ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Doggy Birthday Accessories: ನಿಮ್ಮ ಕ್ಯೂಟ್ ನಾಯಿ ಮರಿಗಳ ಬರ್ತ್‌ಡೇ ಸೆಲೆಬ್ರೇಷನ್‌ಗೂ ಬಂತು ಫ್ಯಾಷೆನಬಲ್ ಆಕ್ಸೆಸರೀಸ್!

Doggy Birthday Accessories: ಮುದ್ದು ಶ್ವಾನಗಳ ಬರ್ತ್ ಡೇ ಸೆಲೆಬ್ರೇಷನ್‌ಗಾಗಿ ಇದೀಗ ವೈವಿಧ್ಯಮಯ ಫ್ಯಾಷೆನಬಲ್ ಆಕ್ಸೆಸರೀಸ್‌ಗಳು ಪೆಟ್ ಶಾಪ್‌ಗಳಿಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಏನೇನೆಲ್ಲಾ ಲಭ್ಯ ಎಂಬುದರ ಬಗ್ಗೆ ಪೆಟ್ ಎಕ್ಸ್‌ಪರ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಮುದ್ದು ನಾಯಿ ಮರಿಗಳ ಬರ್ತ್ ಡೇ ಸೆಲೆಬ್ರೇಷನ್‌ಗಾಗಿ ಇದೀಗ ನಾನಾ ಬಗೆಯ ಫ್ಯಾಷೆನಬಲ್ ಪೆಟ್ ಬರ್ತ್ ಡೇ ಆಕ್ಸೆಸರೀಸ್‌ಗಳು ಪೆಟ್ ಶಾಪ್‌ಗೆ ಎಂಟ್ರಿ ನೀಡಿವೆ.

2/5

ಮುದ್ದು ಮರಿಗಳ ಬರ್ತ್ ಡೇ ಟ್ರೆಂಡ್

ಅಂದಹಾಗೆ, ಇಂದು ಮನೆಯ ಸಾಕು ಪ್ರಾಣಿ ಶ್ವಾನಗಳ ಬರ್ತ್ ಡೇ ಸೆಲೆಬ್ರೇಷನ್ ಮಾಡುವುದು ಸಾಮಾನ್ಯವಾಗಿದೆ. ಮಕ್ಕಳಂತೆ ಇವನ್ನು ಪ್ರೀತಿಸುವ ಪೋಷಕರು, ಅವುಗಳ ಹುಟ್ಟುಹಬ್ಬವನ್ನು ಆಚರಿಸುವುದು, ಅದಕ್ಕೆ ತಕ್ಕಂತೆ ಥೀಮ್ ಹಾಗೂ ಕಾನ್ಸೆಪ್ಟ್‌ಗೆ ಹೊಂದುವಂತೆ ಡೆಕೋರೇಷನ್ ಮಾಡಿ ಸಂಭ್ರಮಿಸುವುದು ಕಾಮನ್ ಆಗಿದೆ. ಇದಕ್ಕೆ ಪೂರಕ ಎಂಬಂತೆ, ವೈವಿಧ್ಯಮಯ ಫ್ಯಾಷೆನಬಲ್ ಆಕ್ಸೆಸರೀಸ್‌ಗಳು ಪೆಟ್ ಶಾಪ್‌ಗಳಿಗೆ ಎಂಟ್ರಿ ನೀಡಿವೆ ಮಾತ್ರವಲ್ಲ, ಆನ್‌ಲೈನ್ ಪೆಟ್ ಶಾಪ್‌ಗಳಲ್ಲೂ ದೊರೆಯುತ್ತಿವೆ. ಎನ್ನುತ್ತಾರೆ ಪೆಟ್ ಎಕ್ಸ್‌ಪರ್ಟ್ ರಾಜ್.

3/5

ಬರ್ತ್‌ಡೇ ಆಕ್ಸೆಸರೀಸ್‌ನಲ್ಲಿ ಏನೇನು ಲಭ್ಯ?

ಡೆಕೋರೇಟಿವ್ ಐಟಂಗಳಲ್ಲಿ, ಬರ್ತ್ ಡೇ ಬಾಂದಾನಾ ಸೆಟ್, ಡಾಗ್ ಹ್ಯಾಪಿ ಬರ್ತ್ ಡೇ ಬ್ಯಾನರ್, ಬರ್ತ್ ಡೇ ಕೇಕ್ ಟಾಪರ್, ಬಂಟಿಂಗ್ ಡೆಕೋರೇಷನ್ ಐಟಂ, ಬರ್ತ್ ಡೇ ಪಾರ್ಟಿ ಥೀಮ್ ಸ್ವಿರ್ಲ್, ಕಟೌಟ್ಸ್, ಪಪ್ಟೇಲ್ ಡಾಗ್ ಸೂಟ್, ಡಾಗ್ ಬೋ ಟೈ, ರಾಯಲ್ ಬೋ, ಟೆಕ್ಸ್ಟ್ ಫಾಯಿಲ್ ಬಲೂನ್ ಸೆಟ್, ಪಪ್ಪಿ ಮಾಸ್ಕ್‌ಗಳು, ಫಂಕಿ ಪಾರ್ಟಿ ಬ್ಯಾನರ್, ಡಾಗ್ ಬೋನ್ ಫಾಯಿಲ್ ಬಲೂನ್ಸ್, ಡಾಗ್ ಥೀಮ್ ಬರ್ತ್ ಡೇ ಬಲೂನ್ಸ್ ದೊರೆಯುತ್ತಿವೆ ಎನ್ನುತ್ತಾರೆ ಪೆಟ್ ಪ್ರಿಯರು.

4/5

ಆನ್‌ಲೈನ್‌ನಲ್ಲೂ ಮಾರಾಟ

ಅಲ್ಲದೇ, ಬರ್ತ್ ಡೇ ಬಾಯ್ ಸ್ಕಾರ್ಫ್, ಡಾಗ್ ಫ್ರೆಂಡ್ಲಿ ಪ್ ಕೇಕ್ಸ್, ಡಾಗ್ಗಿ ಐಸ್ಕ್ರೀಮ್ಸ್, ಡಾಗ್ಗಿ ಫೋಟೋ ಬೂತ್, ಡಾಗ್ ಟಾಯ್ಸ್, ಬೈಟ್ ಸೈಝ್ ಟ್ರೀಟ್ಸ್, ಕಾಲರ್ ಆಕ್ಸೆಸರೀಸ್ ಸೇರಿದಂತೆ ನಾನಾ ಬಗೆಯವು ಆನ್‌ಲೈನ್ ಪೆಟ್ ಶಾಪ್‌ಗಳಲ್ಲೂ ವೈವಿಧ್ಯಮಯ ಡಿಸೈನ್‌ನಲ್ಲಿ ದೊರೆಯುತ್ತಿವೆ. ಆಯಾ ಡಿಸೈನ್‌ಗೆ ತಕ್ಕಂತೆ ದರ ನಿಗದಿಯಾಗಿರುತ್ತದೆ ಎನ್ನುತ್ತಾರೆ ಪೆಟ್ ಶಾಪ್ ಮಾಲೀಕರು.

5/5

ಆಕ್ಸೆಸರೀಸ್ ಆಯ್ಕೆ

  • ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಫ್ಯಾಷೆನಬಲ್ ಆಕ್ಸೆಸರೀಸ್ ಲಭ್ಯ.
  • ಮುಂದೆಯೂ ಬಳಕೆಯಾಗಬಹುದಾದಂತವನ್ನು ಖರೀದಿಸಿ.
  • ಶ್ವಾನಕ್ಕೆ ಪ್ರೀತಿ ಪಾತ್ರವಾಗುವಂತವನ್ನು ಆಯ್ಕೆ ಮಾಡಿ.
  • ಕಂಫರ್ಟಬಲ್ ಫ್ಯಾಷನ್‌ವೇರ್ ಸೆಲೆಕ್ಟ್ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author