Bollywood actresses: ಗಣೇಶ ಚತುರ್ಥಿ ಹಬ್ಬಕ್ಕೆ ಸೀರೆಯಲ್ಲಿ ಕಂಗೊಳಿಸಲು ಬಾಲಿವುಡ್ ನಟಿಯರು ಫುಲ್ ರೆಡಿ
Bollywood actresses Look: ಗಣೇಶ ಹಬ್ಬದ ಸಂಭ್ರಮದಲ್ಲಿ ಜನರು ತೊಡಗಿ ಕೊಂಡಿದ್ದಾರೆ. ಅದರಲ್ಲೂ ಪ್ರತಿ ಹಬ್ಬದಲ್ಲೂ ಫ್ಯಾಷನ್ ಪ್ರಿಯರಿಗಂತೂ ಸೀರೆ, ಡ್ರೆಸ್ ಇತ್ಯಾದಿ ಬಗ್ಗೆ ಒಲವು ಹೆಚ್ಚು.. ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ಸೀರೆ ಧರಿಸಲು ಬಯಸುವವರಿಗೆ, ಹಲವು ಸಿನಿಮಾಗಳಲ್ಲಿ ನಟಿಯರು ಧರಿಸಿದ ಸೀರೆ ಲುಕ್‌ಗಳು ಹೊಸ ಫ್ಯಾಷನ್ ಟ್ರೆಂಡ್‌ಗಳನ್ನು ಉಂಟು ಮಾಡುತ್ತವೆ. ಬಾಲಿವುಡ್ ನಟಿಯರು ಸಿನಿಮಾದಲ್ಲಿ ನೌವರಿ ಸೀರೆಯುಟ್ಟು ಮಿಂಚಿದ ಕೆಲವು ಫೋಟೋಗಳು ಇಲ್ಲಿವೆ.
ರಾಣಿ ಮುಖರ್ಜಿ:
ಅಯ್ಯಯ್ಯ ಚಿತ್ರದಲ್ಲಿ ರಾಣಿ ಮುಖರ್ಜ ಮಹಾರಾಷ್ಟ್ರದ ಯುವರಾಣಿ ಪಾತ್ರದಲ್ಲಿ ಮಿಂಚಿದ್ದರು. ಒಂದು ದೃಶ್ಯದಲ್ಲಿ ತಿಳಿ ಗುಲಾಬಿ ಬಣ್ಣದ ಸೀರೆಗೆ ಗೋಲ್ಡ್ ಅಂಚು ಇರುವ ನೌವರಿ ಶೈಲಿಯ ಸೀರೆ ಉಟ್ಟು ಬಹಳ ಆಕರ್ಷಕವಾಗಿ ಕಂಡಿದ್ದಾರೆ. ಇವರ ಲುಕ್ ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದರು.
ಕಾಜೋಲ್
ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ಕಾಜೋಲ್ ಅವರು ಸಾವಿತ್ರಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸೀರೆಯುಟ್ಟು ಕಂಗೊಳಿಸಿದ್ದಾರೆ.. ಐತಿಹಾಸಿಕ ಶೈಲಿಯ ನೌವರಿ ಸೀರೆಯಲ್ಲಿ ನಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇದು ಹಳೆಯ ಕಾಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.
ಪ್ರಿಯಾಂಕಾ ಚೋಪ್ರಾ:
ಬಾಜೀರಾವ್ ಮಸ್ತಾನಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕಾಶಿಬಾಯಿ ಪಾತ್ರದಲ್ಲಿ ನಟಿಸಿದ್ದು ಸೀರೆ ಯುಟ್ಟು ಬಹಳ ಸಂದರವಾಗಿ ಕಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಈ ಸಿನಿಮಾದಲ್ಲಿ ಅನೇಕ ಸುಂದರ ನೌವರಿ ಸೀರೆಗಳನ್ನು ಧರಿಸಿದ್ದರು.
ಕೃತಿ ಸನೋನ್:
ಪಾಣಿಪತ್ ಚಿತ್ರದಲ್ಲಿ ಕೃತಿ ಸನೋನ್ ಅವರು ಪಾರ್ವತಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೃತಿ ಸನೋನ್, ಸುಂದರ ನೌವರಿ ಸೀರೆಗಳಲ್ಲಿ ಕಣ್ಮನ ಸೆಳೆದಿದ್ದರು.
ರಶ್ಮಿಕಾ ಮಂದಣ್ಣ:
ಛಾವಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರಶ್ಮಿಕಾ, ಈ ಚಿತ್ರ ದುದ್ದಕ್ಕೂ ಹಸಿರು, ಮೆರೂನ್ ಮತ್ತು ನೇರಳೆ ಬಣ್ಣದ ಪೈಠಾನಿ ಸೀರೆಗಳಲ್ಲಿ ಮನಮೋಹಕವಾಗಿ ಕಾಣಿಸಿದ್ದಾರೆ.
ವಿದ್ಯಾ ಬಾಲನ್:
ಫೆರಾರಿ ಕಿ ಸವಾರಿ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು 'ಜಾವ್ ದೇ' ಹಾಡಿನಲ್ಲಿ ಕೆಂಪು ಬಣ್ಣದ ಅದ್ಭುತ ನೌವರಿ ಸೀರೆಯನ್ನು ಧರಿಸಿ ನೃತ್ಯ ಮಾಡಿದ್ದು ಸಿನಿ ಪ್ರಿಯರ ಗಮನ ಸೆಳೆದಿದ್ದರು.