ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Braided Hair Necktie Fashion: ಹೆಣೆದ ಜಡೆಯಂತಿರುವ ನೆಕ್‌ಟೈ ಬೆಲೆ ಕೇಳಿದರೆ ಖಂಡಿತಾ ಶಾಕ್‌ ಆಗ್ತೀರಾ!

Braided Hair Necktie Fashion: ಹೈ ಫ್ಯಾಷನ್‌ನಲ್ಲಿ ವಿಯರ್ಡ್‌ ಸ್ಟೈಲಿಂಗ್‌ ಲಿಸ್ಟ್‌ನಲ್ಲಿರುವ ಬ್ರೈಡೆಡ್‌ ಹೇರ್‌ ನೆಕ್‌ಟೈ ಬೆಲೆ ಕೇಳಿದರೆ ಖಂಡಿತಾ ಶಾಕ್‌ ಆಗ್ತೀರಾ! ನೋಡಲು ಹೆಣೆದ ಜಡೆಯ ರಿಪ್ಲೀಕಾದಂತಿರುವ ಇದನ್ನು ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳು ಧರಿಸಿ, ಸುದ್ದಿಯಾಗಿದ್ದಾರೆ. ಹಾಗಾದಲ್ಲಿ ಇದ್ಯಾವ ಬಗೆಯ ಟೈ? ಬೆಲೆ ಎಷ್ಟಿರಬಹುದು? ಸಾಮಾನ್ಯ ಜನರನ್ನು ಯಾಕೆ ತಲುಪಲಿಲ್ಲ? ಈ ಎಲ್ಲದರ ಕುರಿತಂತೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.‌

ಹೆಣೆದ ಜಡೆಯಂತಿರುವ ನೆಕ್‌ಟೈ ಬೆಲೆ ಕೇಳಿದರೆ ಖಂಡಿತಾ ಶಾಕ್‌ ಆಗ್ತೀರಾ!

ಚಿತ್ರಗಳು: ಬ್ರೈಡೆಡ್‌ ಹೇರ್‌ ನೆಕ್‌ಟೈ ಧರಿಸಿರುವ ಸೆಲೆಬ್ರೆಟಿಗಳು, ಕಳೆದ ವರ್ಷ ಬ್ರೈಡೆಡ್‌ ಹೇರ್‌ ನೆಕ್‌ಟೈ ಧರಿಸಿದ್ದ ಬಾಲಿವುಡ್‌ನ ಡೈರೆಕ್ಟರ್‌ ಕರಣ್‌ ಜೋಹರ್‌.

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನೋಡಿದಾಕ್ಷಣಾ ವಿಚಿತ್ರವಾಗಿ ಕಾಣಿಸುವ ಬ್ರೈಡೆಡ್‌ ಹೇರ್‌ ನೆಕ್‌ಟೈ (Braided Hair Necktie Fashion) ಬೆಲೆ ಕೇಳಿದರೇ ಖಂಡಿತಾ, ನೀವೂ ಶಾಕ್‌ ಆಗ್ತೀರಾ! ಹೌದು, ಹೈ ಫ್ಯಾಷನ್‌ ಲಿಸ್ಟ್‌ನಲ್ಲಿರುವ ಈ ವಿಚಿತ್ರ ಅದರಲ್ಲೂ ವಿಯರ್ಡ್‌ ಸ್ಟೈಲಿಂಗ್‌ಗೆ ಸೇರುವ ಈ ಜಡೆಯ ರಿಪ್ಲೀಕಾದಂತಿರುವ ಒಂದು ನೆಕ್‌ಟೈ ಕೊಳ್ಳುವ ಬೆಲೆಯಲ್ಲಿ ಸಾಮಾನ್ಯ ವರ್ಗದ ಜನರು ಒಂದಾರು ತಿಂಗಳ ರೇಷನ್‌ ಹಾಗೂ ಇತರೆ ಖರ್ಚು ಭರಿಸಬಹುದಂತೆ. ಹಾಗೆನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅಂದಹಾಗೆ, ಇಟಾಲಿಯನ್‌ ಮೂಲದ ಇಂಟರ್‌ನ್ಯಾಷನಲ್‌ ಬ್ರಾಂಡ್‌ನ ಈ ಟೈ ಈಗಲೂ ಕಾಪಿ ರೈಟ್ಸ್‌ ಉಳಿಸಿಕೊಂಡಿದೆ. ನಾನಾ ಹೇರ್‌ ಕಲರ್‌ ಹೊಂದಿರುವ ಡಿಸೈನ್‌ನಲ್ಲಿ ಸಿದ್ಧಪಡಿಸಿ, ಮಾರಾಟ ಮಾಡುತ್ತಿದೆ. ಜಡೆಯ ಪ್ರತಿರೂಪದಂತಿರುವ ನೆಕ್‌ಟೈ ಬೆಲೆ ಒಂದೂವರೆ ಲಕ್ಷ ರೂ.ಗಳಿಗಿಂತ ಹೆಚ್ಚು ಎನ್ನಲಾಗಿದೆ.

ಹೈ ಫ್ಯಾಷನ್‌ ಪ್ರಿಯರ ನೆಕ್‌ಟೈ

ಪ್ರತಿಷ್ಠಿತ ಬ್ರಾಂಡ್‌ನ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿರುವ ಈ ನೆಕ್‌ಟೈಯನ್ನು ಕಳೆದ ವರ್ಷ ಲಂಡನ್‌, ಮಿಲಾನ್‌ ಹಾಗೂ ಪ್ಯಾರೀಸ್‌ ಫ್ಯಾಷನ್‌ ವೀಕ್‌ನಲ್ಲಿ ಮಾಡೆಲ್‌ಗಳು ಧರಿಸಿ, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಹಾಲಿವುಡ್‌ ಸೆಲೆಬ್ರೆಟಿಗಳು, ಇದನ್ನು ಅವಾರ್ಡ್‌ ಹಾಗೂ ರೆಡ್‌ ಕಾರ್ಪೆಟ್‌ ಸಮಾರಂಭಗಳಲ್ಲಿ ಧರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದರು. ಭಾರತದ ಬೆರಳೆಣಿಕೆ ಫ್ಯಾಷನ್‌ ಶೋಗಳಲ್ಲಿ ಇವು ಕಾಣಿಸಿಕೊಂಡಿತಾದರೂ ಟ್ರೆಂಡಿಯಾಗಲಿಲ್ಲ! ಸೋಷಿಯಲ್‌ ಮೀಡಿಯಾಗಳಲ್ಲಿ, ಈ ನೆಕ್‌ಟೈ ಧರಿಸಿದ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ಗಳು ಫನ್ನಿ & ವಿಯರ್ಡ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿಸಿಕೊಂಡು, ರೀಲ್ಸ್‌ ಮಾಡಿದ್ದರು. ಪೋಸ್‌ ನೀಡಿದ್ದರು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್‌ ಜಾನ್‌.

Braided Hair Necktie Fashion 1

ಹುಬ್ಬೇರಿಸಿದ್ದ ಕರಣ್‌ ಜೋಹರ್‌ ಬ್ರೈಡೆಡ್‌ ಹೇರ್‌ ನೆಕ್‌ಟೈ

ಕಳೆದ ವರ್ಷ ಅವಾರ್ಡ್‌ ಸಮಾರಂಭವೊಂದರಲ್ಲಿ, ಬಾಲಿವುಡ್‌ನ ಸ್ಟಾರ್‌ ಡೈರೆಕ್ಟರ್‌ ಕರಣ್‌ ಜೋಹರ್‌ ಧರಿಸಿ, ಸ್ಥಳೀಯ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ್ದರು. ಚಿತ್ರ-ವಿಚಿತ್ರ ಫ್ಯಾಷನ್‌ ಕ್ರೇಜ್ ಹೊಂದಿರುವ ಕರಣ್‌ ಜೋಹರ್‌ ಅಂದು ಧರಿಸಿದ್ದ, ಬ್ರೈಡೆಡ್‌ ಹೇರ್‌ ನೆಕ್‌ಟೈ ಬೆಲೆ ಸರಿ ಸುಮಾರು 1,93, 669 ರೂ. ಎಂದು ಆಗಲೇ ʼಪಿಂಕ್‌ ವಿಲ್ಲಾʼ ಅಂದಾಜಿಸಿತ್ತು.

Braided Hair Necktie Fashion 2

ಸಾಮಾನ್ಯರನ್ನು ಸೆಳೆಯದ ಫ್ಯಾಷನ್‌

ವಿಪರ್ಯಾದವೆಂದರೆ, ಬ್ರೈಡೆಡ್‌ ಹೇರ್‌ ನೆಕ್‌ಟೈ ಫ್ಯಾಷನ್‌ ಸಾಮಾನ್ಯ ವರ್ಗದ ಫ್ಯಾಷನ್‌ ಪ್ರಿಯರನ್ನು ಸೆಳೆಯಲೇ ಇಲ್ಲ! ಇದುವರೆಗೂ ಎಲ್ಲಿಯೂ ರಿಪ್ಲೀಕಾ ಅಥವಾ ಕಾಪಿ ಕೂಡ ಕಾಣಿಸಿಕೊಳ್ಳಲಿಲ್ಲ! ಎನ್ನುತ್ತಾರೆ ಜಾನ್‌.

ನಿಮಗೆ ಗೊತ್ತೇ !

  • ಕೃತಕ ಕೂದಲಿನಲ್ಲಿ ಸಿದ್ಧಪಡಿಸಿದ ನೆಕ್‌ಟೈ ಬೆಲೆ ಕೊಂಚ ಕಡಿಮೆ.
  • ಒರಿಜಿನಲ್‌ ಕೂದಲಿನಿಂದ ತಯಾರಿಸಿದ ಬ್ರೈಡೆಡ್‌ ಹೇರ್‌ ನೆಕ್‌ಟೈ ಬೆಲೆ ತೀರಾ ದುಬಾರಿ.
  • ಹಾಲಿವುಡ್‌ ಸೆಲೆಬ್ರೆಟಿಗಳ ಪ್ರಯೋಗಾತ್ಮಕ ಫ್ಯಾಷನ್‌ ಡ್ರೆಸ್‌ಕೋಡ್‌ನಲ್ಲಿದೆ.
  • ಸಾಮಾನ್ಯ ಭಾರತೀಯರು ಈ ಫ್ಯಾಷನನ್ನು ಮೂಸಿಯೂ ನೋಡಲಿಲ್ಲ!
  • ಮೊದಮೊದಲಿಗೆ ಈ ಫ್ಯಾಷನ್‌ ನಗೆಪಾಟಲೀಗೀಡಾಗಿತ್ತು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್‌ ಫ್ಯಾಷನ್‌ ಹಂಗಾಮ