿ, ಎಲ್ಲರಿಂದಲೂ ಹೊಗಳಿಸಿಕೊಂಡಿದ್ದ ಗೌರಿ, ಅಂದು ಕೂಡ ಶಿಮ್ಮರ್ ದಾವಣಿ-ಲಂಗ ಧರಿಸಿ ಎಲ್ಲರನ್ನು ಆಕರ್ಷಿಸಿದ್ದರು. ಅಷ್ಟೇಕೆ! ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕೆಲವರಂತು ನಾಯಕಿಯಾಗಲು ಗೌರಿಗೆ ಇದು ಸಕಾಲ ಎಂದೆಲ್ಲಾ ಹಾಡಿ ಹೊಗಳಿದ್ದರು.

ತಾಯಿ ಶ್ರುತಿಯವರ ಸ್ಟೈಲಿಂಗ್
ಇನ್ನು, ಹಬ್ಬದಂದು ಹಾಕಿದ್ದ ಪೋಸ್ಟ್‌ಗೆ ಗೌರಿ, ತಮ್ಮ ಈ ಸ್ಟೈಲಿಂಗ್ ಅಮ್ಮನದ್ದು ಎಂದು ಪ್ರೀತಿಯಿಂದ ಮೆನ್ಷನ್ ಕೂಡ ಮಾಡಿದ್ದಾರೆ. ಎಜೆ ಶೆಟ್ಟಿಯವರ ಫೋಟೋಗ್ರಾಫಿ ಕ್ರೆಡಿಟ್ ಕೂಡ ಹಾಕಿದ್ದಾರೆ. ಒಟ್ಟಾರೆ, ಗೌರಿಯವರ ಈ ಲುಕ್‌ಗೆ ಶ್ರುತಿ ಅವರು ಸ್ಟೈಲಿಂಗ್ ಮಾಡಿರುವುದು ಅವರ ಲುಕ್ಕನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ಮಿಂಚು.

ಗೌರಿಯ ಟ್ರೆಡಿಷನಲ್ ಲುಕ್
ಅಂದಹಾಗೆ, ಗೌರಿ ಧರಿಸಿರುವ ಶ್ವೇತ ವರ್ಣದ ಸೀರೆ ಹಾಗೂ ಅದಕ್ಕೆ ಮ್ಯಾಚ್ ಮಾಡಿರುವ ಜ್ಯುವೆಲರಿಗಳು ಕೂಡ ಅತ್ಯಾಕರ್ಷಕವಾಗಿಸಿವೆ. ಅದರಲ್ಲೂ ಮಲ್ಟಿಪಲ್ ಜುಮ್ಕಾ ಹೊಂದಿರುವ ಕಿವಿಯ ಹ್ಯಾಂಗಿಂಗ್ಸ್ ಹಾಗೂ ನೋಸ್ ರಿಂಗ್ ಚೈನ್ ಗೌರಿಯ ಲುಕ್ಕನ್ನು ಹೆರಿಟೇಜ್ ಲುಕ್ ನೀಡಿದೆ. ಜತೆಗೆ ಫೆಸ್ಟೀವ್ ಸೀಸನ್‌ಗೂ ಪರ್ಫೆಕ್ಟ್ ಆಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಈ ಸುದ್ದಿಯನ್ನೂ ಓದಿ | After Navaratri 2025: ನವರಾತ್ರಿ ನಂತರ ತ್ವಚೆಯನ್ನು ಉಸಿರಾಡಲು ಬಿಡಿ!
ಫ್ಯಾಷನ್ ವಿಮರ್ಶಕರ ಫುಲ್ ಮಾರ್ಕ್ಸ್
ಪ್ರತಿ ಮಹಿಳೆಯಲ್ಲೂ ದೇವಿಯ ಶಕ್ತಿ ಇರುತ್ತದೆ ಎಂಬ ಅರ್ಥವನ್ನು ನೀಡುವ ಅವರ ಕ್ಯಾಪ್ಷನ್ ಗೌರಿಯ ಮಹಿಳಾ ಪರವನ್ನು ಹೈಲೈಟ್ ಮಾಡಿದೆ. ಒಟ್ಟಾರೆ ಅವರ ಲುಕ್‌ಗೆ ಫುಲ್ ಮಾರ್ಕ್ಸ್ ನೀಡಬಹುದು ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ: ಫ್ಯಾಷನ್ ಲೇಖಕಿ)